ಉಡುಪಿ ಜಿಲ್ಲೆಯ ಕಾರ್ಕಳದ ಸಾಣೂರು ಸರಕಾರಿ ಪದವಿ ಪೂರ್ವ ಕಾಲೇಜಿನ ದಿ. ಡಾ ಉದಯ ಕುಮಾರ್ ಹೆಗ್ಡೆ ವೇದಿಕೆಯಲ್ಲಿ ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಯಮಿ ಬರೋಡ ಶಶಿಧರ್ ಶೆಟ್ಟಿರವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜ್ಞಾನಸುಧ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ ಸುಧಾಕರ್ ಶೆಟ್ಟಿ, ಸಮಾಜ ಸೇವೆಯೇ ಜೀವಾಳವೆಂದು ಭಾವಿಸಿ ತನ್ನ ದುಡಿಮೆಯನ್ನು ಸಮಾಜದ ಬಡವರ್ಗದ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಅವಿನಾಶ್ ಶೆಟ್ಟಿಯವರಂತಹ ಯುವಕರು ಸಮಾಜಕ್ಕೆ ಆದರ್ಶ ಅವರ ನಿಸ್ವಾರ್ಥ ಸೇವೆ ನಿಜಕ್ಕೂ ಸ್ಲಾಘನೀಯ. ಅವರ ದುಡಿಮೆಯಲ್ಲಿ ಅವರ ಬೆವರು ಇದೆ. ವಿದ್ಯಾರ್ಥಿಗಳೇ ಸ್ವಾಭಿಮಾನಿಗಳಾಗಿ ಬದುಕಿ, ನಿಮಗೆ ಸಿಕ್ಕಿದ ಏನು ಪ್ರೋತ್ಸಾಹ ಇದೆಯೋ ಅದು ನೀವು ಬೆಳೆದು ಬೇರೆಯವರಿಗೆ ಸಹಾಯ ಹಸ್ತ ನೀಡುವಂತಾಗಬೇಕು ಎಂದು ಹೇಳಿದರು.
ಯಾರು ದೀನ ದಲಿತರ ಬಗ್ಗೆ ಕಾಳಜಿ, ಸೇವೆ ಮಾಡುತ್ತಾರೋ ಅವರು ದೈವತ್ವದ ಶಕ್ತಿ ಬರುತ್ತದೆ. ಇಂತಹ ಯುವಕರು ಕೇವಲ ಕುಟುಂಬದ ಆಸ್ತಿಯಲ್ಲ ಸಮಾಜದ ಆಸ್ತಿ ಎಂದರು.
ಕಾರ್ಕಳ ಟೈಗರ್ಸ್ ಬೋಳ ಪ್ರಸಾದ್ ಕಾಮತ್, ಪಿ ಡಬ್ಲ್ಯೂಡಿ ಸೋಮಶೇಖರ್, ಉಡುಪಿ ಜಿಲ್ಲಾ ಬಜರಂಗದಳ ಸಂಚಾಲಕ ಸುನಿಲ್ ಕೆ ಆರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಶೋಕ್ ಶೆಟ್ಟಿ, ಸಾಣೂರು ಯುವಕ ಮಂಡಲ ಅಧ್ಯಕ್ಷಪ್ರಸಾದ್ ಶೆಟ್ಟಿ, ಜಿಲ್ಲಾ ಶಿಕ್ಷಕ ಪ್ರಶಸ್ತಿ ವಿಜೇತ ನಿವೃತ್ತ ಮುಖ್ಯೋಪಾಧ್ಯಾಯ ವಸಂತ್, ಉಪಸ್ಥಿತರಿದ್ದರು ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ, ಪುರಸಭಾ ಸದಸ್ಯ ಅವಿನಾಶ್ ಜಿ ಶೆಟ್ಟಿಯವರ ನೇತೃತ್ವದಲ್ಲಿ ಪಿಯುಸಿಯಲ್ಲಿ 90%ಕಿಂತ ಹೆಚ್ಚು ಅಂಕ ಗಳಿಸಿದ ಬಡ ಸರಕಾರಿ ಕಾಲೇಜಿನ 100 ವಿದ್ಯಾರ್ಥಿಗಳಿಗೆ ಸುಮಾರು 10 ಲಕ್ಷ ರೂಪಾಯಿ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.
ಇದನ್ನು ಓದಿದ್ದೀರಾ? ಬೆಳಗಾವಿ | ಒಳಮೀಸಲಾತಿ ಜಾರಿಗೆ ರಾಜ್ಯ ಸರ್ಕಾರದಿಂದ ಮೀನಮೇಷ: ದಲಿತ ಸಂಘರ್ಷ ಸಮಿತಿ ಆಕ್ರೋಶ
ರಾಜೇಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು. ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಸುಜಾತ ಕಾಮತ್ ಧನ್ಯವಾದವಿತ್ತರು. ಈ ಸಂದರ್ಭದಲ್ಲಿ ಅವಿನಾಶ್ ಶೆಟ್ಟಿಯವರನ್ನು ಸಾಣೂರು ಪದವಿ ಪೂರ್ವ ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.
