ವಿಜಯನಗರ | ಮನರೇಗಾ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸುವಂತೆ ಆಗ್ರಹ

Date:

Advertisements

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ(ಮನರೇಗಾ) ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಠಿಗೆ ಅತಿ ದೊಡ್ಡ ಕೊಡುಗೆಯಾಗಿದೆ ಎಂದು ತಾಲೂಕು ಕಾರ್ಯಕರ್ತೆ ಕೊಟ್ರಮ್ಮ ತಿಳಿಸಿದರು.

ಮನರೇಗಾ ಸಮರ್ಪಕ ಅನುಷ್ಠಾನಕ್ಕಾಗಿ ರಾಯಚೂರಿನಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹವನ್ನು ಬೆಂಬಲಿಸಿ, ಗ್ರಾಮೀಣ ಕೂಲಿಕಾರರ ಕಾರ್ಮಿಕರ ಸಂಘಟನೆಯ ಕಾರ್ಯಕರ್ತರು ಹಗರಿಬೊಮ್ಮನಹಳ್ಳಿ ಪ್ರತಿಭಟನೆ ನಡೆಸಿದ್ದಾರೆ. ತಹಶೀಲ್ದಾರ್‌ಗೆ ಹಕ್ಕೊತ್ತಾಯ ಸಲ್ಲಿಸಿ ಮಾತನಾಡಿದ್ದಾರೆ.

ಪ್ರತಿಭಟನೆಯಲ್ಲಿ ಮಾತನಾಡಿದ ಕೊಟ್ರಮ್ಮ, “ಮನರೇಗಾ ಯೋಜನೆ ಅವಲಂಬಿಸಿ ಲಕ್ಷಾಂತರ ಮಂದಿ ಬದುಕು ಸಾಗಿಸುತ್ತಿದ್ದು, ಅಂತಹ ಕುಟುಂಬಗಳು ನಿಟ್ಟುಸಿರು ಬಿಡುವಂತಹ ವಾತವರಣ ಸೃಷ್ಠಿಯಾಗಿದೆ” ಎಂದರು.

Advertisements

“ಕೇಂದ್ರ ಸರ್ಕಾರ ವರ್ಷದಿಂದ ವರ್ಷಕ್ಕೆ ಮನರೇಗಾ ಅಡಿ ಹೊಸ ಹೊಸ ಕಾನೂನುಗಳನ್ನು ಜಾರಿಗೊಳಿಸುತ್ತಾ ಬರುತ್ತಿದೆ. ಇದರಿಂದ ದುಡಿಯುವ ಕೈಗಳಿಗೆ ಕೂಲಿ ಸಿಗದೆ ಬ್ಯಾಂಕ್‌ಗಳಿಗೆ ಅಲೆದಾಡುವ ಪರಿಸ್ಥಿತಿ ಬಂದಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಒಂದು ಕಡೆ ಎನ್‌ಎಮ್‌ಎಮ್‌ಎಸ್‌, ಎನ್‌ಪಿಸಿಐ ಮತ್ತು ಎಬಿಪಿಎಸ್‌ ಹೀಗೆ ದಿನಕ್ಕೊಂದು ಹೊಸ ಹೊಸ ಕಾನೂನು ಜಾರಿ ಮಾಡುತ್ತಾ ಬರುತ್ತಿದ್ದು, ಇನ್ನೊಂದು ಕಡೆ ಕೇಂದ್ರ ಸರ್ಕಾರ ವರ್ಷದಿಂದ ವರ್ಷಕ್ಕೆ ಕಡಿಮೆ ಬಜೆಟ್‌ ಮಂಡಿಸುತ್ತಿದೆ. ಕಾರ್ಮಿಕರಿಗೆ 100 ದಿನಗಳ ಕೆಲಸದ ಗ್ಯಾರಂಟಿ ಇಲ್ಲದಂತಾಗಿದೆ” ಎಂದರು.

“ಕೇಂದ್ರ ಸರ್ಕಾರ 2021-22ರಲ್ಲಿ 98,468 ಕೋಟಿ ರೂ.ನಷ್ಟು ಬಜೆಟ್‌ ಮಂಡಿಸಿತ್ತು. ಆದರೆ, ಪ್ರಸ್ತುತ ವರ್ಷದಲ್ಲಿ 60,000 ಕೋಟಿ ರೂ. ಬಜೆಟ್‌ ಮಂಡಿಸಿದೆ” ಎಂದರು.

