ಭೀಮ್ ಆರ್ಮಿ ಪದಾಧಿಕಾರಿಗಳ ವಜಾಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದರುವುದನ್ನು ಜೇವರ್ಗಿ ತಾಲೂಕು ಅಧ್ಯಕ್ಷ ಸುಭಾಷ್ ಎಸ್ ಆಲೂರ್ ಖಂಡಿಸಿದ್ದಾರೆ.
“ಬಾಬಾ ಸಾಹೇಬ್ ಅವರ ಪುಣೆ ಒಪ್ಪಂದದ ಕುರಿತ ಒಂದು ಐತಿಹಾಸಿಕ ಕಾರ್ಯಕ್ರಮಕ್ಕೆ ನಮಗೆ ಗೌರವವಿದೆ. ನಮ್ಮನ್ನು ಸಮಿತಿಯಿಂದ ಕೈಬಿಟ್ಟು ಬೇರೆಯವರಿಗೆ ಅದೂ ಗ್ರಾಮ ಪಂಚಾಯಿತಿ ಅಧ್ಯಕ್ಷರೊಬ್ಬರಿಗೆ ಜೇವರ್ಗಿ ತಾಲೂಕು ಘಟಕದ ಅಧ್ಯಕ್ಷ ಸ್ಥಾನ ಕೊಡುವ ಮೂಲಕ ಜಿಲ್ಲಾಧ್ಯಕ್ಷರು ನಮಗೆ ಅನ್ಯಾಯ ಮಾಡಿದ್ದಾರೆ” ಎಂದು ಆರೋಪಿಸಿದರು.
“ಸೆಪ್ಟೆಂಬರ್ 24ರಂದು ಜೇವರ್ಗಿಯಲ್ಲಿನ ಪುಣೆ ಒಪ್ಪಂದ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕುವ ನಿರ್ಧಾರಕ್ಕೆ ಈ ಹಿಂದೆ ಕಲಬುರಗಿ ಜಿಲ್ಲೆಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಮೂಲಕ ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷ ಸೂರ್ಯಕಾಂತ್ ಜಿಡಗಾ ಅವರು ನಮಗೆ ಬೆದರಿಕೆ ಹಾಕಿದ್ದಾರೆ. ಹಾಗಾಗಿ ಅವರನ್ನು ಭೀಮ್ ಆರ್ಮಿ ತಾಲೂಕು ಸಮಿತಿಯಿಂದ ಕಪ್ಪುಬಟ್ಟೆ ಪ್ರದರ್ಶಿಸುವ ಮೂಲಕ ಬಹಿಷ್ಕಾರ ಮಾಡಲಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಡಲು ಆಗ್ರಹಿಸಿ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ
ಗೌರವಾಧ್ಯಕ್ಷ ಸಿದ್ದು ಮದಬಾಳ್, ತಾಲೂಕು ಉಪಾಧ್ಯಕ್ಷ ಕೃಷ್ಣಾ ಗುಡೂರ್, ಮರಪ್ಪ ಅಂದೋಲಾ, ಕಾರ್ಯಾಧ್ಯಕ್ಷ ಬಸವರಾಜ್ ಇಂಗಳಗಿ, ಸಂಘಟನಾ ಕಾರ್ಯದರ್ಶಿ ಬಾಬು ನಾಟೀಕಾರ್, ಶರಣು ಕಟ್ಟಿಸಂಗಾವಿ, ದವಲಪ್ಪ ಶರ್ಮಾ ಕಲ್ಲೂರ್, ಖಜಾಂಚಿ ಶಿವು ಹೊತ್ತಿನಮಡು ಸೇರಿದಂತೆ ಇತರರು ಇದ್ದರು.
