ಮೈಸೂರು | ಭೂಮಿಯ ಜತೆಗಿನ ವಸ್ತು ನಮಗೆ ಸ್ಥಳೀಯ ಎನಿಸುತ್ತದೆ: ಹಿರಿಯ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ

Date:

ಭೂಮಿ ಕಾದಂಬರಿಯಲ್ಲಿ ಭೂಮಿಯ ಜತೆಗಿನ ವಸ್ತು ನಮಗೆ ಸ್ಥಳೀಯ ಅನ್ನಿಸುತ್ತದೆ ಎಂದು ನಿವೃತ್ತ ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿಗಳು ಹಾಗೂ ಹಿರಿಯ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿಯವರು ಅಭಿಪ್ರಾಯಪಟ್ಟರು.

- Advertisement -

ಮೈಸೂರು ರಂಗಾಯಣದಲ್ಲಿ ಸೃಷ್ಟಿ ಪಬ್ಲಿಕೇಷನ್‌, ಬೆಂಗಳೂರು ಹಸಿರು ಆರ್ಗ್ಯಾನಿಕ್ಸ್‌ ಪ್ರಕಟಿಸಿರುವ ಬಂಜಗೆರೆ ಜಯಪ್ರಕಾಶ್ ಅವರ ʼಭೂಮಿʼ ಪುಸ್ತಕದ ಲೋಕಾರ್ಪಣೆ ವೇಳೆ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ದಿವಾಳಿ ಕಂಪನಿಗಳ ಬಿಡ್‌ನಲ್ಲಿ ಅದಾನಿಯದ್ದೇ ಮೇಲುಗೈ; ಸಾಲಗಾರರಿಗೆ ₹97,700...

ಭಾರತದ ದಿವಾಳಿ ಹಂತದಲ್ಲಿದ್ದ ಕಂಪನಿಗಳ ಬಿಡ್‌ ಪ್ರಕ್ರಿಯೆಗಳಲ್ಲಿ ಅದಾನಿ ಗ್ರೂಪ್‌ನ ಅಸಾಧಾರಣ ಯಶಸ್ಸಿನ ಹಿಂದೆ ರಹಸ್ಯವೊಂದಿದೆ! ಪ್ರತಿ ಐದರಲ್ಲಿ ಮೂರು ಬಿಡ್‌ಗಳನ್ನು ಗೆದ್ದು, ದೇಶದ ಅತಿ ದೊಡ್ಡ ಕಾರ್ಪೊರೇಟ್ ಸ್ವಾಧೀನದಾರನಾಗಿ ಹೊರಹೊಮ್ಮಿರುವ ಅದಾನಿ...

ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ, ವ್ಯವಸ್ಥೆಯ ಮೇಲಿನ...

ಜೆಪಿಯ ಟೀಕೆಗಳು ತೀಕ್ಷ್ಣವಾಗಿದ್ದರೂ, ಅದು ಅಹಿಂಸಾತ್ಮಕವಾಗಿದೆ. ಹೆದ್ದಾರಿ ತಡೆಗಳಿಲ್ಲ, ಬಲವಂತದ ಬಂದ್‌ಗಳಿಲ್ಲ. ವಾಸ್ತವವಾಗಿ, ಶಾಂತಿಯುತ ಸಭೆಗೆ ಜಾಗ ನೀಡದೆ ಸರ್ಕಾರವೇ ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಈ ಉದ್ದೇಶವನ್ನು ಬೆಂಬಲಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗೆ...

“ಗಾಂಧೀಜಿ ಹೇಳಿದಂತೆ ಭಾರತ ಮೂಲಭೂತವಾಗಿ ಹಳ್ಳಿಗಳ ಮತ್ತು ರೈತರ ದೇಶ. ಯವ್ಯಾವ ದೇಶಗಳಲ್ಲಿ ಕೃಷಿಯನ್ನು ಪ್ರಾಥಮಿಕ ಉದ್ಯೋಗ(ಪ್ರೈಮರಿ ಆಕ್ಯುಪೇಷನ್‌)ವನ್ನಾಗಿ ಮಾಡಿಕೊಂಡಿರುತ್ತಾರೆ, ಅಲ್ಲಿಯವರಿಗೆ ಇಂತಹ ಕಾದಂಬರಿಗಳು ಬಹಳ ಬೇಗ ಅವರ ಹೃದಯಕ್ಕೆ ತಟ್ಟುತ್ತವೆ” ಎಂದು ಮನ ಮಿಡಿದರು.

“ಕೃತಿಗಳು ಅನುವಾದಗೊಳ್ಳುವ ಪ್ರಕ್ರಿಯೆಯೊಳಗೆ ಯಾವ್ಯಾವ ರೀತಿಯ ಸ್ವರೂಪವನ್ನು ತಾಳುತ್ತವೆಂಬುದನ್ನು ನಾನು ಬಹಳ ಹತ್ತಿರದಿಂದ ಬಲ್ಲೆ. ಎಷ್ಟೇ ಸುಲಭವಾದ ಅಥವಾ ಕಠಿಣವಾದ ಪದವಾಗಿರಲಿ, ಇಲ್ಲವೇ ನೂರು ಪೇಜಿನ ಪುಸ್ತವಾಗಿರಲಿ, 1000 ಪುಟಗಳ ಪುಸ್ತಕವಾಗಿದ್ದರೂ ಅನುವಾದಕ್ಕೆಂದು ತೆಗೆದುಕೊಂಡಾಗ ಸಾಂಸ್ಥಿಕ ಅನುವಾದಗಳ ಅಗತ್ಯವಿದೆ. ಆದರೆ ಅಲ್ಲಿ ಒಂದು ಕೃತಿ ಹತ್ತರಿಂದ ಇಪ್ಪತ್ತು ವರ್ಷಗಳವರೆಗೆ ಅನುವಾದವೇ ಆಗುವುದಿಲ್ಲ” ಎಂದರು.

