ಮೈಸೂರು ಹುಲಿ ಎಂದೇ ಹೆಸರಾಗಿರುವ ಟಿಪ್ಪು ಸುಲ್ತಾನ್ ವಿರುದ್ಧ ಅಶ್ಲೀಲ ಪದಗಳಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುರುವಾರ, ಮುಧೋಳದಲ್ಲಿ ನಡೆದ ಗಣೇಶ ವಿಸರ್ಜನಾ ಕಾರ್ಯಕ್ರಮದಲ್ಲಿ ಯತ್ನಾಳ್ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಯತ್ನಾಳ್, “ನೀವು ಇದನ್ನು ನಿಮ್ಮ ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಬಹುದು. ಟಿಪ್ಪು ಸುಲ್ತಾನ್ ಹರಂಖೋರ್ ಮತ್ತು ಬಿಟಾರ್ಡ್, ಔರಂಗಜೇಬ್ ಹರಂಖೋರ್ ಮತ್ತು ಬಿತಾರ್ಡ್. ಟಿಪ್ಪು ಸುಲ್ತಾನ್ ಲಕ್ಷಾಂತರ ಹಿಂದುಗಳನ್ನು ಕೊಂದ. ನನ್ನ ವಿರುದ್ಧ ನಿಮಗೆ ಬೇಕಾದಷ್ಟು ಎಫ್‌ಐಆರ್‌ಗಳನ್ನು ದಾಖಲಿಸಿ. ಈಗಾಗಲೇ ನನ್ನ ವಿರುದ್ಧ 36-37 ಎಫ್‌ಐಆರ್‌ಗಳು ದಾಖಲಾಗಿವೆ. ಮುಧೋಳದಲ್ಲಿ ಇನ್ನೂ ನಾಲ್ಕೈದು ಎಫ್‌ಐಆರ್‌ಗಳನ್ನು ದಾಖಲಿಸಹುದು” ಎಂದು ಪ್ರಚೋದನಾರಿ ಮತ್ತು ಕೋಮುದ್ವೇಷದ ಹೇಳಿಕೆ ನೀಡಿದ್ದಾರೆ.
ಯತ್ನಾಳ್ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿದ್ದು, ಐಪಿಸಿ ಸೆಕ್ಷನ್ 264/24, 16(1)a, 353(2)BNS ಅಡಿ ಎಫ್‌ಐಆರ್ ದಾಖಲಿಸಿದ್ದಾರೆ.
“ಗಣೇಶ ವಿಸರ್ಜನೆ ವೇಳೆ ಯತ್ನಾಳ್ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ. ಅವರ ವಿರುದ್ಧ ಸು ಮೊಟೊ ಪ್ರಕರಣ ದಾಖಲಿಸಿದ್ದೇವೆ. ಮುಂದಿನ ಕ್ರಮ ಕೈಗೊಳ್ಳುತ್ತೇವೆ” ಎಂಧು ಬಾಗಲಕೋಟೆ ಎಸ್‌ಪಿ ಅಮರನಾಥರೆಡ್ಡಿ ಹೇಳಿದ್ದಾರೆ.