ತುಮಕೂರು | ಶೋಷಿತರಿಗೆ ಆರ್ಥಿಕ ಸಮಾನತೆ ಬರಬೇಕಾದರೆ ಸಂವಿಧಾನ ರಕ್ಷಣೆ ಅಗತ್ಯ : ಸತೀಶ್ ಜಾರಕಿಹೋಳಿ

Date:

Advertisements

ಕಳೆದ 70 ವರ್ಷಗಳಿಂದ ಅಂಬೇಡ್ಕರ್ ಅನುಯಾಯಿಗಳು ಈ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುವವನ್ನು ಕಾಯುವ ಕೆಲಸ ಮಾಡುತ್ತಿದ್ದು, ಬುದ್ದ, ಬಸವ, ಅಂಬೇಡ್ಕರ್ ಅವರ ವಿಚಾರಧಾರೆಗಳು ಭೂಮಿ ಇರುವರೆಗೂ ಇರಬೇಕೆಂದರೆ, ಮತ್ತಷ್ಟು ಎಚ್ಚರಿಕೆಯಿಂದ ಕಾಯುವ ಕೆಲಸವನ್ನು ಮುಂದುವರೆಸಬೇಕಾದ ಅಗತ್ಯತೆ ಇದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ ತಿಳಿಸಿದರು.

ತುಮಕೂರು ನಗರದ ಏಂಪ್ರೆಸ್ ಕೆಪಿಎಸ್ ಶಾಲೆಯ ಸಭಾಂಗಣದಲ್ಲಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯ ಸರ್ವ ಸದಸ್ಯರ ಮಹಾ ಅಧಿವೇಶನದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶೋಷಿತರಿಗೆ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಜೊತೆಗೆ,ಅರ್ಥಿಕ ಸಮಾನತೆ ದೊರೆಯಬೇಕಾದರೆ ಸಂವಿಧಾನದ ರಕ್ಷಣೆಯ ಜವಾಬ್ದಾರಿಯನ್ನು ನಾವೆಲ್ಲರೂ ಮುಂದುವರೆಸಬೇಕಾಗಿದೆ ಎಂದರು.

ಗಾಂಧಿ, ನೆಹರು ವಿಚಾರಧಾರೆಗಳು ಇಂದು ಮೂಲೆಗೆ ಸರಿದಿವೆ.ಆದರೆ ಬುದ್ದ,ಬಸವ,ಅಂಬೇಡ್ಕರ್ ಅವರ ವಿಚಾರಧಾರೆಗಳಿಗೆ ಅಂತಹ ಸ್ಥಿತಿ ಬರದಂತೆ ನಾವು ಎಚ್ಚರಿಕೆ ವಹಿಸಬೇಕಾಗಿದೆ. ಒಂದು ವೇಳೆ ಈ ವಿಚಾರಧಾರೆಗಳು ಮೂಲೆಗುಂಪಾದರೆ ಸೃಷ್ಟಿಯೇ ಮುಗಿದಂತೆ. ಅರ್ಥಿಕವಾಗಿ ಸಬಲರಾಗಿರುವ ದಲಿತರು, ತಮ್ಮದೇ ಸಮುದಾಯವನ್ನು ಶೈಕ್ಷಣಿಕವಾಗಿ ಮೇಲೆತ್ತುವ ಕೆಲಸ ಆಗಬೇಕು. ಸರಕಾರಿ ನೌಕರಿ ಹೊಂದಿರುವ ದಲಿತರು,ತಮ್ಮದೆ ಸಮುದಾಯದ ಬಡವರ ಮಕ್ಕಳನ್ನು ದತ್ತು ಪಡೆದು,ಅವರನ್ನು ಶೈಕ್ಷಣಿಕವಾಗಿ ಮೇಲೆತ್ತುವ ಕೆಲಸ ಮಾಡಬೇಕಾಗಿದೆ. ಬಡವರು, ದಲಿತರ ಶೈಕ್ಷಣಿಕ ಅಭಿವೃದ್ದಿ ಕೇಂದ್ರಗಳಾದ ಸರಕಾರಿ ಶಾಲೆಗಳನ್ನು ಉಳಿಸುವ ಕೆಲಸವೂ ನಮ್ಮ ಅದ್ಯತೆಯಾಗಬೇಕಿದೆ ಎಂದರು.

