ಮೈಸೂರು | ಉಪಯೋಗವಾಗದ ಅಂಡರ್ ಪಾಸ್; ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಹಿಡಿಶಾಪ

Date:

Advertisements

ಮೈಸೂರು ಸ್ವಚ್ಛತೆ ವಿಚಾರದಲ್ಲಿ ದೇಶದ ಗಮನ ಸೆಳೆಯುವ ನಗರ, ಅದರಲ್ಲೂ ವಿಶ್ವದ ಮಟ್ಟಿಗೆ ಪ್ರವಾಸಿಗರನ್ನು ಕೈಬೀಸಿ ಕರೆಯುವ ಪ್ರವಾಸಿಗರ ಸ್ವರ್ಗ. ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟ, ಪಾರಂಪರಿಕ ಕಟ್ಟಡಗಳು ಜನರ ಮನಸ್ಸನ್ನು ಸೆಳೆಯುತ್ತಿವೆ. ಈಗಂತೂ ವಿಶ್ವವಿಖ್ಯಾತ ದಸರಾ ವೀಕ್ಷಣೆಗೆ ಎಲ್ಲೆಲ್ಲಿಯೂ ಜನ.

ಮೈಸೂರು ಬೆಳೆದಂತೆಲ್ಲ ವಾಹನಗಳು, ಜನಸಾಂದ್ರತೆ ಗಿಜಿಗುಡುವ ಹಂತಕ್ಕೆ ದಾಪುಗಾಲಿಡುತ್ತಿದೆ. ಸುಗಮ ಸಂಚಾರದ ವ್ಯವಸ್ತೆಗಾಗಿ, ಪ್ರವಾಸಿಗರಿಗೆ ವಾಹನಗಳ ಕಿರಿಕಿರಿಯಿಂದ ಮುಕ್ತ ಓಡಾಟ ಕಲ್ಪಿಸುವ ಕಾರಣಕ್ಕಾಗಿ ಮೈಸೂರಿನ ಮಹಾನಗರ ಪಾಲಿಕೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದರೆ ಸರಿಸುಮಾರು 8 ರಿಂದ 10 ವರ್ಷಗಳ ಹಿಂದೆ ಸಯ್ಯಾಜಿರಾವ್ ರಸ್ತೆ ಹಾಗೂ ಅರಮನೆ ಮುಂಭಾಗದ(ವಸ್ತು ಪ್ರದರ್ಶನ) ರಸ್ತೆಯಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಅಂಡರ್ ಪಾಸ್ ಮಾರ್ಗ ನಿರ್ಮಿಸಿದೆ.

ಸಯ್ಯಾಜಿರಾವ್ ರಸ್ತೆ ದೊಡ್ಡ ಗಡಿಯಾರ, ಚಿಕ್ಕ ಗಡಿಯಾರ ದೇವರಾಜ ಮಾರ್ಕೆಟ್, ಕೆ ಆರ್ ಆಸ್ಪತ್ರೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಾಗಿದ್ದು, ಯಾವಾಗಲೂ ಜನದಟ್ಟಣೆಯಿಂದ, ವಾಹನಗಳಿಂದ ಜನ ಓಡಾಟ ನಡೆಸಲು ಸಾಧ್ಯವಾಗದಷ್ಟು ಕಿರಿಕಿರಿಯನ್ನುಂಟು ಮಾಡುವ ಪ್ರದೇಶ.

Advertisements
ಮೈಸೂರು ಅಂಡರ್‌ ಪಾಸ್ 2

ದೇವರಾಜ ಮಾರ್ಕೆಟ್, ಕೆಟಿ ಸ್ಟ್ರೀಟ್, ಬಹುತೇಕ ಬಟ್ಟೆ ಅಂಗಡಿಗಳು, ಎಲೆಕ್ಟಿಕ್ ಮಳಿಗೆಗಳು, ಮೆಡಿಕಲ್ ಶಾಪ್ ಎಲ್ಲವೂ ಒಂದೆಡೆ ಇರುವುದರಿಂದ ಸಾರ್ವಜನಿಕರಿಗೆ ಇಲ್ಲಿಯ ಓಡಾಟ ಅತ್ಯಗತ್ಯ. ರಸ್ತೆ ಕಿರಿದಾಗಿದ್ದು ರಸ್ತೆ ಬದಿಗಳಲ್ಲಿ ಬೈಕ್ ಪಾರ್ಕಿಂಗ್ ಇರುವುದರಿಂದ, ರಸ್ತೆಯಲ್ಲಿ ವಾಹನಗಳು ಸರಾಗವಾಗಿ ಓಡಾಡಲಾರವು.

