ಸರ್ಬಿಯಾ | ಮತ್ತೊಂದು ಗುಂಡಿನ ದಾಳಿಗೆ 8 ಮಂದಿ ಸಾವು

Date:

  • ಸರ್ಬಿಯಾ ದೇಶದಲ್ಲಿ 2013ರ ಗುಂಡಿನ ದಾಳಿಯಲ್ಲಿ 13 ಮಂದಿ ಮೃತಪಟ್ಟಿದ್ದರು
  • ಮೇ 2 ರಂದು ಬೆಲ್‌ಗ್ರೇಡ್‌ನ ಶಾಲೆಯೊಂದರಲ್ಲಿ ಅಪರಿಚಿತ ವ್ಯಕ್ತಿ ಗುಂಡಿನ ದಾಳಿ

ಸರ್ಬಿಯಾ ದೇಶದಲ್ಲಿ ಇತ್ತೀಚಿಗೆ ಶಾಲೆಯೊಂದರಲ್ಲಿ ಗುಂಡಿನ ದಾಳಿ ನಡೆದಿತ್ತು. ಈ ಘಟನೆ ಮಾಸುವ ಮೊದಲೇ ಮತ್ತೊಂದು ಭೀಕರ ಗುಂಡಿನ ದಾಳಿ ನಡೆದಿದೆ ಎಂದು ಶುಕ್ರವಾರ (ಮೇ 5) ವರದಿಯಾಗಿದೆ.

ರಾಜಧಾನಿ ಬೆಲ್‌ಗ್ರೇಡ್‌ನಿಂದ 60 ಕಿ.ಮೀ ದೂರ ಇರುವ ಮಾಲೊ ಪ್ರಾಂತ್ಯದ ಮ್ಲಾಡಿನೊವಾಕ್‌ ಎಂಬ ಪಟ್ಟಣದ ಬಳಿ ಅಪರಿಚಿತನೊಬ್ಬ ರಸ್ತೆಯಲ್ಲಿ ತೆರಳುತ್ತಿದ್ದ ವಾಹನಗಳ ಮೇಲೆ ಮನಸೋಯಿಚ್ಛೆ ಗುಂಡಿನ ದಾಳಿ ನಡೆಸಿದ್ದಾನೆ.

ಘಟನೆಯಲ್ಲಿ 8 ಮಂದಿ ಮೃತಪಟ್ಟಿದ್ದು ಗಂಭೀರವಾಗಿ ಗಾಯಗೊಂಡ 13 ಮಂದಿಯನ್ನು ಸರ್ಬಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಗುರುವಾರ (ಮೇ 4) ಸಂಜೆ ನಡೆದಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸ್ವಯಂಚಾಲಿತ ಗನ್‌ನೊಂದಿಗೆ ರಸ್ತೆಗೆ ಇಳಿದಿದ್ದ ಆಗಂತುಕ ಚಲಿಸುವ ವಾಹನಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ.

ಸರ್ಬಿಯಾ ದೇಶದ ಈ ಘಟನೆ ಬೆಚ್ಚಿಬೀಳಿಸಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ ಎಂದು ಸುದ್ದಿಸಂಸ್ಥೆಯೊಂದು ಹೇಳಿದೆ.

ಸ್ಥಳದಲ್ಲಿ ಹೆಲಿಕಾಪ್ಟರ್‌ ಜತೆ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ದಾಳಿ ಮಾಡಿದ ವ್ಯಕ್ತಿ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.

ದೇಶದಲ್ಲಿ ಮಂಗಳವಾರ (ಮೇ 2) ಬೆಲ್‌ಗ್ರೇಡ್‌ನ ಶಾಲೆಯೊಂದರಲ್ಲಿ ಅಪರಿಚಿತ ಯುವಕನೊಬ್ಬ ಗುಂಡಿನ ದಾಳಿ ನಡೆಸಿದ್ದ. ಪರಿಣಾಮ 8 ಮಕ್ಕಳು ಮತ್ತು ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದರು.