“ಸೃಷ್ಟಿ ನಾಗೇಶ್‌ ಅವರು ತಮ್ಮ ಪ್ರಕಟಣಾ ಪ್ರಕಾಶನಗಳನ್ನು ಶುರುಮಾಡಿ ಕೆಲವೇ ವರ್ಷಗಳಾಗಿರಬಹುದು. ಆ ಪ್ರಕಟಣೆ ಸಂಸ್ಥಯಲ್ಲಿ ಈಗಾಗಲೇ ನೂರಕ್ಕಿಂತ ಹೆಚ್ಚು ಅನುವಾದದ ಪುಸ್ತಕಗಳು ಬಂದಿವೆ. ಅದು ಯಾವ ಸಾಂಸ್ಥಿಕ ಸಂಸ್ಥೆಯಲ್ಲ. ಒಂದು ಪ್ರಕಟಣಾ ಮಂದಿರ. ಅವರು ವಿಶೇಷವಾಗಿ ಅನುವಾದಗಳನ್ನೇ ಪ್ರಕಟ ಮಾಡುತ್ತಿರುವುದು ಸಂತೋಷದ ವಿಚಾರ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಕಲಬುರಗಿ | ಏಳೆಂಟು ತಿಂಗಳ ಬಾಕಿ ವೇತನ ಪಾವತಿಸುವಂತೆ ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ ಒತ್ತಾಯ

“ಇನ್ನು ʼಭೂಮಿʼ ಎಂಬ ಕಾದಂಬರಿಯನ್ನು ನಾನು ಓದಿದಾಗ ನನಗೆ ಯಾಕೆ ಇಷ್ಟ ಆಯಿತೆಂದರೆ, ಈ ಕಾದಂಬರಿಯಲ್ಲಿ ಸುಮಾರು ನೂರು ಮಂದಿ ಪಾತ್ರಧಾರಿಗಳು ಬರುತ್ತಾರೆ. ಹಾಗೆಯೇ ಈ ಪಾತ್ರದಾರಿಗಳಿಗೆ ಕನ್ನಡದವರ ಹೆಸರನ್ನು ಹಾಕಿದರೆ ನಿಜವಾಗಿಯೂ ಒಂದು ಅಪ್ಪಟ ದೇಶೀಯ ಕೃತಿಯಾಗುತ್ತದೆ. ಇದರಲ್ಲಿರುವ ಭೂಮಿಯ ಜತೆಗಿನ ವಸ್ತು ತುಂಬಾ ಆಪ್ತವೆನಿಸುತ್ತೆ” ಎಂದರು.

ಈ ವೇಳೆ ಬರಗೂರು ರಾಮಚಂದ್ರಪ್ಪ, ಕುಂ.ವೀರಭದ್ರಪ್ಪ, ಸತೀಶ್ ತಿಪಟೂರು, ಸ್ವಾಮಿ ಆನಂದ್, ರೇಣುಕಾರಾಧ್ಯ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯನಗರ | SIR ರದ್ಧತಿ, ಜ್ಞಾನೇಶ್ ಕುಮಾರ್ ವಜಾಕ್ಕೆ ವಿದ್ಯಾರ್ಥಿ ಸಂಘಟನೆಗಳ ಆಕ್ರೋಶ

ಜನವಿರೋಧಿ ಎಸ್‌ಐಆರ್ (SIR) ರದ್ದುಪಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್...

ಗದಗ | ಜ್ಞಾನೇಶ್ ಕುಮಾರ್ ವಜಾಗೊಳಿಸಿ, SIR ರದ್ದುಗೊಳಿಸಲು ಆಗ್ರಹಿಸಿ ಎಸ್ ಎಫ್ ಐ ಮನವಿ

ವಿಶೇಷ ತೀವ್ರ  ಮತ ಪರಿಷ್ಕರಣೆ (ಎಸ್ ಐ ಆರ್) ರದ್ದು ಗೊಳಿಸಲು...

ಹಾವೇರಿ | ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ್ ಹುದ್ದೆಯಿಂದ ವಜಾಗೊಳಿಸಿ: ಬಸವರಾಜ ಎಸ್ ಆಗ್ರಹ

"ಪ್ರಜಾಪ್ರಭುತ್ವ ಭಾರತದಲ್ಲಿ ಜನರ ಅತ್ಯಂತ ಪವಿತ್ರವಾದದ್ದು. ಮತದಾನದ ಹಕ್ಕನ್ನೇ ಕಸಿದುಕೊಳ್ಳುತ್ತಿರುವ ಚುನಾವಣಾ...