ಕ್ಷೌರಿಕನೋರ್ವ ಮನೆಯೊಂದರಲ್ಲಿ ಬೆಳ್ಳಂಬೆಳಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರ ಠಾಣಾ ವ್ಯಾಪ್ತಿಯ ಪ್ರೇಮ ನಗರದಲ್ಲಿ ನಡೆದಿದೆ.
ಚಿಂತಾಮಣಿ ನಗರದ ಪ್ರೇಮ್ ನಗರದ ನಿವಾಸಿಯಾದ ವೆಂಕಟರಮಣಪ್ಪ ಎಂಬುವವರ ಪುತ್ರ ರಮೇಶ್(38) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ.
ರಮೇಶ್ ಇತ್ತೀಚೆಗಷ್ಟೇ ತಮ್ಮ ನಿವೇಶನ ಮಾರಾಟ ಮಾಡಿ ಬೆಂಗಳೂರಿನಲ್ಲಿ ಸ್ವಂತ ಸೆಲೂನ್ ಶಾಪ್ ತೆರೆದು, ಸ್ವಂತ ಉದ್ಯಮ ಕಟ್ಟಿಕೊಂಡಿದ್ದರು. ಕೆಲ ದಿನಗಳ ಹಿಂದೆ ಚಿಂತಾಮಣಿಗೆ ಬಂದಿದ್ದರು ಎನ್ನಲಾಗಿದೆ.
ರಮೇಶ ಸಾಲಭಾದೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದು, ಪೊಲೀಸರ ತನಿಖೆಯಿಂದ ಸತ್ಯಾಸತ್ಯತೆ ಹೊರಬರಬೇಕಿದೆ.
ಈ ಸುದ್ದಿ ಓದಿದ್ದೀರಾ? ಕೋಲಾರ | ನಕಲಿ ದಾಖಲೆ ಸೃಷ್ಟಿಸಿ ದಲಿತರ ಭೂಕಬಳಿಕೆಗೆ ಯತ್ನ; ಸ್ಥಳೀಯರ ಆಕ್ರೋಶ
ಮಾಹಿತಿ ಪಡೆದ ಚಿಂತಾಮಣಿ ನಗರ ಠಾಣೆ ಆರಕ್ಷಕ ನಿರೀಕ್ಷಕರಾದ ವಿಜಿ ಕುಮಾರ್, ಸಬ್ ಇನ್ಸ್‌ಪೆಕ್ಟರ್ ನಾರಾಯಣಸ್ವಾಮಿ, ಶ್ವಾನದಳದ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ವರ್ಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಾವಿನ ಕುರಿತು ತನಿಖೆ ಆರಂಭಿಸಿದ್ದಾರೆ.
