ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಕೆಎಸ್ಎಸ್ ಕಾಲೇಜಿನಲ್ಲಿ ಎಸ್ಎಫ್ಐ ನ ರಾಜ್ಯ ಸಮ್ಮೇಳನದ ಪೋಸ್ಟರ್ ಅನ್ನು ಸಿಐಟಿಯು ಕಾರ್ಮಿಕ ಸಂಘಟನೆ ಮುಖಂಡ ಮೈಬು ಹವಾಲ್ದಾರ್ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಎಸ್ಎಫ್ಐ ರಾಜ್ಯ ಪದಾಧಿಕಾರಿ ಗಣೇಶ ರಾಠೋಡ್ ಮಾತನಾಡಿ, ಸಾರ್ವತ್ರಿಕ ಶಿಕ್ಷಣ, ಸಮಾನತೆ, ಸೌಹಾರ್ದತೆಗಾಗಿ ಎಂಬ ಆಶಯದೊಂದಿಗೆ ಶಿಕ್ಷಣದ ಪ್ರಜಾಪ್ರಭುತ್ವೀಕರಣ, ಶಿಕ್ಷಣದ ವಿಕೇಂದ್ರೀಕರಣ, ಶಿಕ್ಷಣದ ಧರ್ಮನಿರಪೇಕ್ಷಕ್ಕಾಗಿ, ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಗಾಗಿ ಒತ್ತಾಯಿಸಿ ಎಸ್ಎಫ್ಐ 16ನೇ ರಾಜ್ಯ ಸಮ್ಮೇಳನವನ್ನು ಸೆ. 26ರಿಂದ 28ರವರೆಗೆ ಚಿಕ್ಕಬಳ್ಳಾಪುರದಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಸಂಘಟನೆಯು ಕಳೆದ ಸಮ್ಮೇಳನದಿಂದ ಈ ಸಮ್ಮೇಳನದ ತನಕ ಏನೆಲ್ಲಾ ಗುರಿಗಳನ್ನು ತಲುಪಿದೆವು, ಇನ್ನೂ ತಲುಪಬೇಕಾದ ಗುರಿಗಳೇನು ಎಂಬ ಬಗ್ಗೆ ಸಾರ್ವತ್ರಿಕ ಸಮಾನತೆ ಶಿಕ್ಷಣಕ್ಕಾಗಿ ನಡೆಯುವ ಹೋರಾಟ ಮತ್ತಷ್ಟು ಬಲಿಷ್ಠಗೊಳಿಸಲು ಏನು ಮಾಡಬೇಕೆಂದು ಚರ್ಚಿಸಿ, ವಿಮರ್ಶೆ ಮಾಡಿಕೊಂಡು ಹೊಸ ನಾಯಕತ್ವವನ್ನು ಆಯ್ಕೆ ಮಾಡಿಕೊಂಡು ಮುನ್ನಡೆಯಲು, ರಾಷ್ಟ್ರ ಮತ್ತು ರಾಜ್ಯದ ಶೈಕ್ಷಣಿಕ ಪರಿಸ್ಥಿತಿ ಬಗ್ಗೆ ಚರ್ಚಿಸಿ ನಿರ್ಣಯ ತೆಗೆದುಕೊಂಡು ಜಾರಿ ಮಾಡುವ ಗುರಿ ಹೊಂದಿರುತ್ತಾರೆ ಹೀಗಾಗಿ ಈ ಸಮ್ಮೇಳನ ಉನ್ನತ ವೇದಿಕೆಯಾಗಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಬಿ ಎನ್ ಗೌಡ್ರ ಮಾತನಾಡಿ, ಈ ಸಮ್ಮೇಳನ ಯಶಸ್ವಿಯಾಗಲಿ ಎಂದು ಹಾರೈಸಿದರು. ಜಿಲ್ಲಾ ಉಪಾಧ್ಯಕ್ಷ ಚಂದ್ರು ರಾಠೋಡ ಮಾತನಾಡಿ, ರಾಜ್ಯ ಸಮ್ಮೇಳನಕ್ಕೂ ಮುನ್ನ ತಾಲೂಕು ಹಾಗೂ ಜಿಲ್ಲಾ ಸಮ್ಮೇಳನಗಳು ನಡೆದು ಅಲ್ಲಿ ಆಯ್ಕೆಯಾದ ವಿದ್ಯಾರ್ಥಿ ಪ್ರತಿನಿಧಿಗಳು ರಾಜ್ಯ ಸಮ್ಮೇಳನಕ್ಕೆ ತೆರಳುತ್ತಾರೆ ನಮ್ಮ ಗದಗ ಜಿಲ್ಲೆಯಿಂದಲೂ ವಿದ್ಯಾರ್ಥಿ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.
ಇದನ್ನು ಓದಿದ್ದೀರಾ? ಗದಗ | ಸೆ. 22ರಂದು ಜಿಲ್ಲಾಮಟ್ಟದ ಲಿಂಗಾಯತ ಸಮಾವೇಶ
ಈ ಸಂದರ್ಭದಲ್ಲಿ ಎಸ್ಎಫ್ಐ ನ ತಾಲೂಕು ಅಧ್ಯಕ್ಷ ಅನಿಲ್ ರಾಠೋಡ, ಪದಾಧಿಕಾರಿ ಶರಣು ಎಂ, ಬಸವರಾಜ, ಸದೀಪ್ ಹುಬ್ಬಳ್ಳಿ, ಪ್ರದೀಪ್ ಎಂ, ಸನೀಲ್, ಮಾಂತೇಶ, ಮುಪ್ಪಯ್ಯ ಬೆಳವನಕಿ, ಬಸು, ಅಂದಪ್ಪ ಹಡಪದ, ಪ್ರದೀಪ್ ಮೇಟಿ, ಪ್ರವೀಣ, ಯಲ್ಲಪ್ಪ ಡಂಬಳೇ, ಯವನೂರು ಚೂರಿ, ಶ್ರೀಧರ್ ಕುರಿ, ರಕ್ಷಿತಾ, ಶಂಕ್ರಮ್ಮ, ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.
