- ರಾಜ್ಯದಲ್ಲಿ ರಂಗೇರಿದ ವಿಧಾನಸಭಾ ಚುನಾವಣೆ ಪ್ರಚಾರ
- ಸಾರ್ವಜನಿಕರು ಸಹಕರಿಸಬೇಕು ಎಂದ ಟ್ರಾಫಿಕ್ ಪೊಲೀಸರು
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆ, ಅಬ್ಬರದ ಪ್ರಚಾರ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ತುಮಕೂರು ಮತ್ತು ಬಳ್ಳಾರಿಯಲ್ಲಿ ಸಮಾವೇಶ ಮುಗಿಸಿಕೊಂಡು ಬೆಂಗಳೂರಿಗೆ ಬರಲಿದ್ದಾರೆ. ಹೀಗಾಗಿ, ನಗರದ ಕೆಲ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಮೇ 6 ಮತ್ತು 7ರಂದು ಪ್ರಧಾನಿ ಮೋದಿ ಬೆಂಗಳೂರಿನಲ್ಲಿ ರೋಡ್ ಶೋ ನಡೆಸಲಿದ್ದು, ಈ ಹಿನ್ನೆಲೆ ಮೇ 5ರಂದು ಸಾಯಂಕಾಲ ನಗರಕ್ಕೆ ಆಗಮಿಸಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗೆದ್ದರೆ ಕಟಿಂಗ್ ಫ್ರೀ ಎಂದ ರಾಜಾಜಿನಗರದ ಪಕ್ಷೇತರ ಅಭ್ಯರ್ಥಿ
ಮೇ 5ರ ಸಾಯಂಕಾಲ 5.30ರಿಂದ ರಾತ್ರಿ 7 ಗಂಟೆ ವರೆಗೆ ಹಳೆ ವಿಮಾನ ನಿಲ್ದಾಣ ರಸ್ತೆ, ಕೇಂಬ್ರಿಡ್ಜ್ ಲೇಔಟ್ ರಸ್ತೆ, ಇಂದಿರಾ ನಗರ 100 ಅಡಿ ರಸ್ತೆ, ಅರಳಿ ಕಟ್ಟೆ, ಎ.ಎಸ್.ಸಿ ಸೆಂಟರ್, ಟ್ರಿನಿಟಿ ವೃತ್ತ, ರಾಜಭವನ ರಸ್ತೆ, ಎಂಜಿ ರಸ್ತೆ, ಡಿಕನ್ಸನ್ ರಸ್ತೆ, ಮಣಿಪಾಲ್ ಸೆಂಟರ್, ಕಬ್ಬನ್ ರಸ್ತೆ, ಬಿಆರ್ವಿ ಜಂಕ್ಷನ್, ಸಿಟಿಓ ಜಂಕ್ಷನ್, ಇನ್ಫೆಂಟ್ರಿ ರಸ್ತೆಗಳ ಬದಲಿಗೆ ಪರ್ಯಾಯ ಮಾರ್ಗ ಬಳಸುವಂತೆ ವಾಹನ ಸವಾರರಿಗೆ ಬೆಂಗಳೂರು ನಗರ ಸಂಚಾರಿ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.