ಈ ಸುದ್ದಿ ಓದಿದ್ದೀರಾ? ಹಿಮಪಾತ | ಕೇದಾರನಾಥ ಯಾತ್ರೆ ಸ್ಥಗಿತ; ಆರೆಂಜ್‌ ಅಲರ್ಟ್

ಒಬ್ಬ ಶಿಕ್ಷಕ ಮತ್ತು ಆರು ಮಂದಿ ವಿದ್ಯಾರ್ಥಿಗಳು ಗಾಯಗೊಂಡಿದ್ದರು. ದಾಳಿ ನಡೆಸಿದ ಯುವಕನನ್ನು ಬಂಧಿಸಲಾಗಿತ್ತು.

ಸರ್ಬಿಯಾ ಆಂತರಿಕ ಸಚಿವ ಬ್ರಾಟಿಸ್ಲಾವ್ ಗ್ಯಾಸ್ಸಿಕ್ ಗುಂಡಿನ ದಾಳಿಯನ್ನು ‘ಒಂದು ಭಯೋತ್ಪಾದಕ ಕೃತ್ಯ’ ಎಂದು ಕರೆದಿದ್ದಾರೆ.

ಆಂಬುಲೆನ್ಸ್‌, ವಿಶೇಷ ಪೊಲೀಸ್‌ ಪಡೆ ಹಾಗೂ ಹೆಲಿಕಾಪ್ಟರ್‌ ಸ್ಥಳಕ್ಕೆ ರವಾನಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

2013ರಲ್ಲಿ ಮ್ಲಾಡಿನೊವಾಕ್ ಬಳಿ ವ್ಯಕ್ತಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ 13 ಮಂದಿ ಮೃತಪಟ್ಟಿದ್ದರು. ಇದು ಸರ್ಬಿಯಾದ ಇತ್ತೀಚಿನ ದೊಡ್ಡ ದಾಳಿಯಾಗಿತ್ತು ಎನ್ನಲಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿಗೆ ರಷ್ಯಾದ ಪ್ರತಿಷ್ಠಿತ ಪ್ರಶಸ್ತಿ: ಮೋದಿ ಮಾಡಿದ ಘನಕಾರ್ಯವಾದರೂ ಏನು?

ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ ಅವರಿಗೆ...

ಶಾಲಾ ಮಿನಿಬಸ್ ಅಪಘಾತ; 12 ಮಕ್ಕಳು ದಾರುಣ ಸಾವು

ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್‌ವೊಂದು ಅಪಘಾತಕ್ಕೀಡಾಗಿದ್ದು, 12 ಮಕ್ಕಳು ಸಾವನ್ನಪ್ಪಿರುವ ದುರ್ಘಟನೆ...

ಜೈಲಿನಲ್ಲೇ ಹೋರಾಟಗಾರ ಸ್ಟ್ಯಾನ್‌ ಸ್ವಾಮಿ ಸಾವು ಪ್ರಕರಣ; ತನಿಖೆ ನಡೆಸುವಂತೆ ಭಾರತಕ್ಕೆ ಅಮೆರಿಕ ಒತ್ತಾಯ

ಜೈಲಿನಲ್ಲಿದ್ದಾಗಲೇ 2021ರ ಜುಲೈ 5ರಂದು ಸಾವನ್ನಪ್ಪಿದ ಮಾನವ ಹಕ್ಕುಗಳ ಹೋರಾಟಗಾರ ಫಾದರ್...

ಹೆಚ್ಐವಿ ಸೋಂಕಿತರಿಗೆ ಶೇ.100 ರಷ್ಟು ಪರಿಣಾಮಕಾರಿ ಔಷಧಿ: ಯಶಸ್ವಿಯಾದ ಪ್ರಯೋಗ!

ಹೆಚ್‌ಐವಿ ಸೋಂಕಿನ ಸಂಪೂರ್ಣ ರಕ್ಷಣೆಗಾಗಿ ವರ್ಷಕ್ಕೆ ಎರಡು ಬಾರಿಯಂತೆ ರೋಗ ನಿರೋಧಕ...