ಕಳೆದ ವಾರ ಬೈರುತ್‌ನಲ್ಲಿ ಇಸ್ರೇಲ್ ದಾಳಿ ನಡೆಸಿದ ಬಳಿಕ ಇರಾನ್ ಕಮಾಂಡರ್ ಇಸ್ಮಾಯಿಲ್ ಖಾನಿ ನಾಪತ್ತೆಯಾಗಿದ್ದಾರೆ ಎಂದು ಇರಾನ್‌ನ ಇಬ್ಬರು ಹಿರಿಯ ಭದ್ರತಾ ಅಧಿಕಾರಿಗಳು ತಿಳಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.
ಇಸ್ಮಾಯಿಲ್ ಖಾನಿ ರೆವೊಲ್ಯುಷನರಿ ಗಾಡ್ರ್ಸ್ ಕಾಪ್ರ್ಸ್ (ಐಆರ್‌ಜಿಸಿ) ಕಡ್ಸ್ ಪಡೆಯ ಕಮಾಂಡರ್ ಆಗಿದ್ದಾರೆ. ಕಳೆದ ತಿಂಗಳು ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ನಾಯಕ ಸಯ್ಯದ್ ಹಸನ್ ನಸ್ರಲ್ಲಾ ಹತ್ಯೆಯಾಗಿದ್ದು ಇದಾದ ಬಳಿಕ ಇಸ್ಮಾಯಿಲ್ ಖಾನಿ ಲೆಬನಾನ್‌ಗೆ ತೆರಳಿದ್ದರು.
ಇದನ್ನು ಓದಿದ್ದೀರಾ? ಗಾಜಾದ ಮಸೀದಿ ಮೇಲೆ ಇಸ್ರೇಲ್ ದಾಳಿ; 21 ಮಂದಿ ಸಾವು
ಇನ್ನು ಬೈರುತ್‍ನ ದಕ್ಷಿಣ ಉಪನಗರ ದಹಿಯೆಹ್‍ನಲ್ಲಿ ಶುಕ್ರವಾರ ಇಸ್ರೇಲ್ ದಾಳಿ ನಡೆಸಿದ ಬಳಿಕ ಹಿಜ್ಬುಲ್ಲಾದ ನೂತನ ಮುಖಂಡ ಹಶೆಮ್ ಸಫಿಯುದ್ದೀನ್ ಕೂಡಾ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ವರದಿಯಾಗಿದೆ.
2020ರಲ್ಲಿ ಬಾಗ್ದಾದ್‌ನಲ್ಲಿ ಡ್ರೋನ್ ದಾಳಿಯಲ್ಲಿ ಯುನೈಟೆಡ್ ಸ್ಟೇಟ್ಸ್ ಇರಾನ್‌ನ ಅಂದಿನ ಸೇನಾಧಿಕಾರಿ ಖಾಸೆಮ್ ಸೊಲೈಮಾನಿಯನ್ನು ಹತ್ಯೆ ಮಾಡಿದೆ. ಇದಾದ ಬಳಿಕ ಇರಾನ್ ಇಸ್ಮಾಯಿಲ್ ