ಕೌಟುಂಬಿಕ ಕಲಹದಲ್ಲಿ ಮಹಿಳೆಗೆ ವರದಕ್ಷಿಣೆ ಕಿರುಕುಳ ನೀಡಿ ನೇಣು ಬಿಗಿದು ಕೊಲೆ ಮಾಡಲು ಯತ್ನಿಸಿರುವ ಘಟನೆ ಕಲಬುರಗಿ ನಗರದಲ್ಲಿ ಮಂಗಳವಾರ ನಡೆದಿದ್ದು, ಮಹಿಳೆಯನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಲಬುರಗಿ ನಗರದ ರೋಜಾ ಮಾರುಕಟ್ಟೆ ನಿವಾಸಿ ಯಾಸ್ಮಿನ್ ಎಂಬುವವರಿಗೆ ಕುಟುಂಬಸ್ಥರು ಕಿರುಕುಳ ನೀಡಿದ್ದು, ಅವರನ್ನು ಕೊಲೆ ಮಾಡಲು ಯತ್ನಿಸಿದ್ದಾರೆ.
ಸಂತ್ರಸ್ತೆ ಯಾಸ್ಮಿನ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಗಂಡ ಶೇಖ್ ಅಬ್ದುಲಾ, ಅತ್ತೆ ಹಾಗೂ ಐದು ಮಂದಿ ನಾದಿನಿಯರಾದ ಕರಿಮಾ, ಕಲಿಮಾ, ಆಫರಿನ್, ಜರಿನಾ, ಹಸಿನಾ ಅವರೆಲ್ಲ ಸೇರಿಕೊಂಡು, ʼನಿನ್ನ ತವರು ಮೆನೆಯಿಂದ ಬಂಗಾರ ತೆಗೆದುಕೊಂಡು ಬಾʼ ಎಂದು ಪ್ರತಿನಿತ್ಯ ನನ್ನನ್ನು ಪೀಡಿಸುತ್ತಿದರು. ಮಂಗಳವಾರ ಬೆಳಿಗ್ಗೆ ಊಟ ಮಾಡುತ್ತಿರುವಾಗ ತಟ್ಟೆ ಕಸಿದುಕೊಂಡು ತಟ್ಟೆಯಿಂದ ಬೆನ್ನು, ಮುಖ ಮೊಳಕಾಲು ಎಲ್ಲೆಂದರಲ್ಲಿ ಮನಬಂದಂತೆ ಹೊಡೆದಿದ್ದರಿಂದ ನಾನು ಮೂರ್ಛೆ ಹೋಗಿದ್ದೆ. ಆ ಸಮಯದಲ್ಲಿ ನನ್ನನ್ನು ನೇಣು ಹಾಕಿ ಸಾಯಿಸಲು ಯತ್ನಿಸಿದ್ದಾರೆ. ನನ್ನ ಗಂಡ, ಅತ್ತೆ, ನಾದಿನಿಯರಿಗೆಲ್ಲ ಶಿಕ್ಷೆಯಾಗಬೇಕು” ಎಂದು ಅವಲತ್ತುಕೊಂಡಿದ್ದಾರೆ.

ಸಂತ್ರಸ್ತೆ ತಾಯಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಮಗಳ ಗಂಡನ ಮನೆಯವರು ಬಂಗಾರ, ದುಡ್ಡು ತಗೆದುಕೊಂಡು ಬರುವಂತೆ ಬಹಳ ಜಗಳ ಮಾಡುತ್ತಿದ್ದರು. ನಾವು ಬಡವರು ಎಲ್ಲಿಂದ ಕೊಡಬೇಕು. ನಮ್ಮ ಹತ್ತಿರ ಏನೂ ಇಲ್ಲವೆಂದು ತಿಳಿಸಿದ ಮೇಲೆ ಮನೆಯಲ್ಲಿ ಮಗಳ ಜತೆಗೆ ಜಗಳ ಮಾಡಿದ್ದಾರೆ. ಪ್ರತಿದಿನ ಫೋನ್ ಮಾಡುವ ಮಗಳು ಮೂರು ದಿನಗಳಿಂದ ಪೋನ್ ಮಾಡಿಲ್ಲವೆಂದು ಆತಂಕಗೊಂಡು ಮಗಳ ಮನೆಗೆ ಹೋದಾಗ, ಮಗಳು ಮೂರ್ಛೆ ಹೋಗಿ ಬಿದ್ದಿರುವುದನ್ನು ನೋಡಿ ನಾನು ಗಾಬರಿಗೊಂಡು ಆಟೊದಲ್ಲಿ ಮಗಳನ್ನು ತಂದು ಆಸ್ಪತ್ರೆಗೆ ಸೇರಿಸಿದ್ದೇನೆ. ನನ್ನ ಮಗಳಿಗೆ ಈ ರೀತಿ ಹಿಂಸೆ ನೀಡಿದವರಿಗೆ ಕಾನೂನು ಅಡಿಯಲ್ಲಿ ಶಿಕ್ಷೆಯಾಗಬೇಕು” ಎಂದು ಒತ್ತಾಯಿಸಿದರು.
ಸಂತ್ರಸ್ತೆ ಯಾಸ್ಮಿನ್ ಎಂಬುವವರಿಗೆ ಒಬ್ಬಳು ಪುತ್ರಿ, ಒಬ್ಬ ಪುತ್ರನಿದ್ದು, ಈ ದಿನ.ಕಾಮ್‌ನೊಂದಿಗೆ ಮಾತನಾಡಿದ ಮಕ್ಕಳು, “ನಮ್ಮ ಅಮ್ಮನಿಗೆ ಅತ್ತೆ ಕರಿಮಾ ತಟ್ಟೆಯಿಂದ ಹೊಡೆದು ನೇಣು ಹಾಕಿದ್ದಾರೆ. ನಮ್ಮ ಅಪ್ಪ ನೇಣು ಬಿಗಿದಿರುವುದು ಚಾಕುವಿನಿಂದ ಕತ್ತರಿಸಿದ್ದಾರೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬಾಗೇಪಲ್ಲಿ | ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತಾ ಅಭಿಯಾನ; ಗಿಡಗಳ ವಿತರಣೆ
“ಯಾಸ್ಮಿನ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಆಸ್ಪತ್ರೆಯ ಸಿಬ್ಬಂದಿಗಳು ಎಂಎಲ್‌ಸಿ ಮಾಡುವುದಾಗಿ ತಿಳಿಸಿದರು. ದೂರು ದಾಖಲಿಸಿಕೊಳ್ಳಲು ಮಹಿಳಾ ಪೊಲೀಸ್ ಠಾಣೆಯವರು ಹಿಂದೇಟು ಹಾಕಿದಾಗ ಈ ದಿನ.ಕಾಮ್ ಪ್ರತಿನಿಧಿ ಮಹಿಳಾ ಪೊಲೀಸ್ ಠಾಣೆಗೆ ಕರೆ ಮಾಡಿ ಮಾತನಾಡಿದ ಬಳಿಕ ದೂರು ದಾಖಲಿಸಲಾಯಿತು” ಎಂದು ಸಂತ್ರಸ್ತೆ ಕುಟುಂಬಸ್ಥರು
ಈ ದಿನ.ಕಾಮ್‌ಗೆ ಧನ್ಯವಾದ ತಿಳಿಸಿದರು.