ಸಂಸಾರ ಕಲಹದಿಂದ ಬೇಸತ್ತ ಮಹಿಳೆ ತನ್ನ ಪುಟ್ಟ ಗಂಡು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಬೊಮ್ಮನಾಳ ಗ್ರಾಮದ ಯಲ್ಲವ್ವ ಕರಿಹೊಳೆ (30), ತನ್ನ ಮಕ್ಕಳಾದ ಸಾತ್ವಿಕ್ (5), ಮುತ್ತಪ್ಪ (1) ಜತೆಗೆ ಬಾವಿಗೆ ಹಾರಿದ್ದಾರೆ.
ಭಾನುವಾರ ಪತಿಯೊಂದಿಗೆ ಜಗಳವಾಡಿದ್ದ ಯಲ್ಲವ್ವ ಮನನೊಂದು ಮಧ್ಯಾಹ್ನದ ವೇಳೆ ತನ್ನಿಬ್ಬರು ಪುಟ್ಟ ಮಕ್ಕಳ ಜೊತೆಗೆ ಬಾವಿಗೆ ಹಾರಿ ಕೊನೆಯುಸಿರೆಳೆದಿದ್ದಾರೆ. ಸಾವಿಗೆ ಕೌಟುಂಬಿಕ ಕಲಹ ಕಾರಣ ಎನ್ನಲಾಗುತ್ತಿದೆ. ಮೂವರ ಶವ ಬಾವಿಯಲ್ಲಿ ಪತ್ತೆಯಾಗಿದೆ.
ಈ ಸುದ್ದಿ ಓದಿದ್ದೀರಾ? ಶೂದ್ರರಿಗೆ ಮಾನ ಮರ್ಯಾದೆ ಇದ್ದರೆ ದೇವಸ್ಥಾನಕ್ಕೆ ಹೋಗಬಾರದು: ಕೆ ಎಸ್ ಭಗವಾನ್
ಈ ಕುರಿತು ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.