ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ರೋಡಲಬಂಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ತವಗಾ ಗ್ರಾಮದ ಹೈಟೆಕ್ ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ ಕೆಲವು ಕಿಡಿಕೇಡಿಗಳು ವಿಷ ಹಾಕಿರುವ ಘಟನೆ ನಡೆದಿದೆ.
ತವಗಾ ಗ್ರಾಮಕ್ಕೆ ಸರಬರಾಜು ಆಗುವ ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ ಅಪರಿಚಿತ ಕಿಡಿಗೇಡಿಗಳು ವಿಷ ಮಿಶ್ರಣ ಬೆರೆಸಿದ್ದಾರೆ. ಗ್ರಾಮಸ್ಥರು ನೀರಿನ ದುರ್ವಾಸನೆ, ಬದಲಾದ ಬಣ್ಣ ಕಂಡು ಆತಂಕಗೊಂಡಿದ್ದರುʼ ಎಂದು ದೂರಿದರು.
ʼಗ್ರಾಮದ ಎಲ್ಲರ ಮನೆಗಳಲ್ಲಿ ನೀರು ಪರೀಕ್ಷಿಸಿದಾಗ ವಿಷ ಬೆರೆಸಿದ ನೀರು ಎಂಬುದು ಸಾಬೀತಾಗಿದೆ. ಇದರಿಂದ ಭಯಗೊಂಡ ಜನರು ಯಾರೂ ವಿಷ ಬೆರೆತ ನೀರು ಸೇವಿಸಬಾರದುʼ ಎಂದು ಎಚ್ಚರಿಸಿದರು.
ಗ್ರಾಮಸ್ಥ ರಮೇಶ್ ವೀರಾಪುರ ಮಾತನಾಡಿ, ʼಯಾರೋ ಕಿಡಿಗೇಡಿಗಳು ನೀರಿನ ಟ್ಯಾಂಕ್ ನಲ್ಲಿ ವಿಷ ಮಿಶ್ರಣ ಮಾಡಿ ಕೃತ್ಯ ಎಸಗಿದ್ದಾರೆ. ಇದರಿಂದ ಗ್ರಾಮಸ್ಥರ ಆರೋಗ್ಯದ ಮೇಲೆ ದುಷ್ಪರಿಣಾಗುವ ಆತಂಕ ಕಾಡುತ್ತಿದೆ. ಕೂಡಲೇ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ನೀರಿನ ಟ್ಯಾಂಕ್ ಸ್ವಚ್ಛಗೊಳಿಸಿ ನೀರನ್ನು ಪರೀಕ್ಷೆಗೆ ಒಳಪಡಿಸಬೇಕುʼ ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕಲ್ಯಾಣ ಕರ್ನಾಟಕ ಶೈಕ್ಷಣಿಕ ಸುಧಾರಣಾ ಸಮಿತಿಗೆ ಗುರುರಾಜ ಕರಜಗಿ ಅಧ್ಯಕ್ಷತೆ : ವ್ಯಾಪಕ ಟೀಕೆ
ಈ ಕುರಿತು ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