ಇನ್ನ ಅರಮನೆ ಮುಂಭಾಗದಲ್ಲಿ ಪ್ರವಾಸಿಗರು ರಸ್ತೆ ದಾಟಲು ಇನ್ನಿಲ್ಲದ ತೊಂದರೆ ಅನುಭವಿಸಬೇಕು. ಅರಮನೆ ಕಡೆಯಿಂದ ವಸ್ತು ಪ್ರದರ್ಶನದ ಕಡೆಗೆ ರಸ್ತೆ ದಾಟುವುದು ಸಾಹಸಮಯದ ಕೆಲಸ. ವಾಹನಗಳು ಹಿಂದಿಂದೆ ಒಂದರ ಮೇಲೊಂದರಂತೆ ಬರುತ್ತಿರುತ್ತವೆ. ಇಂತಹ ಸಮಸ್ಯೆ ನಿವಾರಣೆಗೆ ಅಂಡರ್ ಪಾಸ್ ಕಾಮಗಾರಿ ನಡೆದು ಹಲವಾರು ವರ್ಷಗಳೇ ಕಳೆಯುತ್ತಿದ್ದರು ಮಹಾನಗರ ಪಾಲಿಕೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಈಗ ವಿಶ್ವವಿಖ್ಯಾತ ದಸರಾ ನಡೆಯುವ ಸಮಯ. ದೇಶ ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಮೈಸೂರಿನಲ್ಲಿ ನಿರಂತರ ಓಡಾಟ ಇರುವಾಗ ಅಂಡರ್ ಪಾಸ್ ಇದ್ದರೂ ಸಾರ್ವಜನಿಕರಿಗೆ ಲಭ್ಯವಿಲ್ಲದೆ ಇರುವುದು ಶೋಚನೀಯ ಸಂಗತಿ.

ಮೈಸೂರು ಅಂಡರ್‌ ಪಾಸ್ 3

ಆಮ್ ಆದ್ಮಿ ಪಕ್ಷದ ಮೈಸೂರು ಜಿಲ್ಲಾಧ್ಯಕ್ಷ ರಂಗಯ್ಯ ಈ ದಿನ.ಕಾಮ್ ಜೊತೆ ಮಾತನಾಡಿ, “ಮೈಸೂರಿನ ಅಭಿವೃದ್ಧಿಗಾಗಿ ಜನರ ತೆರಿಗೆ ಹಣದಲ್ಲಿ ಎರಡೂ ಕಡೆ ಅಂಡರ್ ಪಾಸ್ ಮಾಡಿದ್ದಾರೆ. ಆದರೆ ಜನರ ಉಪಯೋಗಕ್ಕೆ ಲಭ್ಯವಾಗಿಲ್ಲ. ಬದಲಿಗೆ ಗಬ್ಬು ನಾರುತ್ತಿದೆ. ಒಳಗೆಲ್ಲ ನೀರು ಸೇರಿಕೊಂಡಿದೆ ಸ್ವಚ್ಛತೆ ಕಂಡಿಲ್ಲ, ಯಾರೂ ಕೂಡ ಗಮನ ಹರಿಸುತ್ತಿಲ್ಲ. ಪಾಲಿಕೆಯವರು ದಪ್ಪನೆಯ ಬೀಗ ಜಡಿದಿದ್ದಾರೆ” ಎಂದು ಹೇಳಿದರು.

ಮೈಸೂರು ಅಂಡರ್‌ ಪಾಸ್ 4

ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಜನರ ಉಪಯೋಗಕ್ಕೆ ಕಲ್ಪಿಸದೆ, ಬೀಗ ಜಡಿಯುವುದೇ ಅಭಿವೃದ್ಧಿನಾ? ಈ ಪುರುಷಾರ್ಥಕ್ಕೆ ಜನರ ಹಣ ಖರ್ಚು ಮಾಡಬೇಕಿತ್ತ? ಜನ ರಸ್ತೆ ದಾಟಲು ಕಷ್ಟಪಡುತ್ತಿರುವಾಗ ಅಂಡರ್ ಪಾಸ್ ಬಳಸಲು ವ್ಯವಸ್ಥೆ ಮಾಡಿಲ್ಲ. ಕೋಟ್ಯಂತರ ರೂಪಾಯಿ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಸಯ್ಯಾಜಿರಾವ್ ರಸ್ತೆಯಲ್ಲಿ ಓಡಾಡಬೇಕು ಅಂದರೆ ಪ್ರಾಣ ಕೈಯಲ್ಲಿಡಿದುಕೊಂಡೆ ಓಡಾಡಬೇಕು. ಸರಾಗವಾಗಿ ರಸ್ತೆ ದಾಟಲು ಯಾವುದೇ ಅವಕಾಶಗಳಿಲ್ಲ. ಎಲ್ಲೆಂದರಲ್ಲಿ ಜನದಟ್ಟಣೆ, ವಾಹನಗಳು ಹೀಗಿರುವಾಗ ಅಂಡರ್ ಪಾಸ್ ಯಾಕೆ ಮಾಡಿದ್ದು?” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು ಅಂಡರ್‌ ಪಾಸ್‌ 1

