ಲಡಾಖ್‌ಗೆ ಆರನೇ ಪರಿಚ್ಛೇದದಲ್ಲಿ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಪ್ರತಿಭಟನಾಕಾರರಿಗೆ ಅನುಮತಿ ನಿರಾಕರಿಸಿದ ಕಾರಣ ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರು ತಂಗಿದ್ದ ಲಡಾಖ್ ಭವನದಲ್ಲಿ ಭಾನುವಾರ ಉಪವಾಸ ಆರಂಭಿಸಿದ್ದಾರೆ.
ಉಪವಾಸವನ್ನು ಪ್ರಾರಂಭಿಸುವ ಮೊದಲು ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದ ವಾಂಗ್‌ಚುಕ್, ನಮ್ಮ ಪ್ರತಿಭಟನೆಗೆ ಎಲ್ಲಿಯೂ ಅವಕಾಶ ಸಿಗದ ಕಾರಣ ಲಡಾಖ್ ಭವನದಲ್ಲಿಯೇ ಪ್ರತಿಭಟನೆಯನ್ನು ನಡೆಸಲು ಆರಂಭಿಸುತ್ತೇನೆ ಎಂದು ಹೇಳಿದರು. ಅದಾದ ಬಳಿಕ ತಮ್ಮ ಬೆಂಬಲಿಗರೊಂದಿಗೆ ಸೋನಮ್ ಉಪವಾಸ ಆರಂಭಿಸಿದರು.
ಇದನ್ನು ಓದಿದ್ದೀರಾ? ಸೋನಮ್ ವಾಂಗ್‌ಚುಕ್ ಬಂಧನದ ವಿರುದ್ದ ಪಿಐಎಲ್
ವಾಂಗ್‌ಚುಕ್ ಸೇರಿದಂತೆ ಸುಮಾರು 18 ಜನರು ಲಡಾಖ್ ಭವನದ ಗೇಟ್ ಬಳಿ ಕುಳಿತು ಘೋಷಣೆಗಳನ್ನು ಕೂಗಿದರು. ಇನ್ನು ಭಾನುವಾರ ಬೆಳಿಗ್ಗೆ ಜಂತರ್ ಮಂತರ್‌ನಲ್ಲಿ ಉಪವಾಸ ಕುಳಿತುಕೊಳ್ಳಲು ಅನುಮತಿ ನಿರಾಕರಿಸಲಾಗಿದೆ ಎಂದು ಎಕ್ಸ್‌ನಲ್ಲಿ ತಿಳಿಸಿದ್ದಾರೆ.
“ಮತ್ತೊಮ್ಮೆ ನಿರಾಕರಣೆ, ಮತ್ತೊಮ್ಮೆ ಹತಾಶೆ. ಅಂತಿಮವಾಗಿ ಇಂದು ಬೆಳಿಗ್ಗೆ ನಾವು ಪ್ರತಿಭಟನೆಗಾಗಿ ಅಧಿಕೃತವಾಗಿ ಗೊತ್ತುಪಡಿಸಿದ ಸ್ಥಳಕ್ಕೆ ಈ ನಿರಾಕರಣೆ ಪತ್ರವನ್ನು ಪಡೆದುಕೊಂಡಿದ್ದೇವೆ” ಎಂದು ವಾಂಗ್‌ಚುಕ್ ಹೇಳಿದರು.
ಶನಿವಾರ, ಹೆಚ್ಚಿನ ಪ್ರತಿಭಟನಾಕಾರರು ಲಡಾಖ್‌ಗೆ ಮರಳಿದ್ದು ಕೆಲವು ಕಾರ್ಯಕರ್ತರು ವಾಂಗ್‌ಚುಕ್ ಜೊತೆ ಪ್ರತಿಭಟನೆ ಮುಂದುವರೆಸಿದ್ದಾರೆ.
ANOTHER REJECTION ANOTHER FRUSTRATION
— Sonam Wangchuk (@Wangchuk66) October 6, 2024
Finally this morning we got this rejection letter for the officially designated place for protests.
If Jantar Mantar is not allowed then please tell us which place is allowed. We want to abide by all laws and still express our grievance in a… pic.twitter.com/FLnyCdA7KI
