ಕಾಂಗ್ರೆಸ್‌ ಯಾವತ್ತಿಗೂ ರೈತರ, ಕಾರ್ಮಿಕರ, ಜನಸಾಮಾನ್ಯರ ಪಕ್ಷ: ರಾಹುಲ್‌ ಗಾಂಧಿ

Date:

Advertisements
  • ಯಮಕನಮರಡಿ ಕ್ಷೇತ್ರದಲ್ಲಿ ಸತೀಶ್ ಜಾರಕಿಹೊಳಿ ಪರ ಚುನಾವಣಾ ಪ್ರಚಾರ
  • ʼನಮ್ಮ ಸರ್ಕಾರ ಬಂದ ಬಳಿಕ ಐದು ಗ್ಯಾರಂಟಿಗಳನ್ನು ನಾವು ಜಾರಿಗೆ ತರುತ್ತೇವೆʼ

ಕಾಂಗ್ರೆಸ್‌ ಯಾವತ್ತಿಗೂ ರೈತರ, ಕಾರ್ಮಿಕರ ಹಾಗೂ ಜನಸಾಮಾನ್ಯರ ಪರವಾಗಿ ಇರುವ ಪಕ್ಷ ಎಂದು ರಾಹುಲ್‌ ಗಾಂಧಿ ಹೇಳಿದರು.

ಬೆಳಗಾವಿ ಜಿಲ್ಲೆಯ ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ ಶನಿವಾರ ಸತೀಶ್ ಜಾರಕಿಹೊಳಿ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

“ಕರ್ನಾಟಕದ ಜನ ತೀರ್ಮಾನ ಮಾಡಿದ್ದಾರೆ, ಈ ಬಾರಿ ನಿಶ್ಚಿತವಾಗಿಯೂ ಕಾಂಗ್ರೆಸ್‌ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. 150 ಸ್ಥಾನ ಕಾಂಗ್ರೆಸ್‌ ಗೆಲ್ಲಲಿದೆ. ಸರ್ಕಾರ ಬಂದ ಬಳಿಕ 5 ಗ್ಯಾರಂಟಿಗಳನ್ನು ನಾವು ಜಾರಿಗೆ ತರುತ್ತೇವೆ” ಎಂದರು.

Advertisements

“ಕಳೆದ ಮೂರು ವರ್ಷಗಳಲ್ಲಿನ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ನಾನು ಪ್ರಧಾನಿ ಅವರಿಗೆ ನಾನು ಸವಾಲು ಹಾಕುವೆ, ನೀವು ಯಾರ ವಿರುದ್ಧ ಕ್ರಮಕೈಗೊಂಡಿದ್ದೀರಿ? ಎಷ್ಟು ಜನರನ್ನು ಜೈಲಿಗೆ ಕಳುಹಿಸಿದ್ದೀರಿ? ದುರಾದೃಷ್ಟವಶಾತ್ ಪ್ರಧಾನಿ ಅದರ ಬಗ್ಗೆ ಒಂದು ಶಬ್ಧವನ್ನು ಇದುವರೆಗೆ ತೆಗೆದಿಲ್ಲ. ಇಲ್ಲಿ ಬರ್ತಾರೆ, ಯಾವುದದಾರೊಂದು ನೆಪ ಹೇಳಿ ದೆಹಲಿಗೆ ವಾಪಸ್ಸು ಹೋಗ್ತಾರೆ” ಎಂದು ಟೀಕಿಸಿದರು.

“ಬೆಲೆ‌ ಏರಿಕೆ, ಗ್ಯಾಸ್‌ ಸಿಲೆಂಡರ್‌ 1100 ರೂ. ಆಗಿದೆ, ಪ್ರೆಟ್ರೋಲ್‌ 100 ರೂ. ಗಡಿ ದಾಟಿದೆ, ದೇಶದಲ್ಲಿ ನಿರುದ್ಯೋಗ ಹೆಚ್ಚಳವಾಗಿದೆ. ವರ್ಷಕ್ಕೆ 2 ಕೋಟಿ ಜನಕ್ಕೆ ಉದ್ಯೋಗದ ಕೊಡ್ತೀರಾ ಅಂತ ಹೇಳಿದ್ರಿ ಇಷ್ಟು ಜನರಿಗೆ ಉದ್ಯೋಗ ನೀಡಿದ್ರಿ, ರಾಜ್ಯಗಳ ಮಧ್ಯಗಿರುವ ನೀರಿನ ವಿವಾದವನ್ನು ಹೇಗೆ ಬಗೆಹರಿಸಿದ್ದೀರಿ? ರಾಜ್ಯದಲ್ಲಿ ಪ್ರವಾಹ ಬಂದಾಗ ಅವಾಗ ನೀವು ಏನು ಮಾಡಿದ್ರಿ? ಕರ್ನಾಟಕ್ಕಾಗಿ ನೀವು ಏನು ಮಾಡಿಲ್ಲ” ಎಂದು ಹರಿಹಾಯ್ದರು.

