ಪಂಜಾಬ್‌ನ ಪಟಿಯಾಲದಲ್ಲಿರುವ ರಾಜೀವ್ ಗಾಂಧಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಜೈಶಂಕರ್ ಅವರು ಯಾವುದೇ ಮಾಹಿತಿ ನೀಡದೆ ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ನುಗ್ಗಿ, ಅವರ ಖಾಸಗಿತನಕ್ಕೆ ಧಕ್ಕೆಯುಂಟು ಮಾಡಿರುವ ಆರೋಪ ಕೇಳಿಬಂದಿದೆ.
ಕ್ಯಾಂಪಸ್‌ನಲ್ಲಿರುವ ವಿಸಿ ನಿವಾಸದ ಹೊರಗೆ ನೂರಾರು ವಿದ್ಯಾರ್ಥಿಗಳು ಧರಣಿ ನಡೆಸುತ್ತಿದ್ದು, ಕುಲಪತಿಯಾಗಿರುವ ಪ್ರೊಫೆಸರ್ ಜೈಶಂಕರ್ ಅವರು ಯಾವುದೇ ಪೂರ್ವ ಸೂಚನೆ ಅಥವಾ ಒಪ್ಪಿಗೆ ಇಲ್ಲದೆ ಭಾನುವಾರ ಮಧ್ಯಾಹ್ನ ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿರುವ ಕೊಠಡಿಗೆ ಅಕ್ರಮವಾಗಿ ಪ್ರವೇಶಿಸಿದ್ದಾರೆ. ಅಲ್ಲದೇ, ವಿದ್ಯಾರ್ಥಿನಿಯರ ಬಟ್ಟೆಗಳನ್ನು ನೋಡಿ ಅವಾಚ್ಯವಾಗಿ ನಿಂದಿಸಿರುವುದಾಗಿ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
A massive protest has erupted at Rajiv Gandhi National University of Law (RGNUL) in Patiala, on Sunday evening, against the Vice Chancellor of the University. Hundreds of the students are staging a sit-in outside the residence of VC in the campus.
— karamprakash (@karamprakash6) September 22, 2024
Students are learnt to have… pic.twitter.com/70lslXi82E
ತಮ್ಮ ಹಾಸ್ಟೆಲ್‌ನ ಒಳಗೆ ಪ್ರವೇಶಿಸುವ ಮೂಲಕ ಖಾಸಗಿತನವನ್ನು ಉಲ್ಲಂಘಿಸಿದ್ದಾರೆ. ಹಾಗಾಗಿ, ಕೂಡಲೇ ಅವರನ್ನು ಕುಲಪತಿ ಸ್ಥಾನದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಭಾನುವಾರ ಸಂಜೆಯಿಂದ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
“ಕುಲಪತಿ ಜೈಶಂಕರ್ ಅವರು ಹಾಸ್ಟೆಲ್‌ಗೆ ಭೇಟಿ ನೀಡುವ ಬಗ್ಗೆ ಯಾವುದೇ ಮಾಹಿತಿ ನಮಗೆ ಇರಲಿಲ್ಲ. ಅಕ್ರಮವಾಗಿ ಪ್ರವೇಶಿಸಿದ್ದೂ ಅಲ್ಲದೇ, ಅವರು ನಮ್ಮ ಡ್ರೆಸ್ಸಿಂಗ್ ಸೆನ್ಸ್ ಅನ್ನು ಪ್ರಶ್ನಿಸಿದ್ದಾರೆ. ಗೌಪ್ಯತೆಯನ್ನು ಉಲ್ಲಂಘಿಸಿದ್ದಾರೆ” ಎಂದು ವಿದ್ಯಾರ್ಥಿನಿಯರು ತಿಳಿಸಿದ್ದಾರೆ.
ಕುಲಪತಿಯ ನಡೆಯ ವಿವರ ತಿಳಿದ ಕಾನೂನು ವಿವಿಯ ವಿದ್ಯಾರ್ಥಿಗಳೂ ಕೂಡ ಪ್ರತಿಭಟನೆಗೆ ಕೈ ಜೋಡಿಸಿದ್ದು, ನಿವಾಸದ ಹೊರಗೆ ಧರಣಿ ಕುಳಿತಿದ್ದಾರೆ. ಅಲ್ಲದೇ, ‘NOT YOUR DAUGHTER, JAI SHANKAR JAO ಎಂಬಿತ್ಯಾದಿ ಪ್ಲೆಕಾರ್ಡ್‌ಗಳನ್ನು ಕೂಡ ಇಟ್ಟುಕೊಂಡು, ಪ್ರತಿಭಟನೆ ನಡೆಸುತ್ತಿದ್ದಾರೆ.
#Breaking Students of Rajiv Gandhi National University of Law, Patiala are staging a sit-in demonstration demanding the resignation of Vice Chancellor Prof (Dr) Jai Shankar for allegedly entering the University’s girls hostel and rooms without their consent or prior notice to… pic.twitter.com/2xV9ezfTdy
— Live Law (@LiveLawIndia) September 22, 2024
