ಉತ್ತರಕನ್ನಡ ಜಿಲ್ಲೆಯ ಮತ್ತು ಮುಂಡಗೋಡು ತಾಲೂಕಿನ ಯುವ ಸಮೂಹಕ್ಕೆ ಉದ್ಯೋಗದ ಅವಕಾಶವನ್ನು ಹೆಚ್ಚಿಸಲು ಮುಂಡಗೋಡು ಪಟ್ಟಣದ ಲೊಯೋಲ ವಿಕಾಸ ಕೇಂದ್ರ (ಎಲ್.ವಿ.ಕೆ) ಸಭಾಂಗಣದಲ್ಲಿ ಅಕ್ಟೋಬರ್ 05, 2024 ರಂದು ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಿದ್ದಾರೆ.
ಯುವಜನರಿಗೆ ಉದ್ಯೋಗ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಜೀವನೋಪಾಯ ಮತ್ತು ಕೌಶಲಾಭಿವೃದ್ಧಿ ಕೇಂದ್ರವು ದೇಶದ ಪ್ರಸಿದ್ಧ ಕಾರ್ಪೋರೇಟ್ ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಸಹಭಾಗಿತ್ವದಲ್ಲಿ ಪ್ರತಿಭಾನ್ವಿತ ಯುವ ಸಮೂಹದ ಸಂದರ್ಶನ ನಡೆಸಲಿದ್ದು, ಈಗಾಗಲೇ ಸುಮಾರು 500ಕ್ಕಿಂತ ಹೆಚ್ಚಿನ ಉದ್ಯೋಗಾಂಕ್ಷಿಗಳು ಉದ್ಯೋಗಮೇಳಕ್ಕೆ ನೋಂದಾಯಿಸಿಕೊಂಡಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದ್ಯೋಗ ಮೇಳದಲ್ಲಿ, ಎಸ್‌ವಿ ರಿಕ್ರುಟೆಕ್, ಟೋಯೋಟಾ, ಹೊಂಡಾ, ಜಿಯೋ, ಅಮೆಜಾನ್, ಮುತ್ತೂಟ್ ಫೈನಾನ್ಸ್, ಎಸ್‌ಬಿಐ ಲೈಫ್, ಕ್ರೆಡಿಟ್ ಅಕ್ಸೆಸ್, ವಿ-ಜಾಬ್, ಸಿಎಮ್ಸ್, ಎಲ್‌ಬಿಸಿ, ಮುಂತಾದ ಕಾರ್ಪೋರೇಟ್ ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಉದ್ಯೋಗದಾತರು ಸಂದರ್ಶನ ನಡೆಸಲಿದ್ದಾರೆ.

ಉದ್ಯೋಗ ಮೇಳವನ್ನು ಮುಂಡಗೋಡದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹೀರೇಹಳ್ಳಿ ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಎಸ್ ರಿಕ್ರುಟೆಕ್, ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಜೀವನ ಕುಮಾರ್, ಮುಂಡಗೋಡ ತಾಲೂಕಿನ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕಾ ಅಧಿಕಾರಿ, ಟಿ ವಾಯ್ ದಾಸನಕೊಪ್ಪ, ಪಟ್ಟಣದ ಸೆಂಟ್ ರೀಟಾ ಚರ್ಚಚ ನ ಮುಖ್ಯ ಗುರು, ಫಾ.ಗಿಲ್ಬರ್ಟ್ ಸಾಲ್ದಾನಾ, ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಉದ್ಯೋಗಮೇಳವನ್ನು ಎಲ್‌ವಿಕೆಯ ಜೀವನೋಪಾಯ ಮತ್ತು ಕೌಶಲ್ಯಾಭಿವೃದ್ಧಿ ಕೇಂದ್ರ, ತಾಲೂಕಿನ ವಿವಿಧ ಸಮುದಾಯ ಆಧರಿತ ಸಂಘಟನೆಗಳಾದ ಯುವರತ್ನ ವೇದಿಕೆ, ಜನಸ್ಪೂರ್ತಿ ಸ್ವ-ಸಹಾಯ ಸಂಘಗಳ ಒಕ್ಕೂಟ, ಕಟ್ಟಡ ಕಾರ್ಮಿಕರ ಯೂನಿಯನ್, ಭೂ-ಹಕ್ಕುದಾರರ ಹಿತರಕ್ಷಣಾ ವೇದಿಕೆ ಹಾಗೂ ಜನವೇದಿಕೆ -ಜೊತೆ ಸಂಯುಕ್ತವಾಗಿ ಲೊಯೋಲ ವಿಕಾಸ ಕೇಂದ್ರದ ಸಹಭಾಗಿತ್ವದೊಡನೆ ಆಯೋಜಿಸಿದ್ದು, ಉತ್ತರ ಕನ್ನಡ ಜಿಲ್ಲೆ ಅಷ್ಟೇ ಅಲ್ಲದೆ ಅನ್ಯ ಜಿಲ್ಲೆಗಳ ನಿರುದ್ಯೋಗಿ ಯುವಕರಿಗೂ ಪ್ರಯೋಜನ ಆಗಲಿದೆ ಎಂದು ಸಂಚಾಲಕ ಲಕ್ಷ್ಮಣ ಹೇಳುತ್ತಾರೆ.
ಇದನ್ನೂ ಓದಿ ಗಾಂಧಿ ಕನ್ನಡಕವನ್ನು ಬಳಸಿ ಗಾಂಧಿ ತತ್ವವನ್ನು ಗಾಳಿಗೆ ತೂರಿದವರು
ಉದ್ಯೋಗ ಮೇಳ ನಡೆಯುವ ಸ್ಥಳ: ವಿವೇಕಾನಂದ ಬಯಲು ರಂಗ ಮಂದಿರ, ಸಂತೆ ಮಾರ್ಕೆಟ್, ಪಟ್ಟಣ ಪಂಚಾಯತಿ ಹತ್ತಿರ, ಮುಂಡಗೋಡ.