ಬಿಜೆಪಿ ನಾಯಕ ಕಿರಿತ್ ಸೋಮಯ್ಯ ಅವರ ಪತ್ನಿ ಮೇಧಾ ಸೋಮಯ್ಯ ಅವರು ಸಲ್ಲಿಸಿದ ಮಾನನಷ್ಟ ಮೊಕದ್ದಮೆಯಲ್ಲಿ ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವತ್ ಅವರನ್ನು ಮುಂಬೈನ ನ್ಯಾಯಾಲಯ ಗುರುವಾರ ದೋಷಿ ಎಂದು ಘೋಷಿಸಿದೆ.
ಮಜಗಾಂವ್‌ನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ 25ನೇ ನ್ಯಾಯಾಲಯ 15 ದಿನಗಳ ಜೈಲು ಶಿಕ್ಷೆ ಮತ್ತು 25 ಸಾವಿರ ರೂಪಾಯಿ ದಂಡವನ್ನೂ ವಿಧಿಸಿದೆ.
ಇದನ್ನು ಓದಿದ್ದೀರಾ? ನೀತಿ ಆಯೋಗ ಸಭೆಯಲ್ಲಿ ಮಮತಾ ಬ್ಯಾನರ್ಜಿಗೆ ಅವಮಾನ: ಸಂಜಯ್ ರಾವತ್ ಖಂಡನೆ
ಮೀರಾ ಭಾಯಂದರ್ ಪುರಸಭೆಯ ವ್ಯಾಪ್ತಿಯಲ್ಲಿ ಕೆಲವು ಸಾರ್ವಜನಿಕ ಶೌಚಾಲಯಗಳ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ 100 ಕೋಟಿ ರೂಪಾಯಿ ಮೊತ್ತದ ಹಗರಣದಲ್ಲಿ ಕಿರಿತ್ ಸೋಮಯ್ಯ, ಅವರ ಪತ್ನಿ ಭಾಗಿಯಾಗಿದ್ದಾರೆ ಎಂದು ಸಂಜಯ್ ರಾವತ್ ಆರೋಪ ಮಾಡಿದ್ದರು.
ತನ್ನ ಮತ್ತು ತನ್ನ ಪತಿ ವಿರುದ್ಧ ಆಧಾರರಹಿತ ಮತ್ತು ಸಂಪೂರ್ಣ ಅವಹೇಳನಕಾರಿ ಆರೋಪಗಳನ್ನು ಮಾಡಿದ್ದಾರೆ ಎಂದು ಮೇಧಾ ಸೋಮಯ್ಯ ಅವರು ತಮ್ಮ ದೂರಿನಲ್ಲಿ ಹೇಳಿದ್ದಾರೆ.
Sanjay Raut gets 15 days' jail in defamation case by BJP leader's wife
— Bar and Bench (@barandbench) September 26, 2024
Read story here: https://t.co/5i8HaL0HZ8 pic.twitter.com/jYW5ZzHNPf
