ಮಹಾರಾಷ್ಟ್ರದಲ್ಲಿ ಮೋದಿ ಗಣೇಶನಿಗೆ ಗಂಟುಬಿದ್ದಿದ್ದೇಕೆ?

Date:

Advertisements

ಮೊದಲಿಗೆ ಬಾಲಗಂಗಾಧರ ತಿಲಕ್ ಗಣೇಶೋತ್ಸವಕ್ಕೆ ಅಡಿಗಲ್ಲು ಹಾಕಿದರು. ಆ ನಂತರ ಅದು ಆರ್‌ಎಸ್‌ಎಸ್ ಆಚರಣೆಗಳಲ್ಲಿ ಸೇರಿಹೋಯಿತು. ಬಿಜೆಪಿ ಬಂದ ಮೇಲೆ, ರಾಜಕೀಯಕ್ಕೆ ಧರ್ಮ ಪ್ರವೇಶವಾಯಿತು. ನಂತರ ಸಾರ್ವಜನಿಕ ಗಣೇಶೋತ್ಸವ ಕೋಮುವಾದದ ರೂಪ ಪಡೆಯಿತು. ಬಿಜೆಪಿಯ ಮತಬ್ಯಾಂಕ್‌ಗಾಗಿ ಗಣೇಶ ಕೂಡ ಗಲಭೆಗಳಿಗೆ ಆಹುತಿಯಾದ.

‘ನಾನು ಗಣೇಶ ಪೂಜೆಗೆ ಹೋಗಿದ್ದನ್ನು ಓಲೈಕೆ ರಾಜಕಾರಣ ಎಂದು ಟೀಕಿಸಿದ ಕಾಂಗ್ರೆಸ್, ಗಣೇಶ ಪೂಜೆಯನ್ನೂ ದ್ವೇಷಿಸುತ್ತದೆ. ಕರ್ನಾಟಕದಲ್ಲಿ ಗಣಪತಿ ಬಪ್ಪಾನನ್ನೂ ಕಂಬಿಗಳ ಹಿಂದೆ ಇರಿಸುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿಯವರು ಮಹಾರಾಷ್ಟ್ರದ ವರ್ಧಾದಲ್ಲಿ ಶುಕ್ರವಾರ ಪುನರುಚ್ಚರಿಸಿದ್ದಾರೆ. ಬೆಂಗಳೂರಿನ ಟೌನ್‌ಹಾಲ್ ಬಳಿ ಹಿಂದುತ್ವವಾದಿಗಳು ಪ್ರತಿಭಟನೆಗೆ ತಂದಿದ್ದ ಗಣೇಶ ವಿಗ್ರಹವನ್ನು ಪೊಲೀಸ್ ವಾಹನದಲ್ಲಿ ಒಯ್ದ ಘಟನೆಯನ್ನು ನಾಗಮಂಗಲದಲ್ಲಿ ನಡೆದದ್ದು ಎಂದು ಅವರು ಮಹಾರಾಷ್ಟ್ರದಲ್ಲಿಯೂ ಹೇಳಿದರು.

