ಟೇಕಾಫ್ ಆದ ಕೆಲವೇ ಹೊತ್ತಿನಲ್ಲಿ ಹೆಲಿಕಾಪ್ಟರ್ ಪತನಗೊಂಡು ಇಬ್ಬರು ಪೈಲಟ್ ಸೇರಿ ಮೂವರು ಸಾವನ್ನಪ್ಪಿದ ಘಟನೆ ಇಂದು ಬೆಳಗ್ಗೆ ಪುಣೆಯ ಬವ್ಧಾನ್ನಲ್ಲಿ ನಡೆದಿದೆ.
ಹೆಲಿಕಾಪ್ಟರ್ ದೆಹಲಿ ಮೂಲದ ವಿಮಾನಯಾನ ಸಂಸ್ಥೆಗೆ ಸೇರಿದ್ದು ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಮೃತರಾದ ಮೂವರ ಪೈಕಿ ಇಬ್ಬರು ಪೈಲಟ್ಗಳಾದ ಗಿರೀಶ್ ಕುಮಾರ್ ಪಿಳ್ಳೈ ಮತ್ತು ಪರಮ್ಜಿತ್ ಸಿಂಗ್ ಎಂದು ಗುರುತಿಸಲಾಗಿದೆ. ಇಂಜಿನಿಯರ್ ಪ್ರೀತಮ್ಚಂದ್ ಭಾರದ್ವಾಜ್ ಕೂಡಾ ಸಾವನ್ನಪ್ಪಿದ್ದಾರೆ.
ಹೆಲಿಕಾಪ್ಟರ್ ಟೇಕಾಫ್ ಆದ ಕೆಲವೇ ಸಮಯದಲ್ಲಿ ಗುಡ್ಡಗಾಡು ಪ್ರದೇಶದಲ್ಲಿ ಪತನಗೊಂಡಿದೆ ಎಂದು ಪುಣೆಯ ಪಿಂಪ್ರಿ ಚಿಂಚ್ವಾಡ್ ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಭಾರೀ ಮಳೆ | ಪುಣೆಯಲ್ಲಿ ನಾಲ್ವರು ಪ್ರಯಾಣಿಕರಿದ್ದ ಹೆಲಿಕಾಪ್ಟರ್ ಪತನ
ಆಕ್ಸ್ಫರ್ಡ್ ಗಾಲ್ಫ್ ಕ್ಲಬ್ನ ಹೆಲಿಕಾಪ್ಟರ್ ಬೆಳಗ್ಗೆ 7.30ಕ್ಕೆ ಟೇಕಾಫ್ ಆಗಿದ್ದು, ಐದು ನಿಮಿಷಗಳಲ್ಲಿ ಪತನಗೊಂಡಿದೆ ಎಂದು ಪಿಂಪ್ರಿ ಚಿಂಚ್ವಾಡ್ನ ಜಂಟಿ ಪೊಲೀಸ್ ಆಯುಕ್ತ ಶಶಿಕಾಂತ್ ಮಹಾವರ್ಕರ್ ಹೇಳಿದ್ದಾರೆ.
ಈ ಪ್ರದೇಶದಲ್ಲಿ ದಟ್ಟವಾದ ಮಂಜು ಕವಿದಿದ್ದು ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
Pune, Maharashtra: A helicopter crash occurred in the Bavdhan area of Pimpri-Chinchwad, resulting in the deaths of three people. The private helicopter, which was traveling from Oxford Golf Resort to Mumbai, crashed in the hills within the Hinjewadi police limits. pic.twitter.com/bvviEc7MsP
— IANS (@ians_india) October 2, 2024
