ಹಲವು ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ ದಂಪತಿ ಕೆಲವೇ 7 ಗಂಟೆಗಳ ಅಂತರದಲ್ಲಿ ಸಾವಿನಲ್ಲೂ ಒಂದಾದ ಅಪರೂಪದ ಘಟನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ನಡೆದಿದೆ.
ಸೋಮವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಶಂಕ್ರಪ್ಪ ಹೊಂಬಳ (72) ಹೃದಯಾಘಾತದಿಂದ ನಿಧನರಾಗಿದ್ದರು. ಮಧ್ಯಾಹ್ನದ 1 ಗಂಟೆಗೆ ಶಂಕ್ರಪ್ಪ ಅವರ ಪತ್ನಿ ಅನ್ನಪೂರ್ಣ (62) ಕೂಡ ವಯೋಸಹಜ ಕಾಯಿಲೆಯಿಂದ ಪತ್ನಿ ಕೊನೆಯುಸಿರೆಳಿದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ಜಮೀನಿನಲ್ಲಿ ಸಿಡಿಲು ಬಡಿದು ನಾಲ್ವರ ಸಾವು
ಒಂದೇ ದಿನ ಸತಿ-ಪತಿ ನಿಧನರಾಗಿ ಸಾವಿನಲ್ಲೂ ಒಂದಾಗಿದ್ದಾರೆ. ದಂಪತಿಯ ಸಾವನಪ್ಪಿದ ಸುದ್ದಿ ತಿಳಿದು ಇಡೀ ಗ್ರಾಮದ ಜನ ಕಂಬನಿ ಮಿಡಿದಿದ್ದಾರೆ.