ಬಳ್ಳಾರಿಯ ವಿಮ್ಸ್ ಆಸ್ಪತ್ರೆ ಸಭಾಂಗಣದ ಪಕ್ಕದಲ್ಲಿರುವ ಕಟ್ಟಡ ನಿರ್ಮಾಣಕ್ಕೆ ಹಾಕಿರುವ ಕ್ರಷರ್ ಸ್ಥಳಾಂತರಿಸಬೇಕು ಎಂದು ದಲಿತ ಸೇನೆ ಸಂಘಟನೆ ವತಿಯಿಂದ ವಿಮ್ಸ್ ನಿರ್ದೇಶಕರಿಗೆ ಗಂಗಾಧರ ಗೌಡ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ನಗರದ ವಿಮ್ಸ್ ಆಸ್ಪತ್ರೆಯ ಸಭಾಂಗಣದ ಪಕ್ಕದಲ್ಲಿರುವ ನೂತನ ಕಟ್ಟಡ ಕಾಮಗಾರಿ ನಡೆಯುತ್ತಿದ್ದು ಅದರ ಪಕ್ಕದಲ್ಲಿ ಕ್ರಷರ್ ಸ್ಥಾಪಿಸಿ ದಿನನಿತ್ಯ ಓಡಾಡುವ ಸಾರ್ವಜನಿಕರಿಗೆ ಬಹಳಷ್ಟು ಧೂಳಿನ ಸಮಸ್ಯೆ ಎದುರಾಗಿದೆ ಎಂದು ಮನವಿಯಲ್ಲಿ ದೂರಿದ್ದಾರೆ.
ಈ ಬಗ್ಗೆ ರಾಜ್ಯ ಸಂಘಟನೆ ಕಾರ್ಯದರ್ಶಿ ಕಟ್ಟೆಸ್ವಾಮಿ ಮಾತನಾಡಿ, ವಿಮ್ಸ್ ಆಸ್ಪತ್ರೆ ಪಕ್ಕದಲ್ಲಿ ನೂತನ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಇದರಿಂದ ಸಾಕಷ್ಟು ಧೂಳು ಬರುತ್ತಿದೆ. ವಿಮ್ಸ್ ಆಸ್ಪತ್ರೆಯಲ್ಲಿ ನೂರಾರು ರೋಗಿಗಳು ದಾಖಲಾಗಿದ್ದಾರೆ. ಇದರಿಂದಾಗಿ ಬೇಸತ್ತು ಹೋಗಿದ್ದಾರೆ ಎಂದರು.
ಇದನ್ನು ಓದಿದ್ದೀರಾ? ಬೆಂಗಳೂರು | ಆನ್‌ಲೈನ್ ಉದ್ಯೋಗದ ಹೆಸರಲ್ಲಿ 6 ಕೋಟಿ ವಂಚನೆ: 10 ಮಂದಿ ಆರೋಪಿಗಳ ಬಂಧನ
ಆರೋಗ್ಯ ಕಾಪಾಡುವ ಸ್ಥಳದಲ್ಲಿ ಆರೋಗ್ಯ ಹಾಳಾಗುವ ಸಾಧ್ಯತೆ ಇದೆ. ಕ್ರಷರ್ ಬೇರೆ ಕಡೆ ಸ್ಥಾಪಿಸಬೇಕು ಇಲ್ಲದಿದ್ದರೆ ಪರ್ಯಾಯ ವ್ಯವಸ್ಥೆ ಮಾಡಿ, ಕಟ್ಟಡ ಕೆಲಸ ಕಾರ್ಯ ಮಾಡುವುದಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು.
ಈ ವೇಳೆ ದಲಿತ ಸೇನೆ ಸಂಘಟನೆಯ ಜಿಲ್ಲಾಧ್ಯಕ್ಷ ಮುರಳಿ ಕೃಷ್ಣ , ರತ್ನಯ್ಯ , ಮಾನಪ್ಪ ,ಸಿದ್ದೇಶ್ ನಗರ, ಪ್ರಸಾದ್ ,ಇನ್ನಿತರರು ಹಾಜರಿದ್ದರು.
