ತಿಪಟೂರು ನಗರದ ತಾಲೂಕು ಕಚೇರಿ ಮುಂಭಾಗ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತಾಧಿಕಾರಿಗಳ ಸಂಘದಿಂದ ಅನಿರ್ಧಿಷ್ಟಾವಧಿ ಧರಣಿ ನಡೆಸುತಿದ್ದಾರೆ
ತಿಪಟೂರು ತಾಲೂಕು ಗ್ರಾಮ ಆಡಳಿತಾಧಿಕಾರಿಗಳ ಸಂಘದ ಆಧ್ಯಕ್ಷ ರವಿಕುಮಾರ್ ಮಾತನಾಡಿ ಗ್ರಾಮ ಆಡಳಿತಾಧಿಕಾರಿಗಳು ಗ್ರಾಮೀಣ ಭಾಗದ ಸಂಪೂರ್ಣ ಜವವಾಬ್ದಾರಿ ನಿರ್ವಹಿಸಬೇಕಿದೆ. ಹಾಗಾಗಿ ಪ್ರತಿಯೊಂದು ಕೆಲಸಕ್ಕೂ ಗ್ರಾಮ ಆಡಳಿತಾಧಿಕಾರಿಗಳನ್ನು ನೇಮಕ ಮಾಡುತ್ತಿದೆ. ಹಲವಾರು ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿದ್ದು,ಮಾತೃ ಇಲಾಖೆಯಾದ ಕಾರಣ ಕಂದಾಯ ಇಲಾಖೆಗೆ ಯೋಜನೆ ಅನುಷ್ಠಾನದ ಜವಾಬ್ದಾರಿ ನೀಡುತ್ತಿರುವ ಕಾರಣ, ಗ್ರಾಮೀಣ ಭಾಗದಲ್ಲಿ ಕೆಲಸ ನಿರ್ವಹಿಸುವ ಗ್ರಾಮ ಆಡಳಿತಾಧಿಕಾರಿಗಳು ಹೆಚ್ಚಿನ ಒತ್ತಡಕ್ಕೆ ಒಳಗಾಗಿದ್ದಾರೆ,
ಕೆಲಸದ ಒತ್ತಡದಿಂದಾಗಿ ಹಲವಾರು ಗ್ರಾಮ ಆಡಳಿತಾಧಿಕಾರಿಗಳು ವಿವಿಧ ಕಾಯಿಲೆಗಳಿಗೆ ತುತ್ತಾಗಿ ಸಾವನ್ನಪಿದ್ದಾರೆ. ಕೆಲವರು ಇಲಾಖೆಯಿಂದ ಶಿಕ್ಷೆಗೆ ಗುರಿಯಾಗಿದ್ದಾರೆ ಸರ್ಕಾರ ಕಂದಾಯ ಇಲಾಖೆ ಕೆಲಸಗಳ ಜೋತೆಗೆ ಹೊಸದಾಗಿ, ಇ – ಆಫೀಸ್, ಆಧಾರ್ ಸೀಡ್,ಲ್ಯಾಂಡ್ ಬೀಟ್, ಬಗರ್ ಹುಕ್ಕುಂ,ಪೌತಿ ಖಾತಾ ಆಂದೋಲನ, ನವೋದಯ, ಗರುಡ, ಭೂಮಿ, ವೋಟರ್ ಹೆಲ್ಪ್ ಲೈನ್, ಬೆಳೆ ಸಮೀಕ್ಷೆ ವೆಬ್, ಕೃಷಿ ಗಣತಿ ಪಿಎಂ ಕಿಸಾನ್ ಸೇರಿದಂತೆ ಹಲವಾರು ತಂತ್ರಜ್ಞಾನದ ನೂತನ ಆಪ್ ಗಳನ್ನು ನೀಡಿದ್ದು, ಹೊಸ ತಂತ್ರಾಂಶದಲ್ಲಿ ಕೆಲಸ ನಿರ್ವಹಿಸುವ ಕಾರ್ಯಭಾರದ ಒತ್ತಡವಿದೆ,ತಾಲೂಕಿನಲ್ಲಿ 54 ವೃತ್ತಗಳ ಪೈಕಿ 27ಜನ ಗ್ರಾಮ ಆಡಳಿತಾಧಿಕಾರಿಗಳು ಕೆಲಸ ನಿರ್ವಹಿಸಬೇಕಿದೆ. ಗ್ರಾಮೀಣ ಭಾಗದಲ್ಲಿ ಕೆಲಸ ನಿರ್ವಹಿಸು ಮೂಲಸೌಕರ್ಯಗಳ ಕೊರತೆ ಹಾಗೂ ಸೂಕ್ತ ಸಿಬಂದ್ದಿ ಕೊರತೆಯ ಕಾರಣ ಒತ್ತಡ ಹೆಚ್ಚಾಗಿದೆ ಎಂದುರು.