ಕಾರ್ಯದರ್ಶಿ ವಿಶ್ವನಾಥ್ ಕುಲಕರ್ಣಿ ಮಾತನಾಡಿ, “ಮೈಸೂರಿಗೆ ವಿಶ್ವದಲ್ಲೇ ಹೆಸರಿದೆ. ಈಗ ದಸರಾ ಸಮಯ. ಜನ ರಸ್ತೆ ದಾಟುವಾಗ ಹಿಡಿಶಾಪ ಹಾಕುತ್ತಿದ್ದಾರೆ. ಸಯ್ಯಾಜಿರಾವ್ ರಸ್ತೆ ಮೈಸೂರಿಗೆ ಹೃದಯಭಾಗ, ಯಾಕೆಂದರೆ ಒಂದು ಔಷಧಿ ಬೇಕು ಅಂದರೂ ಇಲ್ಲಿಗೆ ಬರಬೇಕು, ಮನೆಗೆ ಅಗತ್ಯವಿರುವ ತರಕಾರಿ, ಸರಂಜಾಮು ಬೇಕು ಅಂದರೂ ದೇವರಾಜ ಮಾರ್ಕೆಟ್‌ಗೆ ಬರಬೇಕು. ಅಗತ್ಯತೆಯ ಖರೀದಿ ಏನೇ ಇದ್ದರೂ ಇಲ್ಲಿಗೆ ಬರಬೇಕು. ಇದೇ ರಸ್ತೆ ದಾಟುತ್ತಾ ಸಾಗಬೇಕು.
ಹೀಗಿರುವಾಗ ಕಿರಿದಾದ ರಸ್ತೆಯಲ್ಲಿ ಸ್ವಲ್ಪವೂ ಬಿಡುವಿಲ್ಲದೆ ಓಡಾಡುವ ವಾಹನಗಳ ಮಧ್ಯೆ ಜನ ಹೇಗೆ ಓಡಾಡಬೇಕು. ಇದೆಲ್ಲ ಮಹಾನಗರ ಪಾಲಿಕೆ ಅಧಿಕಾರಿಗಳ ಕಣ್ಣಿಗೆ ಕಾಣೋದೇ ಇಲ್ವಾ. ಅಂಡರ್ ಪಾಸ್ ಜನರ ಸೇವೆಗೆ ಕೊಡದೆ ಇನ್ನೆಷ್ಟು ದಿನ ಹೀಗೆ ಹಾಳುಗೆಡವುತ್ತಾರೆ” ಎಂದು ಪ್ರಶ್ನಿಸಿದರು.

ರಸ್ತೆ ದಾಟುವುದು

ವಾರ್ಡ್ ಅಧ್ಯಕ್ಷ ಮುಜಾಹಿದ್ದೀನ್ ಖಾನ್ ಮಾತನಾಡಿ, “ಅಂಡರ್ ಪಾಸ್ ಜನರ ಸೇವೆಗೆ ಲಭ್ಯವಿರದೆ ಪುಂಡರ, ಕುಡುಕರ ಅಡ್ಡೆಯಾಗಿದೆ. ಕೆಲವು ಕಡೆ ಮೇಲ್ನೋಟಕ್ಕೆ ಬೀಗ ಹಾಕಿದ್ದಾರೆ. ಆದರೆ ಕೆಲವು ಕಡೆ ರಾತ್ರಿ ಆದರಂತೂ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆ. ಮೈಸೂರಿನಲ್ಲಿ ಜನ ನೆಮ್ಮದಿಯಾಗಿ ಓಡಾಡಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅಧಿಕಾರಿಗಳಿಗೆ, ಸರ್ಕಾರಗಳಿಗೆ ಜನರ ಹಿತ ಮುಖ್ಯವಲ್ಲ, ಜನರ ತೆರಿಗೆ ಹಣ ಪೋಲು ಮಾಡಿ, ಪಾಳು ಬೀಳಿಸಿ ಯಾವುದಕ್ಕೂ ಪ್ರಯೋಜನ ಇಲ್ಲದಂತೆ ಮೈಸೂರಿನ ಮಾನ ತೆಗೆಯುವ ಕೆಲಸ ಮಾಡುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನ ಕಾರ್ಯದರ್ಶಿ ಐಶ್ವರ್ಯ ಮಾತನಾಡಿ, “ಮೈಸೂರಿನ ಎರಡೂ ಕಡೆ ನಿರ್ಮಾಣವಾಗಿರುವ ಅಂಡರ್ ಪಾಸ್ ಕೂಡಲೇ ಜನ ಸೇವೆಗೆ ಲಭ್ಯವಾಗಬೇಕು. ಮಹಾನಗರ ಪಾಲಿಕೆ ಅಧಿಕಾರಿಗಳು ಕೂಡಲೇ ಸಂಬಂಧಪಟ್ಟ ಸಚಿವರು, ಇಲಾಖೆ ಜೊತೆ ಮಾತನಾಡಿ ಸ್ವಚ್ಛಗೊಳಿಸಿ, ವಿದ್ಯುತ್ ದೀಪ ಅಳವಡಿಸಿ ಕೂಡಲೇ ಸಿಬ್ಬಂದಿಗಳನ್ನು ನೇಮಿಸಬೇಕು. ಜನಸಾಮಾನ್ಯರ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕು” ಎಂದು ಆಗ್ರಹಿಸಿದ್ದಾರೆ.

WhatsApp Image 2023 09 02 at 8.42.26 PM
ಮೋಹನ್ ಜಿ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X