ಮಣ್ಣು ಡ್ರೆಜ್ಜಿಂಗ್ ಮಾಡುತ್ತಿದ್ದ ವೇಳೆ ಪಕ್ಕದ ಜಮೀನಿನ ತಡೆಗೋಡೆ ಕುಸಿದು ಕಾರ್ಮಿಕ ಸಾವನ್ನಪ್ಪಿದ್ದು, ಮಗು ಸೇರಿದಂತೆ ಮೂವರು ಗಾಯಗೊಂಡಿರುವ ಘಟನೆ ಬೆಂಗಳೂರಿನ ಜಿಗಣಿಯಲ್ಲಿ ನಡೆದಿದೆ.
ಘಟನೆಯಲ್ಲಿ ರಾಯಚೂರು ಜಿಲ್ಲೆಯ ಪರಶುರಾಮ(28) ಕಮಲದಿನ್ನಿ ಮೃತಪಟ್ಟಿದ್ದು, ಮೃತನ ನಾದಿನಿ, ಮಗು ಹಾಗೂ ಹೊರ ರಾಜ್ಯ(ಹಿಂದಿ ಬಾಷಿಕ)ದ ಹುಡುಗ ಗಂಭೀರ ಗಾಯಗೊಂಡಿದ್ದಾರೆ. ಮಗುವಿನ ತಲೆಭಾಗಕ್ಕೆ ಪೆಟ್ಟಾಗಿದ್ದು, ಉಳಿದ ಇಬ್ಬರಿಗೆ ಕಾಲು ಮುರಿದಿರುವುದಾಗಿ ತಿಳಿದುಬಂದಿದೆ.
ಮೃತರ ಸಂಬಂಧಿಕರೊಬ್ಬರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮೆಕ್ಕಲದೊಡ್ಡಿ ಗ್ರಾಮದ ಪರಶುರಾಮನ ಕುಟುಂಬ ಮೂರು ವರ್ಷಗಳಿಂದ ಬೆಂಗಳೂರಿನಲ್ಲಿಯೇ ವಾಸವಾಗಿತ್ತು.
ಈ ಸುದ್ದಿ ಓದಿದ್ದೀರಾ? ಬೀದರ್ | ಮಗುವಿನೊಂದಿಗೆ ಬಾವಿಗೆ ಜಿಗಿದು ತಾಯಿ ಆತ್ಮಹತ್ಯೆ
ಬೆಂಗಳೂರು ನಗರದ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ವಾಸಿಸುತ್ತಿದ್ದು, ಮಾಲೀಕರೊಬ್ಬರ ಮನೆಯ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. ಇವರ ಹೆಂಡತಿಯ ತಂಗಿ ಆದಮ್ಮ ಎಂಬುವವರು ಮಗು ನೋಡಿಕೊಳ್ಳಲೆಂದು ಶಾಲೆ ಬಿಟ್ಟು ಇವರೊಂದಿಗೆ ಬೆಂಗಳೂರಿಗೆ ಹೋಗಿ ಇವರ ಕುಟುಂಬದ ಜತೆಗೆ ಇದ್ದಳು. ಇದೀಗ ಈ ಹುಡುಗಿಗೂ ಪೆಟ್ಟಾಗಿದ್ದು, ಕಾಲು ಮುರಿದಿದೆ.