ವೇದಿಕೆಯಲ್ಲಿ ಪ್ರಧಾನಿ ಮೋದಿಯನ್ನು ಪರಿಚಯಿಸಲು ಮರೆತ ಅಮೆರಿಕ ಅಧ್ಯಕ್ಷ ಬೈಡೆನ್!

Date:

Advertisements

ಭಾನುವಾರ ಬೆಳಿಗ್ಗೆ ಡೆಲವೇರ್‌ನಲ್ಲಿ ಕ್ವಾಡ್ ನಾಯಕರೊಂದಿಗೆ ವೇದಿಕೆಯನ್ನು ಹಂಚಿಕೊಂಡ ಯುಎಸ್ ಅಧ್ಯಕ್ಷ ಜೋ ಬೈಡೆನ್ ವೇದಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪರಿಚಯಿಸಲು ಮರೆತಿರುವ ಘಟನೆ ನಡೆದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ವಿಶ್ವದಾದ್ಯಂತ ಕ್ಯಾನ್ಸರ್ ಕೊನೆಗೊಳಿಸಲು ‘ಕ್ವಾಡ್‌ ಕ್ಯಾನ್ಸರ್ ಮೂನ್‌ಶೂಟ್’ ಉಪಕ್ರಮವನ್ನು ಬೈಡೆನ್, ಪಿಎಂ ಮೋದಿ, ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಮತ್ತು ಜಪಾನ್‌ನ ಫ್ಯೂಮಿಯೊ ಕಿಶಿಡಾ ಅವರು ಪ್ರಾರಂಭಿಸಿದರು.

ಕ್ಯಾನ್ಸರ್ ಮೂನ್‌ಶಾಟ್ ಉಪಕ್ರಮದ ಕುರಿತು ಮಾತನಾಡಿದ ನಂತರ ಅಮೆರಿಕ ಅಧ್ಯಕ್ಷ ಬೈಡೆನ್ ಪ್ರಧಾನಿ ಮೋದಿಯವರನ್ನು ವೇದಿಕೆಯಲ್ಲಿ ಪರಿಚಯಿಸಬೇಕಿತ್ತು. ಆದರೆ ಯುಎಸ್‌ ಅಧ್ಯಕ್ಷರು ತಾನು ಯಾರನ್ನು ಪರಿಚಯಿಸಬೇಕು ಎಂಬುದನ್ನೇ ಮರೆತಿದ್ದಾರೆ. “ಮುಂದೆ ಯಾರು” ಎಂದು ಪ್ರಶ್ನಿಸಿದ್ದಾರೆ, ಗೊಂದಲಕ್ಕೊಳಗಾಗಿದ್ದಾರೆ.

Advertisements

“ನಾನು ಮುಂದೆ ಯಾರನ್ನು ಪರಿಚಯಿಸುತ್ತಿದ್ದೇನೆ?, ಮುಂದೆ ಯಾರು” ಎಂದು ಬೈಡೆನ್ ಪ್ರಶ್ನಿಸಿದ್ದಾರೆ. ಅದಾದ ಬಳಿಕ ಕಾರ್ಯಕ್ರಮದ ನಿರ್ವಾಹಕರು ಪ್ರಧಾನಿ ಮೋದಿ ಅವರ ಹೆಸರನ್ನು ಘೋಷಿಸಿದ್ದಾರೆ. ಬಳಿಕ ವೇದಿಕೆಯಲ್ಲೇ ಕುಳಿತಿದ್ದ ಮೋದಿ ಅವರು ಭಾಷಣ ಮಾಡಲು ಎದ್ದು ಪೋಡಿಯಂ ಬಳಿ ಬಂದಿದ್ದಾರೆ.

