ವೈಮಾನಿಕ ದಾಳಿ ನಡೆಸಿ ಹಿಜ್ಬುಲ್ಲಾದ ಮತ್ತೋರ್ವ ಉನ್ನತ ಅಧಿಕಾರಿಯನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಸೇನೆ ಭಾನುವಾರ ತಿಳಿಸಿದೆ.
ಶನಿವಾರ ನಡೆದ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾದ ಸೆಂಟ್ರಲ್ ಕೌನ್ಸಿಲ್‌ನ ಉಪ ಮುಖ್ಯಸ್ಥ ನಬಿಲ್ ಕೌಕ್ ಹತ್ಯೆಯಾಗಿದೆ ಎಂದು ಸೇನೆ ಹೇಳಿದೆ. ಆದರೆ ಹಿಜ್ಬುಲ್ಲಾ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದನ್ನು ಓದಿದ್ದೀರಾ? ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಹತ್ಯೆ: ಇಸ್ರೇಲ್ ಸೇನೆ
ಶುಕ್ರವಾರ ಬೈರುತ್‌ನಲ್ಲಿ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಹತ್ಯೆ ಮಾಡಲಾಗಿದೆ. ಈ ವಾರದಲ್ಲಿ ಇಸ್ರೇಲ್ ದಾಳಿಯಿಂದಾಗಿ ಹಲವಾರು ಹಿರಿಯ ಹಿಜ್ಬುಲ್ಲಾ ಕಮಾಂಡರ್‌ಗಳು ಸಾವನ್ನಪ್ಪಿದ್ದಾರೆ.
ಇಸ್ರೇಲ್ ಕಳೆದ ವಾರದಲ್ಲಿ ಲೆಬನಾನ್‌ನ ಬಹುತೇಕ ಭಾಗಗಳಲ್ಲಿ ವೈಮಾನಿಕ ದಾಳಿಯನ್ನು ನಡೆಸಿದೆ. ಪೇಜರ್‌ಗಳು ಮತ್ತು ವಾಕಿ-ಟಾಕಿಗಳ ಮೇಲೆ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ.
ಈ ನಡುವೆ ಉತ್ತರ ಇಸ್ರೇಲ್‌ಗೆ ನೂರಾರು ರಾಕೆಟ್‌ಗಳು ಮತ್ತು ಕ್ಷಿಪಣಿಗಳ ದಾಳಿ ಮಾಡುವುದನ್ನು ಹಿಜ್ಬುಲ್ಲಾ ಮುಂದುವರಿಸಿದೆ. ಆದರೆ ಈ ಪೈಕಿ ಅಧಿಕ ರಾಕೆಟ್, ಕ್ಷಿಪಣಿಗಳು ತಡೆಹಿಡಿಯಲಾಗಿದೆ ಅಥವಾ ತೆರೆದ ಪ್ರದೇಶಗಳಲ್ಲಿ ಬಿದ್ದಿವೆ ಎಂದು ವರದಿಯಾಗಿದೆ.