ಪ್ರಧಾನಿ ಹುದ್ದೆ ಎನ್ನುವುದು ಗೌರವಾನ್ವಿತ, ಜವಾಬ್ದಾರಿಯುತ ಸ್ಥಾನ. ದೇಶದ ಪ್ರಜೆಗಳನ್ನು ಸಮಾನವಾಗಿ ಕಾಣುವ ಸ್ಥಾನ. ಅಂತಹ ಸ್ಥಾನದಲ್ಲಿರುವ ವ್ಯಕ್ತಿ ಯಾವುದಾದರೂ ಸಭೆ, ಸಮಾರಂಭ, ಸಾರ್ವಜನಿಕ ಸಮಾವೇಶಕ್ಕೆ ಹೋಗುತ್ತಾರೆ ಎಂದರೆ, ಇಡೀ ದೇಶದ ಸುದ್ದಿ ಮಾಧ್ಯಮಗಳು ಅಲ್ಲಿರುತ್ತವೆ. ಪತ್ರಕರ್ತರು ಮೈಯೆಲ್ಲ ಕಣ್ಣಾಗಿ ಅವರ ಮಾತುಗಳನ್ನು ಆಲಿಸಿ, ಪ್ರಕಟಿಸುತ್ತಾರೆ. ಆ ಸುದ್ದಿ ಕ್ಷಣಾರ್ಧದಲ್ಲಿ ಇಡೀ ಪ್ರಚಂಪಕ್ಕೆ ತಲುಪುತ್ತದೆ. ಜನರ ಮೇಲೆ ಪ್ರಭಾವ ಬೀರುತ್ತವೆ. ಪರಿಣಾಮವನ್ನೂ ಉಂಟುಮಾಡುತ್ತದೆ.
ಪ್ರಧಾನಿ ಮೋದಿಯವರಿಗೆ ಇದು ಗೊತ್ತಿರುವುದರಿಂದಲೇ, ಆರ್ಎಸ್ಎಸ್ ಅಜೆಂಡವಾದ ದೇವರು-ಧರ್ಮವನ್ನು ಮುನ್ನೆಲೆಗೆ ತರುವ, ಅದು ಬಿಜೆಪಿಗೆ ರಾಜಕೀಯವಾಗಿ ಅನುಕೂಲವಾಗುವ ಮಾತುಗಳನ್ನು ಆಡುತ್ತಾರೆ. ಭಾವೈಕ್ಯತೆಗೆ, ಸಹಬಾಳ್ವೆಗೆ, ಸಹೋದರತೆಗೆ ಧಕ್ಕೆ ತರುವ, ದ್ವೇಷಾಸೂಯೆ ಬಿತ್ತುವ ಮಾತುಗಳನ್ನೇ ಹೆಚ್ಚು ಮಾಡುತ್ತಾರೆ.

Advertisements

ಕರ್ನಾಟಕದ ಕಾಂಗ್ರೆಸ್ ಸರ್ಕಾರ ಗಣೇಶ ಪೂಜೆಯನ್ನು ದ್ವೇಷಿಸುತ್ತದೆ, ಗಣೇಶನನ್ನು ಕಂಬಿಗಳ ಹಿಂದೆ ಕೂರಿಸುತ್ತದೆ ಎಂದು ಮೊದಲಿಗೆ ಹರಿಯಾಣದಲ್ಲಿ ಹೇಳಿದರು, ಈಗ ಮಹಾರಾಷ್ಟ್ರದಲ್ಲಿ ಹೇಳಿದ್ದಾರೆ.

ಅಸಲಿಗೆ, ಕರ್ನಾಟಕ ಸರ್ಕಾರ ಎಲ್ಲೂ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ, ಪೂಜೆಗೆ ಅಡ್ಡಿಪಡಿಸಿಲ್ಲ. ಸೂಕ್ತ ರಕ್ಷಣೆ ಒದಗಿಸಿದೆ. ನಾಗಮಂಗಲದಲ್ಲಿ ಗಣೇಶೋತ್ಸವದ ಸಂದರ್ಭದಲ್ಲಿ ಗಲಾಟೆಯಾಯಿತು. ಕೋಮು ಗಲಭೆಯ ರೂಪ ಪಡೆಯಿತು. ಆ ಬೆಂಕಿಯಲ್ಲಿ ಮತ ಬೆಳೆ ತೆಗೆಯಲು ಬಿಜೆಪಿ ಯತ್ನಿಸಿತು. ಬೆಂಗಳೂರಿನಲ್ಲಿ ಸಂಘಪರಿವಾರದ ಕೆಲವರು ಗಣೇಶ ಮೂರ್ತಿಯನ್ನು ಹಿಡಿದುಕೊಂಡು ಪ್ರತಿಭಟನೆಗೆ ಇಳಿದರು. ಮೊದಲಿಗೆ ಆ ಪ್ರತಿಭಟನೆಗೆ ಅವರು ಅನುಮತಿ ಪಡೆದಿರಲಿಲ್ಲ. ಎರಡನೆಯದು ಟೌನ್ ಹಾಲ್ ಬಳಿ ಪ್ರತಿಭಟಿಸುವಂತಿಲ್ಲ. ಹೀಗಿರುವಾಗ ಪೊಲೀಸರು ಪ್ರತಿಭಟನಾಕಾರರಿಗೆ ತಿಳಿ ಹೇಳಿ, ಗಣೇಶ ಮೂರ್ತಿಯನ್ನು ಅವರಿಂದ ಪಡೆದರು. ಮೂರ್ತಿಗೆ ತೊಂದರೆಯಾಗಬಾರದೆಂದು ತಮ್ಮ ವಾಹನದಲ್ಲಿ ಇರಿಸಲು ತೆಗೆದುಕೊಂಡು ಹೋದರು.

