ವಾಹನಗಳು ರೈಲು ಹಳಿಗಳನ್ನು ದಾಟುತ್ತಿದ್ದು, ಹಳಿಗಳ ಮೇಲೆ ರೈಲು ನಿಂತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಂಚಾರ ದಟ್ಟಣೆಯಿಂದ ವಾಹನಗಳ ರೈಲ್ವೇ ಹಳಿಗಳ ಮೇಲೂ ಸಾಲಾಗಿ ನಿಂತಿದ್ದು, ರೈಲು ಮುಂದೆ ಸಾಗಲಾರದೆ, ಹಳಿಗಳ ಮೇಲೆ ನಿಂತಿದೆ. ಸಂಚಾರ ದಟ್ಟಣೆಯ ಬಿಸಿ, ರೈಲಿಗೂ ತಟ್ಟಿದೆ ಎಂಬ ಹೇಳಿಕೆಯೊಂದಿಗೆ ವಿಡಿಯೋ ವೈರಲ್ ಅಗಿದೆ. ಆದರೆ, ಈ ಹೇಳಿಕಯನ್ನು ರೈಲ್ವೇ ಅಧಿಕಾರಿಗಳು ಅಲ್ಲಗಳೆದಿದ್ದು, ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನ ಮುನೇನಕೊಳಲು ರೈಲ್ವೆ ಕ್ರಾಸಿಂಗ್ ಬಳಿ, ವಾಹನಗಳು ಹಳಿ ದಾಟುತ್ತಿದ್ದು, ರೈಲು ಹಳಿಗಳ ಮೇಲೆ ನಿಂತಿದ್ದ ವಿಡಿಯೋವನ್ನು ಚಿತ್ರೀಕರಿಸಲಾಗಿದೆ. ಆ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಸುಧೀರ್ ಚಕ್ರವರ್ತಿ (sudhirchakravarthi4142) ಎಂಬವರು ಹಂಚಿಕೊಂಡಿದ್ದಾರೆ.
“ನಾನು ಅಥವಾ ನೀವು ಮಾತ್ರವಲ್ಲ ರೈಲಿಗೂ ಕೂಡಾ ಬೆಂಗಳೂರು ಟ್ರಾಫಿಕ್ನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಸುಧೀರ್ ಪೋಸ್ಟ್ ಮಾಡಿದ್ದಾರೆ.

ಅವರ ಪೋಸ್ಟ್ ವೈರಲ್ ಆಗಿರುವ ಹಿನ್ನೆಲೆ, ವಿಡಿಯೋವನ್ನು ರೈಲ್ವೇ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. “ಬೈಯಪ್ಪನಹಳ್ಳಿ ಮತ್ತು ಕಾರ್ಮೆಲಾರಂ ನಡುವೆ ರೇಕ್ ಪರಿಶೀಲನೆ ನಡೆಸಲಾಗುತ್ತಿತ್ತು. ಹೀಗಾಗಿ, ರೈಲು ಸಂಚಾರಕ್ಕೆ ಅನುಮತಿಸದರೆ, ರೆಡ್ ಸಿಗ್ನಲ್ ಹಾಕಲಾಗಿತ್ತು. ಪರಿಣಾಮ, ರೈಲನ್ನು (ನಂ. 12257) ಲೋಕೊ-ಪೈಲಟ್ ಹಳಿಗಳ ನಿಲ್ಲಿಸಿದ್ದರು. ಪರಿಶೀಲನೆ ಮುಗಿದ ಬಳಿಕ, ರೈಲ್ವೇ ಗೇಟ್ ಹಾಕಿ, ರೈಲು ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು. ಸಂಚಾರ ದಟ್ಟಣೆಗೂ, ರೈಲು ನಿಂತಿದ್ದಕ್ಕೂ ಯಾವುದೇ ಸಂಬಂಧ ಇಲ್ಲ” ಎಂದು ಹೇಳಿದ್ದಾರೆ.