ಈ ಸುದ್ದಿ ಓದಿದ್ದೀರಾ? ಈದಿನ.ಕಾಮ್‌ ಸಮೀಕ್ಷೆ-8: ಕಾಂಗ್ರೆಸ್‌ಗೆ ಸಿಗಲಿದೆ ಸ್ಪಷ್ಟ ಬಹುಮತ; 132-140 ಸೀಟುಗಳ ನಿರೀಕ್ಷೆ

“ಪ್ರಮುಖ ವಿಷಯಗಳ ಕುರಿತು ಪ್ರಧಾನಿ ಅವರು ಮಾತನಾಡಲ್ಲ. ರೈತರು, ಕಾರ್ಮಿಕರು, ಬಡವರು, ಯುವಕರಿಗಾಗಿ ಒಂದು ಶಬ್ದವನ್ನು ಎತ್ತಲ್ಲ. ಬರೀ ಭಾಷಣದಲ್ಲಿ ಹೇಳ್ತಾರೆ; ಕಾಂಗ್ರೆಸ್‌ ನವರು 91 ಸಲ ನನ್ನನ್ನು ಬೈದಿದ್ದಾರೆ ಅಂತ. ಇಂದು ಯಾವ ವಿಷಯದ ಬಗ್ಗೆ ಚರ್ಚೆ ನಡೆಸಬೇಕಿತ್ತೋ, ಆ ವಿಷಯವನ್ನು ಅವರು ಎಂದಿಗೂ ಪ್ರಸ್ತಾಪ ಮಾಡುತ್ತಿಲ್ಲ” ಎಂದರು.

“ನೀವು ಇಂದು ಸತೀಶ್ ಜಾರಕಿಹೊಳಿ ಅವರನ್ನು ಮತ್ತೇ ಅತ್ಯಧಿಕ ಬಹುಮತದಿಂದ ನೀವು ಅವರನ್ನು ಗೆಲ್ಲಿಸಿಬೇಕು. ಅವರೋರ್ವ ಬಡವರ ಬಗ್ಗೆ ವಿಶೇಷ ಕಾಳಜಿಯಿರುವ ವ್ಯಕ್ತಿ. ಬಡ ಮತ್ತು ಜನಸಾಮಾನ್ಯನ ಜತೆಗೆ ನಿಕಟ ಸಂಪರ್ಕವಿರುವ ವ್ಯಕ್ತಿ. ಇಂದು ಕಾಂಗ್ರೆಸ್‌ ಪಕ್ಷವನ್ನು ಇಡೀ ಬೆಳಗಾವಿ ಜಿಲ್ಲೆಯಲ್ಲಿ ಎಲ್ಲ ಸೀಟನ್ನು ನೀವು ಗೆಲ್ಲಿಸಬೇಕು” ಎಂದು ರಾಹುಲ್‌ ಗಾಂಧಿ ಕರೆ ನೀಡಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ : ಮಾನವೀಯತೆ ಮರೆತು ರೋಗಿಯನ್ನು ಚಳಿಯಲ್ಲಿ ಬಿಟ್ಟು ಹೋದ ಸಿಬ್ಬಂದಿ

ಮಾನವೀಯತೆ, ಕರುಣೆ ಎನ್ನುವುದು ಆಸ್ಪತ್ರೆಯ ಆವರಣದಲ್ಲಿ ಮರೆತುಹೋದಂತಾಗಿದೆ. ಬೆಳಗಾವಿ ಬಿಮ್ಸ್ ಮಲ್ಟಿ...

ಬೆಳಗಾವಿ : ಜಿಲ್ಲೆಯಲ್ಲಿ ಇಂದು ತಂಪು ವಾತಾವರಣ – ಮಧ್ಯಮ ಮಳೆಯ ಮುನ್ಸೂಚನೆ

ಇಂದು ಬೆಳಗಾವಿ ಜಿಲ್ಲೆಯಾದ್ಯಂತ ಮೋಡ ಆವರಿಸಿಕೊಂಡಿದ್ದು, ಹವಾಮಾನ ಇಲಾಖೆ ಮಧ್ಯಮ ಮಳೆಯ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

Download Eedina App Android / iOS

X