ಆಗಿದ್ದು ಇಷ್ಟೇ. ಪೊಲೀಸರ ಕೈಯಲ್ಲಿ ಗಣೇಶ ಮೂರ್ತಿ ಇರುವುದರ ಫೋಟೋ ತೆಗೆದ ಸಂಘ ಪರಿವಾರದವರು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು. ಹಿಂದು ಮುಂದು ನೋಡದ ಬಿಜೆಪಿ ನಾಯಕರು ಅದನ್ನು ನಾಗಮಂಗಲದಲ್ಲಿ ನಡೆದ ಪ್ರತಿಭಟನೆ ಎಂದರು. ಅದನ್ನೇ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಂಡ್ಯದಲ್ಲಿ ನಡೆದದ್ದು ಎಂದು ಹಂಚಿದರು. ಬಿಜೆಪಿ ಐಟಿ ಸೆಲ್, ನಾಯಕರು, ಸಚಿವರು ಹಂಚಿದ ಮೇಲೆ ಅದು ಸತ್ಯ ಎಂದು ನಂಬಿದ ಪ್ರಧಾನಿ ನರೇಂದ್ರ ಮೋದಿಯವರು, ಹರಿಯಾಣದ ಚುನಾವಣಾ ಭಾಷಣದಲ್ಲಿ ಹಾಗೂ ಮೊನ್ನೆ ಮಹಾರಾಷ್ಟ್ರದಲ್ಲಿ ಸುಳ್ಳು ಸುದ್ದಿಯನ್ನು ಸತ್ಯವೆಂದು ಸಾರಿದರು. ಕರ್ನಾಟಕ ಸರ್ಕಾರವನ್ನು ಹಿಂದೂ ದ್ರೋಹಿ ಎಂದು ನೇಣಿಗೇರಿಸಿದರು.

ಏಕೆಂದರೆ, ಗಣೇಶ ಹಾಗೂ ಗಣೇಶ ಹಬ್ಬ ಭಾರತೀಯರ ಭಾವನೆಯೊಂದಿಗೆ ಬೆರೆತುಹೋಗಿದೆ. ಗಣೇಶ ಹಬ್ಬವನ್ನು ಆಚರಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಮೊದಲಿಗೆ ಬಾಲಗಂಗಾಧರ ತಿಲಕ್ ಗಣೇಶೋತ್ಸವಕ್ಕೆ ಅಡಿಗಲ್ಲು ಹಾಕಿದರು. ಆ ನಂತರ ಅದು ಆರ್‌ಎಸ್‌ಎಸ್ ಆಚರಣೆಗಳಲ್ಲಿ ಸೇರಿಹೋಯಿತು. ಬಿಜೆಪಿ ಬಂದ ಮೇಲೆ, ರಾಜಕೀಯಕ್ಕೆ ಧರ್ಮ ಪ್ರವೇಶವಾಯಿತು. ನಂತರ ಸಾರ್ವಜನಿಕ ಗಣೇಶೋತ್ಸವ ಕೋಮುವಾದದ ರೂಪ ಪಡೆಯಿತು. ಅದರಲ್ಲಿ ಅವರ ಮತಬ್ಯಾಂಕ್ ಇರುವುದರಿಂದ ಗಣೇಶ ಕೂಡ ಗಲಭೆಗಳಿಗೆ ಆಹುತಿಯಾದ.