“ಸದ್ಯ ದೇಶದಲ್ಲಿ 100 ದಿನಗಳ ಕೆಲಸ ಪೂರೈಸಲು 1,80,000 ಕೋಟಿ ಅವಶ್ಯಕತೆ ಇದೆ. ಆದರೂ, ಸರ್ಕಾರ ಅತಿ ಕಡಿಮೆ ಬಜೆಟ್ ಮಂಡಿಸಿದ್ದು, ಸಾಕಷ್ಟು ಷರತ್ತುಗಳನ್ನು ವಿಧಿಸಿದೆ. ಮನರೇಗಾದಲ್ಲಿ ದುಡಿಯುವ ಕಾರ್ಮಿಕರಿಗೆ ಇಷ್ಟೊಂದು  ಷರತ್ತುಗಳನ್ನು ವಿಧಿಸಿರುವಂತೆ ಸರ್ಕಾರಿ ಅಧಿಕಾರಿಗಳಿಗೆ ಏಕಿಲ್ಲ” ಎಂದು ಪ್ರಶ್ನಿಸಿದರು.

“ಮನರೇಗಾ ಸಮಸ್ಯೆಗಳಿಗೆ ಕೂಡಲೇ ಉತ್ತರ ನೀಡಲು ಕೇಂದ್ರ ಸರ್ಕಾರ ಮುಂದೆ ಬರಬೇಕು” ಎಂದು ಕಾರ್ಮಿಕರು ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ಬಿಜೆಪಿ ಸೋಲಿಸಲು ಎದ್ದೇಳು ಕರ್ನಾಟಕ ಅಭಿಯಾನ: ಮಲ್ಲಿಗೆ ಸಿರಿಮನೆ

ಮನರೇಗಾ ಸಮಸ್ಯೆಗಳ ಇತ್ಯರ್ಥಕ್ಕಾಗಿ ರಾಯಚೂರಿನಲ್ಲಿ ರಾಜ್ಯ ಮಟ್ಟದ ಅನಿರ್ದಿಷ್ಠಾವಧಿ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಅಭಯ್ ಕುಮಾರ್‌ ಗ್ರಾಮೀಣ ಕೂಲಿಕಾರರ ಕಾರ್ಮಿಕರ ಸಂಘಟನೆ (ಗ್ರಾಕೂಸ) ಸಂಸ್ಥಾಪಕರು ಮನರೇಗಾ ಜೀವಾಳ ಕೂಲಿ ಕಾರ್ಮಿಕರ ಇವರ ಉಪವಾಸ ಸತ್ಯಗ್ರಹಕ್ಕೆ ಹಾಗೂ 2 ತಿಂಗಳನಿಂದ ದೆಹಲಯಲ್ಲಿ 18 ರಾಜ್ಯಗಳ ಕೂಲಿ ಕಾರ್ಮಿಕರ ಹೋರಾಟಕ್ಕೆ ಬೆಂಬಲಸಿ ಹಕ್ಕೊತ್ತಾಯವನ್ನು ಸಲ್ಲಿಸಿದರು ..

“ಮನರೇಗಾ ಬಜೆಟ್‌ನ ಅನುದಾನವನ್ನು ಕೂಡಲೇ ಹೆಚ್ಚಿಸಬೇಕು. ದುಡಿಯುವ ಕೈಗಳಿಗೆ ₹800 ಗೌರವಯುತ ಕೂಲಿ ನಿಗಧಿಸಬೇಕು. ತಾಂತ್ರಿಕ ಸಮಸ್ಯೆಗಳಾಗಿರುವ ಎನ್‌ಎಮ್‌ಎಮ್‌ಎಸ್ ಕೈ ಬಿಡಬೇಕು” ಎಂದು ಒತ್ತಾಯಿಸಿದರು.

“ಕಾನೂನು ಪ್ರಕಾರ ತಾಂತ್ರಿಕ ಸಮಸ್ಯೆಯ ಕಾರಣ ಹೇಳದೆ 15 ದಿನಗಳೊಳಗೆ ಕೂಲಿ ಪಾವತಿಸಬೇಕು. ಗುದ್ದಲಿ, ಚಲಕ ತೊಳೆತ ವೆಚ್ಚ ₹40 ಪಾವತಿಸಬೇಕು. ನರೇಗಾದಡಿ ಪತ್ರಿ ಕುಟುಂಬಕ್ಕೆ 200 ದಿನಗಳ ಗ್ಯಾರಂಟಿ ಕಾನೂನು ಜಾರಿ ಮಾಡಬೇಕು.

ಈ ಸಂದರ್ಬದಲ್ಲಿ ಅಕ್ಕಮ್ಮ ಮರಬ್ಬಿಹಾಳು, ಹನುಮಂತ, ತ್ರಿವೇಣಿ, ಶಿಲ್ಪಾ, ಸಮ್ರಿನ್ ಸೇರಿದಂತೆ ಇನ್ನಿತರರು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X