ಜಿಲ್ಲಾಧಿಕಾರಿ ಕಛೇರಿ ಪಕ್ಕದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ 25ಲಕ್ಷಕ್ಕೂ ಹೆಚ್ಚಿನ ವೆಚ್ಚದಲ್ಲಿ ನಿರ್ಮಾಣವಾದ ಸಾರ್ವಜನಿಕ ಶೌಚಾಲಯವು ಮುಚ್ಚಿ ವರ್ಷಗಳೇ ಕಳೆದಿದ್ದವು. ಅದರ ಪರಿಣಾಮ ದಿನನಿತ್ಯ ನಾಗರಿಕ ಜನರಿಗೆ ತುಂಬಾ ತೊಂದರೆ ಉಂಟಾಗುತ್ತಿತ್ತು.
ಟೆಂಡರ್ ಪಡೆದ ಗುತ್ತಿಗೆದಾರರ ನಿರ್ವಹಣೆಯ ಕೊರತೆಯಿಂದ ಪಾಲುಬಿದ್ದ ಶೌಚಾಲಯವು ಉಪಯೋಗಕ್ಕೆ ಬಾರದಿರುವುದನ್ನು ಕರ್ನಾಟಕ ಜನಶಕ್ತಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು ಈ ದಿನ.ಕಾಮ್ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಸೆ.19ರಂದು ಈ ದಿನ.ಕಾಮ್ ‘ಮಂಡ್ಯ | ನಗರಸಭೆಯ ನಿರ್ಲಕ್ಷ್ಯಕ್ಕೆ ಮುಚ್ಚಿದ ಶೌಚಾಲಯ; ಸಾರ್ವಜನಿಕರ ಪರದಾಟ‘ ಎಂಬ ಶೀರ್ಷಿಕೆಯಡಿಯಲ್ಲಿ ವರದಿ ಪ್ರಕಟಿಸಿತ್ತು.
ಈ ದಿನ.ಕಾಮ್ ವರದಿ ಮಾಡಿದ ನಂತರ ಎಚ್ಚೆತ್ತುಕೊಂಡ ನಗರಸಭೆಯ ಅಧಿಕಾರಿಗಳು, ಶೌಚಾಲಯಕ್ಕೆ ಬೇಕಾದ ಸೌಲಭ್ಯಗಳಾದ ವಿದ್ಯುತ್, ನೀರು, ನಲ್ಲಿಗಳು ಹಾಗೂ ಸ್ವಚ್ಛತೆಯು ಸೇರಿದಂತೆ ಕೊರೆತೆಗಳನೆಲ್ಲ ತುರ್ತಾಗಿ ಸರಿಪಡಿಸಿ ಸಾರ್ವಜನಿಕರಿಗೆ ಉಪಯೋಗವಾಗುವಂತೆ ದುರಸ್ತಿ ಮಾಡಲು ಮುಂದಾಗಿದ್ದು, ಎಲ್ಲ ಕೆಲಸಗಳನ್ನು ಪ್ರಾರಂಭಿಸಿದ್ದಾರೆ.

ನಗರಸಭೆ ಪರಿಸರ ಕಾರ್ಯಪಾಲಕ ಅಭಿಯಂತರ ರುದ್ರೇಗೌಡ, ಆರೋಗ್ಯ ಅಧಿಕಾರಿ ಚೆಲುವರಾಜು ಮತ್ತು ಮೇಸ್ತ್ರಿ ರಾಜು ಹಾಗೂ ನಗರಸಭೆ ಪೌರಸೇವಕರ ಶ್ರಮದಿಂದ ಸಾರ್ವಜನಿಕರಿಗೆ ಶೌಚಾಲಯ ಕೊರತೆಗೆ ಇಂದು ಮುಕ್ತಿ ದೊರಕಿದೆ.
ಇದನ್ನು ಓದಿದ್ದೀರಾ? ಮಂಡ್ಯ | ಮಹಿಳೆಯರಿಗೆ ಸಮಾನತೆ ನೀಡಿದ ನಾಡುಗಳು ಮುಂಚೂಣಿಯಲ್ಲಿವೆ: ನ್ಯಾ. ಬಿ ಟಿ ವಿಶ್ವನಾಥ್
ಇನ್ನು ಮುಂದಾದರೂ ಸಾರ್ವಜನಿಕರಿಗೆ ಸಮಸ್ಯೆಯಾಗದೆ ಸದುಪಯೋಗವಾಗಲಿ ಎಂದು ಈ ದಿನ.ಕಾಮ್‌ನ ಆಶಯ. ವರದಿ ಮಾಡುವ ಮೂಲಕ ಅಧಿಕಾರಿಗಳ ಗಮನಕ್ಕೆ ತಂದದ್ದಕ್ಕೆ ಕರ್ನಾಟಕ ಜನಶಕ್ತಿ ಸಂಘಟನೆಯ ಸಿದ್ದರಾಜು ಧನ್ಯವಾದ ಸಲ್ಲಿಸಿದ್ದಾರೆ.
