ಪಾರ್ಟಿ ಮಾಡುತ್ತಿರುವಾಗ ಸ್ನೇಹಿತರ ನಡುವೆ ಉಂಟಾದ ಗಲಾಟೆಯಲ್ಲಿ ಗುಂಡಿನ ದಾಳಿ ನಡೆಸಿದ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿ ಗ್ರಾಮದಲ್ಲಿ ನಡೆದಿದೆ.
ಶ್ರೀಕಾಂತ್ (28) ಎಂಬಾತನ ಮೇಲೆ ಗುಂಡಿನ ದಾಳಿ ನಡೆದಿದ್ದು, ಆತನ ಎಡಗೈಗೆ ಗುಂಡು ತಗುಲಿದೆ. ಕಳೆದ ರಾತ್ರಿ ಕಡಗಂಚಿ ಗ್ರಾಮದ ಮನೆಯೊಂದರಲ್ಲಿ ಪಾರ್ಟಿ ಮಾಡುತ್ತಿರುವ ವೇಳೆ ಗಲಾಟೆ ಉಂಟಾಗಿ, ಜೊತೆಯಲ್ಲೇ ಇದ್ದ ಮಾಳಪ್ಪ ಹಾಗೂ ಕಾಂತಪ್ಪ ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಗುಂಡಿನ ದಾಳಿಗೆ ಒಳಗಾದ ಗಾಯಾಳು ಶಾಂತಪ್ಪಗೆ ಕಲಬುರಗಿಯ ಟ್ರಾಮಾ ಕೇರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ಸಂಬಂಧ ಆರೋಪಿಗಳಾದ ಕಾಂತಪ್ಪ ಮತ್ತು ಮಾಳಪ್ಪನನ್ನು ಗನ್ ಸಹಿತ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಮೂಲ ಸೌಲಭ್ಯಕ್ಕೆ ಆಗ್ರಹಿಸಿ ಗ್ರಾಮ ಆಡಳಿತಾಧಿಕಾರಿಗಳ ಅನಿರ್ದಿಷ್ಟಾವಧಿ ಮುಷ್ಕರ
ಈ ಕುರಿತು ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.