ಹಲವು ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಶೀಘ್ರವಾಗಿ ನೇಮಕ ಮಾಡಿಕೊಳ್ಳುವಂತೆ ಆಗ್ರಹಿಸಿ ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಪ್ರೊಫೆಷನಲ್ ಸೋಶಿಯಲ್ ವರ್ಕರ್ಸ್, ವೆಲ್ಫೇರ್ ಅಸೋಸಿಯೇಷನ್ ಹಾಗೂ ಚೇತನ ಬಿಎಸ್‌ಡಬ್ಲ್ಯೂ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪತ್ರ ಚಳವಳಿಯ ಮೂಲಕ ಸರ್ಕಾರಕ್ಕೆ ಮನವಿ ಮಾಡಿದರು.
ಚೇತನ್ ಬಿ ಎಸ್ ಡಬ್ಲ್ಯೂ ಕಾಲೇಜಿನ ಪ್ರಾಂಶುಪಾಲರಾದ ಅಜಯ ನೀಲವಾಣಿ ಮಾತನಾಡಿ, “ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳಲ್ಲಿ ಆಪ್ತ ಸಮಾಲೋಚಕರು, ಸಂಯೋಜಕರು, ಮನೋವೈದ್ಯಕೀಯ ಸಮಾಜಕ ಕಾರ್ಯಕರ್ತರು, ಹಿರಿಯ ಮೇಲ್ವಿಚಾರಕ, ತಾಂತ್ರಿಕ ಬೆಂಬಲಿಗ ಸೇರಿದಂತೆ ಇನ್ನಿತರೆ ಇಲಾಖೆಗಳ ವಿವಿಧ ಹುದ್ದೆಗಳಲ್ಲಿ ಸುಮಾರು 10-12 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಗುತ್ತಿಗೆ ಮತ್ತು ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದಾರೆ. ಸರ್ಕಾರ ಈ ಗುತ್ತಿಗೆ ಮತ್ತು ಹೊರಗುತ್ತಿಗೆ ಪದ್ಧತಿಯನ್ನು ನಿಲ್ಲಿಸಿ, ಶೀಘ್ರವೇ ಕಾಯಂ ಮಾಡಿಕೊಳ್ಳಬೇಕು” ಎಂದು ಪತ್ರ ಚಳುವಳಿಯ ಮೂಲಕ ಸರ್ಕಾರಕ್ಕೆ ಮನವಿ ಮಾಡಿದರು.
ಬಿಎಸ್‌ಡಬ್ಲ್ಯೂ ಪದವಿ ಮತ್ತು ಎಂಎಸ್‌ಡಬ್ಲ್ಯೂ ಸ್ನಾತಕೋತರ ಪದವಿ ತೇರ್ಗಡೆಯಾದ ಹೊಸ ಅಭ್ಯರ್ಥಿಗಳಿಗೆ ಸರ್ಕಾರದ ವಿವಿಧ ಇಲಾಖೆ ಶಿಕ್ಷಣ, ಸಮಾಜ ಕಲ್ಯಾಣ, ಗೃಹ, ಕಾರ್ಮಿಕ ಇಲಾಖೆ ಸೇರಿದಂತೆ ಇನ್ನಿತರೆ ಇಲಾಖೆಗಳಲ್ಲಿ ಹೊಸದಾಗಿ ನೇಮಕ ಮಾಡಿಕೊಳ್ಳಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಭೂಮಿಯ ಜತೆಗಿನ ವಸ್ತು ನಮಗೆ ಸ್ಥಳೀಯ ಎನಿಸುತ್ತದೆ: ಹಿರಿಯ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ
ಈ ಪತ್ರ ಚಳುವಳಿ ಕಾರ್ಯಕ್ರಮದಲ್ಲಿ ನರಗುಂದ ತಾಲೂಕ ಪಂಚಾಯತ್ ಎನ್‌ಆರ್‌ಎಲ್‌ಎಂ ಯೋಜನೆಯ ಟಿ ಪಿ ಎಂ ಮೋಹನ್ ಕೃಷ್ಣ ಟಿ, ನರಗುಂದ ತಾಲೂಕ ಆಸ್ಪತ್ರೆ ಐಸಿಟಿಸಿ ಆಪ್ತ ಸಮಾಲೋಚಕ ಲಕಂಠ ಮಡಿವಾಳರ, ನರಗುಂದ ತಾಲೂಕ ಆಸ್ಪತ್ರೆಯ ಎಸ್ ಟಿ ಎಸ್ ಶಿವಾನಂದ ಕುರಹಟ್ಟಿ, ನರಗುಂದ ತಾಲೂಕ ಆಸ್ಪತ್ರೆ ಸ್ನೇಹ ಕ್ಲಿನಿಕ್ ಆಪ್ತ ಸಮಾಲೋಚಕ ಅಕೀಬ ಹುಲ್ಲೂರು, ವಿದ್ಯಾರ್ಥಿಗಳಾದ ಪಾಂಡುರಂಗ ಗುಡದೂರು, ಸಚಿನ ಹೊಸಂಗಡಿ, ನಾಗರಾಜ ಸೋಮಣ್ಣವರ, ರವಿ ಮೇಟಿ, ಬಿಎಸ್ ಡಬ್ಲ್ಯೂ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಇದ್ದರು.