ಸರ್ಕಾರ ಕೂಡಲೇ ಗ್ರಾಮಾಡಳಿತಾಧಿಕಾರಿಗಳಿಗೆ ಜಾಬ್ ಚಾರ್ಟ್ ನೀಡಬೇಕು, ಪ್ರತಿ ಹತ್ತು ವರ್ಷಕ್ಕೊಮ್ಮೆ ಪದ್ದೋನ್ನತಿ ನೀಡಬೇಕು, ವಯಸ್ಸಿನ ಜೇಷ್ಠತೆ ಆಧಾರದಲ್ಲಿ ಗ್ರಾಮಾಡಳಿತಾಧಿಕಾರಿ ಗ್ರೇಡ್ 1ಮತ್ತು 2 ಎಂದು ವರ್ಗೀಕರಿಸಿ ಪದ್ದೋನ್ನತಿ ಸವಲತ್ತು ನೀಡಬೇಕು, ಸಿಬ್ಬಂದಿಗಳು ಕೆಲಸದ ಅವಧಿ ಹೊರತುಪಡಿಸಿ, ಬೇರೆಸಮಯದಲ್ಲಿ ಮೇಲಾಧಿಕಾರಿಗಳು ಕೆಲಸ ನೀಡದಂತೆ ನಿರ್ದೇಶನ ನೀಡಬೇಕು. ಪ್ರತಿ ಕಂದಾಯ ವೃತ್ತಗಳ ಸುಸಜ್ಜಿತ ಕಚೇರಿ ನೀಡುವ ಜೊತೆಗೆ ಪ್ರತಿಯೊಬ್ಬ ಸಿಬ್ಬಂದಿಗೂ ವೈಫೈ, ಲ್ಯಾಪ್ ಟಾಪ್, ಸೇರಿದಂತೆ ಮೂಲಸೌಕರ್ಯ ಒದಗಿಸ ಬೇಕು, ಗ್ರಾಮ ಆಡಳಿತಾಧಿಕಾರಿಗಳನ್ನು ಅಂತರ್ ಜಿಲ್ಲಾ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು
ಗ್ರಾಮ ಆಡಳಿತಾಧಿಕಾರಿಗಳಿಂದ ಮನವಿಪತ್ರ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಪವನ್ ಕುಮಾರ್, ಗ್ರಾಮ ಆಡಳಿತಾಧಿಕಾರಿಗಳು ಹಲವಾರು ಬೇಡಿಕೆಗಳಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದು, ಗ್ರಾಮ ಆಡಳಿತಾಧಿಕಾರಿಗಳಿಗೆ ಗ್ರಾಮೀಣ ಪ್ರದೇಶಗಳಲ್ಲಿ ಇರುವಂತಹ ಕಾರ್ಯಭಾರದ ಒತ್ತಾಡಗಳ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೂ ತರಲಾಗಿದೆ,17 ಕ್ಕೂ ಹೆಚ್ಚು ಹೊಸ ತಂತ್ರಾಂಶದ ಹ್ಯಾಪ್ ಗಳನ್ನ ನೀಡಿರುವ ಕಾರಣ ಕೆಲಸದ ಒತ್ತಡ ಹೆಚ್ಚಾಗಿರುವುದು, ಸಹಜ ಆದರೇ ಕೆಲಸದ ಒತ್ತಡ ಕಡಿಮೆ ಮಾಡಲು, ಸರ್ಕಾರವೂ ಸಹ ಹಲವಾರು ಕ್ರಮಗಳನ್ನ ಕೈಗೊಂಡಿದ್ದು. ಸಿಬ್ಬಂದಿ ನೇಮಕಾತಿ ಹಾಗೂ ಮೂಲ ಸೌಕರ್ಯ ನೀಡಲು ಕ್ರಮವಹಿಸುತ್ತಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಹಕರಿಸಲು ಸಿಬ್ಬಂದಿಗೆ ಮನವಿ ಮಾಡಲಾಗಿದೆ. ನಮ್ಮ ಗ್ರಾಮ ಆಡಳಿತಾಧಿಕಾರಿಗಳ ಬೇಡಿಕೆಗಳನ್ನ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.
ಕಂದಾಯ ನೌಕರರ ಸಂಘದ ಅಧ್ಯಕ್ಷ ರವಿಕುಮಾರ್ ಮಾತನಾಡಿ ಗ್ರಾಮ ಆಡಳಿತಾಧಿಕಾರಿಗಳ ಸಂಘದ ಹೋರಾಟಕ್ಕೆ ಕಂದಾಯ ನೌಕರರ ಸಂಘದಿಂದ ಸಂಪೂರ್ಣ ಬೆಂಬಲ ನೀಡಲಾಗಿದೆ . ಸರ್ಕಾರ ಕೂಡಲೇ ಇವರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು
ಪ್ರತಿಭಟನೆಯಲ್ಲಿ ತಿಪಟೂರು ತಾಲೂಕು ಗ್ರಾಮ ಸಹಾಯಕರ ಸಂಘ ಸಂಪೂರ್ಣ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಗ್ರಾಮ ಆಡಳಿತಾಧಿಕಾರಿಗಳ ಸಂಘದ ಉಪಾಧ್ಯಕ್ಷ, ರವಿಶಂಕರ್, ಕಾರ್ಯದರ್ಶಿ ದೀಪಕ್ ಬೂದಾಳ್, ರವಿಕುಮಾರ್, ಗ್ರೇಡ್ 2 ತಹಸೀಲ್ದಾರ್ ಜಗನ್ನಾಥ್, ಭವ್ಯ, ಯಮುನ ಶಾಲಿನಿ, ಮನು ನಾಯಕ್ ಶಿವರಾಮ್, ಶ್ರೀಹರ್ಷ ಮುಂತ್ತಾದವರು ಉಪಸ್ಥಿತರಿದರು
ವರದಿ – ಮಂಜುನಾಥ್ ಹಾಲ್ಕುರಿಕೆ ತಿಪಟೂರು