Advertisements

ರಾಜ್ಯದ ಯಾವುದೇ ಮೂಲೆಯಲ್ಲಿ ದೌರ್ಜನ್ಯ, ದಬ್ಬಾಳಿಕೆಗಳು ನಡೆದರು ಮೊದಲು ಸಂತ್ರಸ್ಥರ ಜೊತೆ ನಿಲ್ಲುವುದು ದಸಂಸ ಎಂಬ ಹೆಗ್ಗಳಿಕೆ ನಮ್ಮದು. ಅಂಬೇಡ್ಕರ್ ಒಂದು ವರ್ಗದ ಒಳಿತಾಗಿ ಕೆಲಸ ಮಾಡಲಿಲ್ಲ. ಇಡೀ ಮನುಕುಲದ ಒಳಿತಿಗಾಗಿ ಕೆಲಸ ಮಾಡಿದರು ಎಂಬುದನ್ನು ನಮ್ಮ ಯುವಜನತೆ ತಿಳಿಸುವ ಮೂಲಕ, ಹಳ್ಳಿ ಹಳ್ಳಿಗಳಲ್ಲಿ ಅಂಬೇಡ್ಕರ್ ವಿಚಾರಧಾರೆ ಯನ್ನು ಬಿತ್ತುವ ಕೆಲಸ ಆಗಬೇಕಾಗಿದೆ. ದಲಿತಪರ, ಜೀವ ಪರ ಹೋರಾಟಗಾರರಿಗೆ ಸಂಪನ್ಮೂಲದ ಕೊರತೆ ಇರುವುದು ಸಹಜ. ಸಂವಿಧಾನದ ಅಡಿಯಲ್ಲಿ ಅಧಿಕಾರ, ಅಂತಸ್ಥು ಪಡೆದವರು ಈ ಕೊರತೆ ನೀಗಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕಿದೆ. ವಿಘಟನೆಯಾಗಿರುವ ಎಲ್ಲಾ ದಲಿತಪರ ಸಂಘಟನೆಗಳು ಸಂವಿಧಾನಕ್ಕೆ, ಪ್ರಜಾಪ್ರಭುತ್ವಕ್ಕೆ ಧಕ್ಕೆಯಾದಾಗ ಒಗ್ಗೂಡಿ ಎದುರಿಸುವ ಕೆಲಸ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ನಾನು ಸದಾ ನಿಮ್ಮೊಂದಿಗೆ ಇರಲಿದ್ದೇನೆ ಎಂದು ಸತೀಶ್ ಜಾರಕಿಹೋಳಿ ಭರವಸೆ ನೀಡಿದರು.

ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ,ಪ್ರತಿಯೊಂದು ಮಾನವ ವಿರೋಧಿ, ಜೀವ ವಿರೋಧಿ ಪ್ರಕ್ರಿಯೆಗಳಿಗೆ ದಸಂಸ ಪ್ರತಿಕ್ರಿಯಿಸಿದೆ.ದಲಿತರ ಸ್ವಾಭಿಮಾನದ ಹಾಡುಗಳು ಮನರಂಜನೆಯ ಸರಕು ಗಳಾಗದೆ,ಆಲೋಚನೆಗಳಾಗಬೇಕು.ಏಕವ್ಯಕ್ತಿ, ಏಕ ಭಾಷೆ,ಏಕ ರೂಪದ ಉಡುಪು,ಏಕ ಚುನಾವಣೆ ಇಂತಹ ವಿಚಾರಗಳ ಹಿಂದಿರುವ ಸಾಂಸ್ಕೃತಿಕ ರಾಜಕಾರಣವನ್ನು ದಲಿತ ಸಮುದಾಯ,ಅದರಲ್ಲಿಯೂ ದಲಿತ ಯುವ ಸಮುದಯ ಅರ್ಥಮಾಡಿ ಕೊಳ್ಳಬೇಕಿದೆ.ಹಾಗಾಗಿ ಬುದ್ದ ಭಾರತದಲ್ಲಿ ಜರ್ಮನಿಯ ನಾಜಿ ವಾದವನ್ನು ಬಿತ್ತಲು ನಾವು ಎಂದಿಗೂ ಬೀಡಬಾರದು. ರಾಜಪ್ರಭುತ್ವ ಸ್ಥಾಪನೆಯ ಹುನ್ನಾರವನ್ನು ತಡೆಯಬೇಕಿದೆ.2025-26ರಲ್ಲಿ ಜನಸಂಖ್ಯೆಯ ಆಧಾರದಲ್ಲಿ ಲೋಕಸಭಾ ಕ್ಷೇತ್ರಗಳ ಪುನರಚನೆಯಾಗಲಿದ್ದು, ರಾಜಪ್ರಭುತ್ವವನ್ನು ಪ್ರತಿಪಾದಿಸುವ ಉತ್ತರಭಾರತ ಎಂ.ಪಿ ಗಳ ಸಂಖ್ಯೆ 600 ದಾಟಿದರೆ,ದ್ರಾವಿಡ ಆಲೋಚನೆಯ ದಕ್ಷಿಣ ಭಾರತದ ಎಂ.ಪಿಗಳ ಸಂಖ್ಯೆ 160 ದಾಟುವುದು ಕಷ್ಟ. ಉತ್ತರ ಭಾರತದವರ ಸುಖಕ್ಕೆ ದಕ್ಷಿಣ ಭಾರತದ ಜನರು ದುಡಿಯಬೇಕಾದ ಅಪಾಯ ಬಂದೊಗಲಿದೆ.ಮುಂದಿನ ದಿನಗಳು ಮತ್ತಷ್ಟು ಕಠೋರವಾಗಲಿರುವೇ. ಈಗಲೇ ನಾವು ಎಚ್ಚೆತ್ತುಕೊಳ್ಳಬೇಕಿದೆ ಎಂದು ಗೊಲ್ಲಹಳ್ಳಿ ಶಿವಪ್ರಸಾದ್ ನುಡಿದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ಪ್ರೊ. ಬಿ.ಕೆ. ತಮ್ಮ ಇಡೀ ಜೀವನವನ್ನೇ ಶೋಷಿತ ಸಮುದಾಯಗಳ ಏಳಿಗೆಗಾಗಿ ಮುಡಿಪಾಗಿಟ್ಟವರು.ಸವಲತ್ತುಗಳೇ ಇಲ್ಲದ ಕಾಲದಲ್ಲಿ ಇಡೀ ರಾಜ್ಯ ಸುತ್ತಿ ದಸಂಸವನ್ನು ಪ್ರಬಲವಾಗಿ ಕಟ್ಟಿದರು.ಅವರು ಏನು ಹೇಳುತ್ತಾರೆ ಎಂಬುದನ್ನು ಒಂದು ಸರಕಾರ ಕಾದು ನಿಂತು ಕೇಳಿ ಜಾರಿಗೆ ತರುತ್ತಿತ್ತು. ಜಾರಿಯಲ್ಲಿರುವ ಭೂಮಿ ಹಕ್ಕು, ಪಿಟಿಸಿಎಲ್ ಕಾಯ್ದೆ, ದರಕಾಸ್ತು, ವಸತಿ ಶಾಲೆಗಳು, ಬ್ಯಾಕ್‌ಲಾಗ್ ಹುದ್ದೆ ತುಂಬುವುದು.ಬಡ್ತಿ ಮೀಸಲಾತಿ ಎಲ್ಲವೂ ದಲಿತ ಸಂಘರ್ಷ ಸಮಿತಿಯ ಬೇಡಿಕೆಗಳಾಗಿದ್ದವು ಎಂದರು.

