ವಿದ್ಯಾರ್ಥಿಗಳು ರಾಷ್ಟ್ರಪ್ರೇಮ ಮತ್ತು ಸಮಾಜ ಸೇವಾ ಭಾವನೆ ಬೆಳೆಸಿಕೊಳ್ಳಬೇಕು ಎಂದು ಮೃತ್ಯುಂಜಯ ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ಉಮೇಶ್ ನೀಲಪ್ಪನವರ ಹೇಳಿದರು.
ಧಾರವಾಡ ನಗರದ ಅಂಜುಮನ್ ಮಹಾ ವಿದ್ಯಾಲಯದಲ್ಲಿ ಏರ್ಪಡಿಸಿದ್ದ ಎನ್ಎಸ್ಎಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಸಮಾಜ ಸೇವೆಯ ಮೂಲಕ ಅಭಿವೃದ್ಧಿಗೊಳಿಸುವುದು ಮತ್ತು ರಾಷ್ಟ್ರ ನಿರ್ಮಾಣದ ಕಾರ್ಯಗಳಲ್ಲಿ ಭಾಗವಹಿಸಿ ರಾಷ್ಟ್ರಪ್ರೇಮ ಮತ್ತು ಸೇವಾ ಭಾವನೆಗಳನ್ನು ಬೆಳೆಸಿಕೊಳ್ಳುವುದು ಅವಶ್ಯಕವಾಗಿದೆ ಎಂದು ಹೇಳಿದರು.
ಮಹಾತ್ಮ ಗಾಂಧೀಜಿಯವರ ಜನ್ಮ ವಾರ್ಷಿಕೋತ್ಸವದ ಅಂಗವಾಗಿ 24ನೇ ಸೆಪ್ಟೆಂಬರ್ 1969 ರಂದು ರಾಷ್ಟ್ರೀಯ ಸೇವಾ ಯೋಜನೆಯನ್ನು ಪರಿಚಯಿಸಲಾಯಿತು. ಆ ಹಿನ್ನೆಲೆಯಲ್ಲಿ ಎನ್ಎಸ್ಎಸ್ ದಿನಾಚರಣೆ ಆಚರಿಸಲಾಗುತ್ತಿದೆ. ಎನ್ಎಸ್ಎಸ್ ದಿನಾಚರಣೆ ಭಾರತ ಸರ್ಕಾರದಿಂದ ಸಾರ್ವಜನಿಕ ಸೇವಾ ಸಂಸ್ಥೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಐ ಎ ಮುಲ್ಲಾ ಮಾತನಾಡಿದರು.
ಇದನ್ನೂ ಓದಿರಿ: ಧಾರವಾಡ ಕೃಷಿ ಮೇಳ: ಲಕ್ಷಾಂತರ ಜನರು ಭಾಗಿ; ಸಂಭ್ರಮದ ತೆರೆ
ಡಾ. ನಾಗರಾಜ್ ಗುದಗನವರ್ ಸ್ವಾಗತಿಸಿ ಪರಿಚಯಿಸಿದರು. ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕ ಡಾ. ಎನ್ ಬಿ ನಾಲತವಾಡ, ಉಪಸ್ಥಿತರಿದ್ದರು. ಡಾ. ಸೌಭಾಗ್ಯ ಜಾದವ್ ನಿರೂಪಿಸಿದರು. ಡಾ. ಸೈಯದ್ ತಾಜುನ್ನಿಸಾ ವಂದನಾರ್ಪಣೆ ಮಾಡಿದರು.