ಕರ್ನಾಟಕದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದ್ದು, ಕೈ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗಲಿದೆ; ಬಿಜೆಪಿಯು ತೀವ್ರ ಹಿನ್ನಡೆ ಅನುಭವಿಸಲಿದೆ ಎಂದು ಈದಿನ.ಕಾಮ್ ನಡೆಸಿದ ಮೆಗಾಸರ್ವೆಯಲ್ಲಿ ಕಂಡು ಬಂದಿದೆ.
ಮೊದಲಿಗೆ ಈ ಸಮೀಕ್ಷೆ ಏನೆಂದು ಅರಿಯಲು ಈ ವರದಿ ಓದಿ: ಚುನಾವಣೆ 2023: ಕರ್ನಾಟಕ ವಿಧಾನಸಭಾ ಚುನಾವಣೆಯ ಅತಿ ದೊಡ್ಡ ಸಮೀಕ್ಷೆ ‘ಈ ದಿನ.ಕಾಮ್’ನ ಸಮೀಕ್ಷೆ
2023ರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈದಿನ.ಕಾಮ್ ನಡೆಸಿದ ಸಮೀಕ್ಷೆಯ ಅಂತಿಮ ಹಂತದಲ್ಲಿ ಇಂದು ಯಾವ ಪಕ್ಷಕ್ಕೆ ಎಷ್ಟು ಸೀಟುಗಳು ಲಭ್ಯವಾಗಬಹುದು ಎಂಬ ವಿವರಗಳನ್ನು ಬಿಡುಗಡೆ ಮಾಡಲಾಯಿತು. ಅದರಂತೆ ಕಾಂಗ್ರೆಸ್ ಪಕ್ಷವು 132ರಿಂದ 140 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎನ್ನುವುದು ತಿಳಿದುಬಂದಿದೆ.
ಕೋಷ್ಟಕ 1: ಕರ್ನಾಟಕದಲ್ಲಿದೆ ಕಾಂಗ್ರೆಸ್ ಅಲೆ: ಬಿಜೆಪಿ ಮತ್ತು ಜೆಡಿಎಸ್‌ಗಳೆರಡೂ ಮತ ಪ್ರಮಾಣ ಕಳೆದುಕೊಳ್ಳಲಿವೆ

ಕರ್ನಾಟಕದಲ್ಲಿ ಕಾಂಗ್ರೆಸ್ ಅಲೆ ಇದ್ದಂತೆ ಕಂಡುಬರುತ್ತಿದ್ದು, ಮತ ಪ್ರಮಾಣದಲ್ಲಿ ಅದರ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಗಿಂತ ಎರಡಂಕಿಯ ಮೇಲುಗೈ ಅನ್ನು ಸಾಧಿಸಲಿದೆ. ಶೇ.43 ಮತಪ್ರಮಾಣದಿಂದ ಕಾಂಗ್ರೆಸ್ ಕಳೆದ ಮೂರು ದಶಕಗಳ ತನ್ನ ಚುನಾವಣಾ ಸಾಧನೆಗಿಂತ ಹೆಚ್ಚಿನದಾದ್ದನ್ನು ಸಾಧಿಸಲಿರುವುದು ಈ ಸಾರಿಯ ವಿಶೇಷ. ಇದಕ್ಕಿಂತ ಹಿಂದೆ ಕಾಂಗ್ರೆಸ್ ಶೇ.43ಅನ್ನು ಮುಟ್ಟಿದ್ದದ್ದು 1989ರಲ್ಲಿ.
ಆದರೆ, ಈ ಪ್ರಮಾಣದ ಏರಿಕೆ ಮೇಲ್ನೋಟಕ್ಕೆ ಕಾಣುವಷ್ಟು ನಾಟಕೀಯವಾಗಿಲ್ಲ. 2018ರ ಚುನಾವಣೆಯಲ್ಲಿ ಸೋತಿದ್ದರೂ ಕಾಂಗ್ರೆಸ್ ಪಕ್ಷವು ಆಗಲೂ ಬಿಜೆಪಿಗಿಂತ ಶೇ.2ರಷ್ಟು ಹೆಚ್ಚು ಮತಗಳನ್ನು ಗಳಿಸಿತ್ತು. ಆಗಿನದ್ದಕ್ಕೆ ಹೋಲಿಸಿದರೆ, ಕಾಂಗ್ರೆಸ್ ಪರವಾಗಿ ಶೇ.5ರಷ್ಟು ಮತಗಳ ಹೆಚ್ಚಳ ಆಗಿದೆ ಮತ್ತು ಅದರಲ್ಲಿ ಶೇ.3 ಅನ್ನು ಬಿಜೆಪಿಯಿಂದಲೂ, ಶೇ.2 ಅನ್ನು ಜೆಡಿಎಸ್‌ನಿಂದಲೂ ಅದು ಪಡೆದುಕೊಳ್ಳುತ್ತಿದೆ. ಪಂಜಾಬ್‌ನಲ್ಲಿ ಅಭೂತಪೂರ್ವ ಗೆಲುವು ಮತ್ತು ಗುಜರಾತಿನಲ್ಲೂ ಒಳ್ಳೆಯ ಸಾಧನೆ ಮಾಡಿದ್ದ ಆಮ್ ಆದ್ಮಿ ಪಕ್ಷವು ಕರ್ನಾಟಕದ ಮಟ್ಟಿಗೆ ʼಇನ್ನೂ ಶುರುವಾಗದ ಪಕ್ಷʼವಾಗಿಯೇ ಉಳಿದುಕೊಳ್ಳುವಂತೆ ಕಾಣುತ್ತಿದೆ. ಅದರ ಮತಪ್ರಮಾಣವು ಶೇ.2 ಅನ್ನು ದಾಟುವುದಿಲ್ಲ.