ದಲಿತರ ಹಕ್ಕುಗಳಿಗೆ ರಕ್ಷಣೆಯಾಗಿರುವ ಸಂವಿಧಾನದ ರೆಕ್ಕೆಗಳನ್ನು ಕತ್ತರಿಸುವ ಕೆಲಸವನ್ನು ಕೆಲವರು ಮಾಡುತಿದ್ದಾರೆ.ಇದನ್ನು ಆರಂಭದಿಂದಲೂ ದಸಂಸ ವಿರೋಧಿಸಿಕೊಂಡೇ ಬರುತ್ತಿದೆ.ಇದರ ಭಾಗವಾಗಿಯೇ ಇಂದು ಪ್ರತಿ ಶಾಲೆಯಲ್ಲಿ ಸಂವಿಧಾನ ಆಶ್ರಯಗಳನ್ನು ಓದುವ ಕೆಲಸ ಆರಂಭವಾಗಿದೆ.ಹಾಗೆಯೇ ಸರಕಾರವೇ ಪ್ರಜಾಪ್ರಭುತ್ವದ ರಕ್ಷಣೆಗೆ ನಿಂತಿದೆ. ಇದನ್ನು ದಸಂಸ ಹೋರಾಟದ ಫಲ. ರಾಜಪ್ರಭುತ್ವದಲ್ಲಿ ಶೋಷಿತರಿಗೆ ಮೀಸಲಾತಿ ನೀಡಿದ ಶಾಹು ಮಹರಾಜ್ ಅವರಿಗೆ ಚರಿತ್ರೆಯ ಪುಟಗಳಲ್ಲಿ ಸ್ಥಾನವಿಲ್ಲ.ಆದರೆ ಅದನ್ನು ವಿರೋಧಿಸಿದ ಬಾಲಗಂಗಾಧರನಾಥ ತಿಲಕ್ ಅವರಿಗೆ ಲೋಕಮಾನ್ಯ ರಾಗಿದ್ದಾರೆ. ಬಹುಜನ ಚಳವಳಿ ಆರಂಭವಾದ ನಂತರ ಇತಿಹಾಸದಲ್ಲಿ ಶಾಹು ಮಹಾರಾಜ್, ಸಾವಿತ್ರಿ ಬಾಯಿ ಪುಲೆ ಅಂತಹವರು ಜಗತ್ತಿಗೆ ಪರಿಚಿತರಾಗುತಿದ್ದಾರೆ.ಅಂಬೇಡ್ಕರ್ ಅವರು ವಿಚಾರಧಾರೆಗಳು ಕಸದ ಬುಟ್ಟಿಗೆ ಸೇರಿದಂತೆ ಎಚ್ಚರಿಕೆಯನ್ನು ನಾವೆಲ್ಲರೂ ವಹಿಸಬೇಕಾಗಿದೆ ಎಂದು ಮಾವಳ್ಳಿ ಶಂಕರ್ ನುಡಿದರು.

