ತನ್ನವರನ್ನೆಲ್ಲ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಬಡಮಕ್ಕಳ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ್ ಅವರು ಆತ್ಮಸ್ಥೈರ್ಯದ ಜತೆಗೆ ಆರ್ಥಿಕವಾಗಿ ಧನಸಹಾಯ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ತೆಂಡೇಕೆರೆ ಪಂಚಾಯಿತಿಯಲ್ಲಿ ಕಳೆದ ಒಂದು ವರ್ಷದಿಂದ ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದ ಬಳ್ಳಕೆರೆ ಗಿರಿಜಾ ಮಹಾದೇವ(34) ಎಂಬುವವರು ಇತ್ತೀಚೆಗೆ ಅಪಘಾತದಿಂದ ಮೃತಪಟ್ಟಿದ್ದರು.
ಕಳೆದ ವಾರ ಪ್ರಜಾಪ್ರಭುತ್ವದ ದಿನದ ಅಂಗವಾಗಿ ಶ್ರೀರಂಗಪಟ್ಟಣದಲ್ಲಿ ಆಯೋಜಿಸಿದ್ದ ಮಾನವ ಸರಪಳಿ ಕಾರ್ಯಕ್ರಮ ಮುಗಿಸಿ ಮರಳುವಾಗ ಅಪಘಾತ ಸಂಭವಿಸಿದ್ದು, ಮೃತಪಟ್ಟಿದ್ದರು. ಪತಿ ಮಹದೇವ ಕಳೆದ ವರ್ಷ ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದು, 4 ತಿಂಗಳ ಹಿಂದೆ ಅಜ್ಜಿ ಭಾಗ್ಯಮ್ಮ, ದೊಡ್ಡಪ್ಪ ಕೂಡ ಅಗಲಿದ್ದಾರೆ.
ಒಂದು ವರ್ಷದ ಅಂತರದಲ್ಲಿ ತನ್ನ ಇಡೀ ಕುಟುಂಬ ಕಳೆದುಕೊಂಡು ಸುಕನ್ಯಾ ಹಾಗೂ ಸಿದ್ದಾರ್ಥ್ ಎಂಬ ಮಕ್ಕಳು ಅನಾಥರಾಗಿದ್ದಾರೆ. ಹಾಗಾಗಿ ಈ ತಬ್ಬಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ಜಾತಿನಿಂದಕ ಮುನಿರತ್ನನನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ: ಆನಂದ್ ಕುಮಾರ್ ಆಗ್ರಹ
ಗ್ರಾಮ ಪಂಚಾಯಿತಿ ಸದಸ್ಯೆ ಸವಿತಾ ಇಂದ್ರೇಶ್, ಶಾಲಾ ಮುಖ್ಯ ಶಿಕ್ಷಕ ನಿಂಗೇಗೌಡ, ಸಹ ಶಿಕ್ಷಕ ಮಹೇಶ್ ಕುಮಾರ್,
ಅಂಗನವಾಡಿ ಕಾರ್ಯಕರ್ತೆ ರಾಧ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಹರೀಶ್, ಉಪಾಧ್ಯಕ್ಷ ನರಸಿಂಹರಾಜು, ಸದಸ್ಯರುಗಳಾದ ಶಿವಕುಮಾರ್, ಶಿವಮ್ಮ, ಮಲ್ಲೇಶ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಜಯಮ್ಮ, ಗ್ರಾಮಸ್ಥರುಗಳಾದ ಮಲ್ಲಪ್ಪ, ಸುಶೀಲಮ್ಮ, ವೀಣಾ, ಗಾಯಿತ್ರಮ್ಮ, ರತ್ನಮ್ಮ, ಸಣ್ಣಮ್ಮ, ದೇವೀರಮ್ಮ, ಮಣಿಯಮ್ಮ, ಕಾಂತಶೆಟ್ಟಿ, ಶಾಂತಮ್ಮ, ಗಂಜಿಗೆರೆ ಮಹೇಶ್ ಇದ್ದರು.