ಕೋಷ್ಟಕ 2: ಕಾಂಗ್ರೆಸ್ ನಿಚ್ಚಳ ಬಹುಮತದೆಡೆಗೆ ಸಾಗಲಿದ್ದು, ಇದು ಕಳೆದ 3 ದಶಕಗಳಲ್ಲೇ ಅತ್ಯಂತ ದೊಡ್ಡ ಸಾಧನೆಯಾಗಲಿದೆ.

ಕಾಂಗ್ರೆಸ್‌ಗೆ ಸ್ಪಷ್ಟವಾದ ಮತ್ತು ಯಾವುದೇ ಆತಂಕಕ್ಕೆ ಎಡೆಯಿಲ್ಲದ ರೀತಿಯ ಬಹುಮತ ಲಭ್ಯವಾಗಲಿದೆ ಎಂದು ಈ ಸಮೀಕ್ಷೆಯ ಅಂಕಿ-ಅಂಶಗಳು ತಿಳಿಸುತ್ತಿವೆ. ಇನ್ನೊಂದು ಆಪರೇಷನ್ ಕಮಲದ ಸಾಧ್ಯತೆಯನ್ನೂ ಇಲ್ಲವಾಗಿಸುವ ಹಾಗೆ ಕಾಂಗ್ರೆಸ್ ಮ್ಯಾಜಿಕ್ ನಂಬರ್ ಆದ 113 ಅನ್ನು ಸಲೀಸಾಗಿ ದಾಟಲಿದೆ ಎಂದು ತೋರುತ್ತಿದೆ.
ಈ ಹಿಂದೆ ಇಂತಹ ಬಹುಮತವನ್ನು ಪಡೆದುಕೊಂಡಿದ್ದದ್ದು 2013 ಮತ್ತು 1999ರಲ್ಲಿ. ಈ ಸಾರಿ ಅವೆರಡನ್ನೂ ದಾಟಲಿದ್ದು, 1989ರ ನಂತರ ಮೂರು ದಶಕಗಳಲ್ಲಿ ಇದೇ ಅತಿ ದೊಡ್ಡ ಸಾಧನೆಯಾಗಬಹುದು ಎಂದು ಸಮೀಕ್ಷೆಯಿಂದ ಸಿಕ್ಕಿರುವ ಸಂಖ್ಯೆಗಳು ಹೇಳುತ್ತಿವೆ.
ಬಿಜೆಪಿಯ ಮಟ್ಟಿಗೆ ಹೇಳುವುದಾದರೆ, 2013ರಲ್ಲಿ ಆ ಪಕ್ಷ ಒಡೆದು ಹೋಗಿದ್ದಾಗ ಉದ್ಭವವಾಗಿದ್ದ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಹೊರತುಪಡಿಸಿದರೆ, ಇದು ಅದರ ಅತ್ಯಂತ ಹೀನಾಯ ಸ್ಥಿತಿಯಾಗಿರಲಿದೆ.
ಜೆಡಿಎಸ್‌ಗೂ ಸಹ ಈ ಅವಧಿಯ ಅತಿ ಕೆಟ್ಟ ಪರಿಸ್ಥಿತಿ ಈ ಸಾರಿಯದ್ದೇ ಆಗಿರುವ ಎಲ್ಲಾ ಸಾಧ್ಯತೆಗಳಿವೆ.
ಕೋಷ್ಟಕ 3: ಕಾಂಗ್ರೆಸ್ ಉತ್ತರ ಕರ್ನಾಟಕದಲ್ಲಿ ಮಿಕ್ಕವರನ್ನು ಗುಡಿಸಿ ಹಾಕಲಿದ್ದು, ದಕ್ಷಿಣ ಕರ್ನಾಟಕದಲ್ಲೂ ಮುನ್ನಡೆ ಗಳಿಸಲಿದೆ.
ಈ ಸಮೀಕ್ಷಾ ವರದಿಯನ್ನೂ ಓದಿ: ಈದಿನ.ಕಾಮ್ ಸಮೀಕ್ಷೆ 7: ಬಡವರ ಓಟು ಕಾಂಗ್ರೆಸ್‌ಗೆ, ಮೇಲ್ಜಾತಿಗಳ ಹೆಚ್ಚು ಓಟು ಬಿಜೆಪಿಗೆ
Assembly elections servey is nearby correct
Kudos to eedina.com for exact pre poll prediction.
Kudos for exact pre poll prediction.