ಬೀದರ್ ಜಿಲ್ಲೆಯ ಹುಲಸೂರ ಪಟ್ಟಣದ ವಾರ್ಡ್ ಸಂಖ್ಯೆ 3ರ ನಿವಾಸಿ ಮುಜಾಹೀದ್ ಅಬ್ದುಲ್ ಲತೀಫ್ (36) ಸೋಮವಾರ ಬೆಳಿಗ್ಗೆ ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆ.
ಸೋಮವಾರ ಬೆಳಿಗ್ಗೆ ತಮ್ಮ ಮನೆಯ ಕೆಲಸ ಮಾಡುವ ವೇಳೆ ವಿದ್ಯುತ್ ಸ್ಪರ್ಶವಾಗಿ ಸ್ಥಳದಲ್ಲೇ ಸಾವನಪ್ಪಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಜೆಸ್ಕಾ ಇಲಾಖೆ ಎಇಇ ಗಣಪತಿ ಮೈನಾಳೆ ಮೃತರ ಮನೆಗೆ ಭೇಟಿ ನೀಡಿ, ಘಟನೆ ವರದಿ ಪಡೆದು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.
ʼಮೃತರಿಗೆ ಪತ್ನಿ ಹಾಗೂ ಮೂವರು ಬಾಲಕರು, ಓರ್ವ ಬಾಲಕಿ ಇದ್ದಾರೆ. ಮನೆಯ ಯಜಮಾನದಂತಿದ್ದ ಯುವಕನನ್ನು ಕಳೆದುಕೊಂಡ ಕುಟುಂಬಕ್ಕೆ ಆಸರೆ ಇಲ್ಲದಂತಾಗಿದೆ. ಹೀಗಾಗಿ ಜೆಸ್ಕಾಂ ಇಲಾಖೆ, ಶಾಸಕರು ಹಾಗೂ ಸರಕಾರ ಮೃತ ಕುಟುಂಬಕ್ಕೆ ಸೂಕ್ತ ಪರಿಹಾರ ಧನ ನೀಡಬೇಕುʼ ಎಂದು ಮೃತರ ಸಂಬಂಧಿಕರು ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹುಬ್ಬಳ್ಳಿ | ಸಾವಿನಲ್ಲೂ ಒಂದಾದ ದಂಪತಿ
ಹುಲಸೂರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.