ದಸಂಸ ಹಿರಿಯ ಸದಸ್ಯ ಕುಂದೂರು ತಿಮ್ಮಯ್ಯ ಮಾತನಾಡಿ, ಒಳಮೀಸಲಾತಿ ತೀರ್ಪು ಬಂದು ತಿಂಗಳು ಕಳೆದರೂ ಸರಕಾರಗಳು ಅವುಗಳ ಜಾರಿಗೆ ಮೀನಾಮೇಷ ಎಣಿಸುತ್ತಿರುವುದರ ಪರಿಣಾಮ ಶೋಷಿತ ಸಮುದಾಯಗಳಲ್ಲಿ ಹೆಚ್ಚು ಒಡಕು ಉಂಟಾಗುತ್ತಿದೆ.ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಒಳಮೀಸಲಾತಿ ಜಾರಿಗೆ ಬರಬೇಕಾಗಿದೆ. ಹಾಗೆಯೇ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಘ ಸೇರಿದಂತೆ ಕಿರು ಹಣಕಾಸು ಸಂಸ್ಥೆಗಳು ಮಹಿಳೆಯರ ಮಾನ, ಪ್ರಾಣ ಹರಣಕ್ಕೆ ಕಾರಣವಾಗಿದ್ದು, ಸರಕಾರ ಕೂಡಲೇ ಇವುಗಳ ಪರವಾನಗಿಯನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದರು.

ವೇದಿಕೆಯಲ್ಲಿ ಮಾನವ ಬಂಧುತ್ವ ವೇದಿಕೆಯ ಆನಂತನಾಯ್ಕ್, ವಿರೂಪಾಕ್ಷ ಡ್ಯಾಗೇರಹಳ್ಳಿ, , ಮುರುಳಿ ಕುಂದೂರು,ಚೇಳೂರು ಶಿವನಂಜಪ್ಪ,ಗಾನ ಅಶ್ವಥ್,ಮಲ್ಲೇಶ್ ಅಂಬುಗ, ನಾಗಣ್ಣ ಬಡಿಗೇರ, ಅರ್ಜುನ್ ಗೊಬ್ಬುರ್, ತಾಯಪ್ಪ, ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿ ನಿರ್ಮಲ, ಮುಖಂಡರಾದ ರವೀಂದ್ರ ಹೊಸಕೋಟೆ, ಚಂದ್ರಪ್ಪ ಮತ್ತಿತರರು ಪಾಲ್ಗೊಂಡಿದ್ದರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ಗಣೇಶ ಚತುರ್ಥಿ ಪ್ರಯುಕ್ತ 265 ಹೆಚ್ಚುವರಿ ಸಾರಿಗೆ ಸೌಲಭ್ಯ

ಚತುರ್ಥಿಯ ಪ್ರಯುಕ್ತ ಸಾರ್ವಜನಿಕರು ತಮ್ಮ ಸ್ವಂತ ಊರುಗಳಿಗೆ ತೆರಳಲು ಅನುಕೂಲವಾಗುವಂತೆ ವಾಯವ್ಯ...

ಗದಗ | ಆಗಸ್ಟ್ 25ಕ್ಕೆ ಲೋಕಾಯುಕ್ತ ಜನ ಸಂಪರ್ಕ ಸಭೆ

ಸಾರ್ವಜನಿಕ ಕುಂದು-ಕೊರತೆಗಳ ಅಹವಾಲು ಸ್ವೀಕರಿಸಲು ಆಗಸ್ಟ್ 25 ಸೋಮವಾರದಂದು  ಗದಗ ಶಿರಹಟ್ಟಿ...

ಬೀದರ್‌ | ಅತಿವೃಷ್ಟಿ : ತ್ವರಿತ ಬೆಳೆ ಹಾನಿ ಪರಿಹಾರಕ್ಕೆ ಕಿಸಾನ್‌ ಸಭಾ ಒತ್ತಾಯ

ಮೇ ತಿಂಗಳಿಂದ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉದ್ದು, ಹೆಸರು, ತೊಗರಿ ಸೇರಿದಂತೆ ಹಲವು...

ಚಿಕ್ಕಬಳ್ಳಾಪುರ | ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ: ಹಿರಿಯ ನ್ಯಾ. ಶಿಲ್ಪಾ

ಜಾಗತೀಕರಣ ಯುಗದಲ್ಲಿ ನಮ್ಮ ಜಾಗೃತಿ ನಮಗೆ ಗುರುವಾಗಬೇಕು. ಪೋಷಕರು ಮಕ್ಕಳನ್ನು...

Download Eedina App Android / iOS

X