ಈಗ ಹರಿಯಾಣದಲ್ಲಿ ಚುನಾವಣೆ ನಡೆಯುತ್ತಿದೆ, ಮಹಾರಾಷ್ಟ್ರದಲ್ಲಿ ನಡೆಯುವುದಿದೆ. ಮಹಾರಾಷ್ಟ್ರದಲ್ಲಿ ಗಣೇಶೋತ್ಸವಕ್ಕೆ ತನ್ನದೇ ಆದ ಇತಿಹಾಸವಿದೆ. ಬಹಳ ವಿಜೃಂಭಣೆಯಿಂದ ಆಚರಿಸುವ ಗಣೇಶೋತ್ಸವವನ್ನು ಅಲ್ಲಿಯ ಜನ ತಮ್ಮ ಬದುಕಿನ ಭಾಗವಾಗಿ ನೋಡುತ್ತಾರೆ. ಕೊಂಚ ಅತಿರೇಕದಿಂದಲೇ ಆಚರಿಸುತ್ತಾರೆ. ಅಂತಹ ಗಣೇಶೋತ್ಸವದ ಲಾಭ ಪಡೆಯದೇ ಇರುತ್ತಾರೆಯೇ ಪ್ರಧಾನಿ ಮೋದಿ? ದೇವರನ್ನೇ ಮುಂದಿಟ್ಟು ‘ನಾನು ಗಣೇಶ ಪೂಜೆಗೆ ಹೋಗಿದ್ದನ್ನು ಓಲೈಕೆ ರಾಜಕಾರಣ ಎನ್ನುತ್ತದೆ. ಸುಳ್ಳು ಮತ್ತು ವಂಚನೆ ಕಾಂಗ್ರೆಸ್ನ ಹಾಲ್ಮಾರ್ಕ್ ಆಗಿದೆ’ ಎಂದರು. ಪ್ರಧಾನಿ ಮೋದಿ ಮಾತನ್ನು ನಂಬುವ ಜನ, ಕಾಂಗ್ರೆಸ್ ವಿರುದ್ಧ ನಿಲುವು ತಾಳುತ್ತಾರೆ, ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುತ್ತಾರೆ.

ಈ ವರದಿ ಓದಿದ್ದೀರಾ?: ಒಂದು ದೇಶ-ಒಂದು ಚುನಾವಣೆ ಸರ್ವಾಧಿಕಾರಕ್ಕೆ ಮುನ್ನುಡಿಯೇ?

ಧರ್ಮ-ದೇವರು ಎನ್ನುವುದು ಎಲ್ಲಾ ಕಾಲಕ್ಕೂ ಜನರನ್ನು ಭಾವನಾತ್ಮಕವಾಗಿ ಬೆಸೆಯುವ ಸಾಧನ. ಜನಸಾಮಾನ್ಯರಲ್ಲಿ ದೇವರ ಬಗೆಗಿನ ನಂಬಿಕೆ, ಭಕ್ತಿ, ಆಚರಣೆ ಹಲವು ಒಳ್ಳೆಯ ಉದ್ದೇಶಗಳಿಗೂ ಬಳಕೆಯಾಗಿದೆ. ಆದರೆ ದೇವರ ಕುರಿತು ಕಂಡು ಬರುವ ಅಜ್ಞಾನ, ಅಸ್ಪಷ್ಟತೆ ಮತ್ತು ಗೊಂದಲ ಹಲವಾರು ಅನನುಕೂಲಗಳಿಗೂ ದಾರಿ ಮಾಡಿಕೊಟ್ಟಿದ್ದಿದೆ. ಮೇಲ್ಜಾತಿಯ ಜನಕ್ಕೆ ಬಹುಸಂಖ್ಯಾತ ಶೂದ್ರರನ್ನು ದೋಚಲು, ದಾಸ್ಯದಲ್ಲಿಡಲು ಅನುಕೂಲವಾಗಿದೆ. ಹಾಗೆಯೇ ಅನ್ಯಾಯ, ಅಪರಾಧ, ಅಮಾನವೀಯತೆಯನ್ನು ಸಮರ್ಥಿಸಿಕೊಳ್ಳಲು ಬಳಕೆಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ, ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಜನರನ್ನು ವಿಂಗಡಿಸಲು, ದ್ವೇಷಾಸೂಯೆ ಬಿತ್ತಲು, ರಕ್ತಪಾತ ಮಾಡಿಸಲು ಬಳಕೆಯಾಗುತ್ತಿದೆ.