ಇದನ್ನು ಓದಿದ್ದೀರಾ? ಅಮೆರಿಕ ಚುನಾವಣೆ | ನಿಧಿ ಸಂಗ್ರಹಣೆ ಮತ್ತು ವೆಚ್ಚದಲ್ಲಿ ಟ್ರಂಪ್‌ಗಿಂತ ಬೈಡೆನ್ ಮೇಲುಗೈ

ಸದ್ಯ ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಜೋ ಬೈಡೆನ್ ಇತ್ತೀಚೆಗೆ ಭಾರೀ ಮರೆವು ಹೊಂದಿದ್ದಾರೆ. ತಾನು ಎಲ್ಲಿದ್ದೇನೆ, ಮುಂದೇನು ಮಾಡಬೇಕು ಎಂಬುದನ್ನು ಕೂಡಾ ಮರೆತು ಬಿಡುತ್ತಾರೆ ಎಂದು ನೆಟ್ಟಿಗರು ಹೇಳಿದ್ದಾರೆ.

ಇತ್ತೀಚೆಗೆ ಜೋ ಬೈಡೆನ್ ಅವರು ಸಾರ್ವಜನಿಕ ಕಾರ್ಯಕ್ರಮಗಳ ಸಮಯದಲ್ಲಿ ದಿಢೀರ್ ಆಗಿ ಮಾತು ಮರೆಯುವ ಘಟನೆಗಳನ್ನು ನಡೆಯುತ್ತಿದೆ. ಆದ್ದರಿಂದ ನೆಟ್ಟಿಗರು 81 ವರ್ಷ ವಯಸ್ಸಿನ ಅಧ್ಯಕ್ಷರ ಮಾನಸಿಕ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಈ ವರ್ಷದ ಜುಲೈನಲ್ಲಿ, ಜೋ ಬೈಡೆನ್ ವಾಷಿಂಗ್ಟನ್‌ನಲ್ಲಿ ನಡೆದ ನ್ಯಾಟೋ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಅಲ್ಲಿ ಆಕಸ್ಮಿಕವಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎಂದು ಉಲ್ಲೇಖಿಸಿದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತದ ಮೇಲೆ ಅಮೆರಿಕ ದ್ವೇಷ: ಟ್ರಂಪ್‌ಗೆ ನೊಬೆಲ್ ನೀಡುವಂತೆ ಮೋದಿ ಶಿಫಾರಸು ಮಾಡಿದ್ರೆ ಎಲ್ಲವೂ ಸರಿಹೋಗತ್ತ?

ಪಾಕಿಸ್ತಾನವು 2026ರ ನೊಬೆಲ್ ಶಾಂತಿ ಪ್ರಶಸ್ತಿಗೆ ಟ್ರಂಪ್‌ ಅವರನ್ನು ಶಿಫಾರಸು ಮಾಡುವುದಾಗಿ...

ಗಾಝಾದಲ್ಲಿ ನರಮೇಧ: ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಮತ್ತು ಇಸ್ರೇಲ್ ರಾಯಭಾರಿ ನಡುವೆ ವಾಕ್ಸಮರ

ಗಾಝಾದಲ್ಲಿ 'ಅಲ್‌ಝಝೀರಾ' ಸಂಸ್ಥೆಯ ಪತ್ರಕರ್ತನನ್ನು ಇಸ್ರೇಲ್ ಹತ್ಯೆಗೈದಿದೆ. ಈ ಹತ್ಯೆಯನ್ನು ಕಾಂಗ್ರೆಸ್‌...

ಮೋದಿ-ಝೆಲೆನ್ಸ್ಕಿ ಫೋನ್ ಮಾತುಕತೆ: ರಷ್ಯಾ ತೈಲ ಖರೀದಿ ಕುರಿತು ಭಾರತದ ಮೇಲೆ ಉಕ್ರೇನ್‌ ಒತ್ತಡ

ರಷ್ಯಾ ಜೊತೆ ಸಂಘರ್ಷದಲ್ಲಿರುವ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಪ್ರಧಾನಿ...

Download Eedina App Android / iOS

X