90ರ ದಶಕದಲ್ಲಿ ಅಯೋಧ್ಯೆಯ ಬಾಬ್ರಿ ಮಸೀದಿ ಕೆಡವಿ, ಅಲ್ಲಿ ರಾಮಮಂದಿರ ಕಟ್ಟುತ್ತೇವೆಂದ ಸಂಘಪರಿವಾರ, ವಿಶ್ವ ಹಿಂದೂ ಪರಿಷತ್ ಮತ್ತು ಭಾರತೀಯ ಜನತಾ ಪಕ್ಷ- ಕಳೆದ ಮೂವತ್ತು ವರ್ಷಗಳಿಂದ ಸಂಗ್ರಹಿಸಿದ ಹಣ, ಇಟ್ಟಿಗೆ, ಕಬ್ಬಿಣ, ಸಿಮೆಂಟಿಗೆ ಲೆಕ್ಕವಿಲ್ಲ. ಹಿಂದೂ-ಮುಸ್ಲಿಮರ ನಡುವೆ ಬಿತ್ತಿದ ವಿಷಬೀಜ, ಸೃಷ್ಟಿಸಿದ ಕೋಮುಗಲಭೆ, ಹರಿಸಿದ ರಕ್ತ, ಸಾವುಗಳಿಗೂ ಲೆಕ್ಕವಿಲ್ಲ.
ದೇವರ ನೆಪದಲ್ಲಿ ಹಣ ಹೋದರೂ, ಹೆಣ ಉರುಳಿದರೂ ಈ ದೇಶದ ಜನಕ್ಕೆ ಬುದ್ಧಿ ಬಂದಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ದೇಶ ಅಭಿವೃದ್ಧಿ ಕಾಣದೆ ಅಧೋಗತಿಗಿಳಿದರೂ ಎಚ್ಚೆತ್ತುಕೊಂಡಿಲ್ಲ. ಅಂದ ಮೇಲೆ ಪ್ರಧಾನಿ ಮೋದಿ ಗಣೇಶನನ್ನು ಗಟ್ಟಿಯಾಗಿ ಹಿಡಿದುಕೊಳ್ಳದೇ ಬಿಡುತ್ತಾರೆಯೇ? ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯಲ್ಲಿ ಅದನ್ನು ಇನ್ನಷ್ಟು ಹೆಚ್ಚು ಮಾಡದೇ ಸುಮ್ಮನಿರುತ್ತಾರೆಯೇ?

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಂಸತ್ ಭವನದಲ್ಲಿ ಭದ್ರತಾ ವೈಫಲ್ಯ: ಗೋಡೆ ಹತ್ತಿ ಆವರಣ ಪ್ರವೇಶಿಸಿದ ಯುವಕ

ಸಂಸತ್ ಭವನದಲ್ಲಿ ಭದ್ರತಾ ವೈಫಲ್ಯ ಕಾಣಿಸಿಕೊಂಡಿದ್ದು ವ್ಯಕ್ತಿಯೋರ್ವ ಶುಕ್ರವಾರ ಬೆಳಿಗ್ಗೆ ಮರವನ್ನು...

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

Download Eedina App Android / iOS

X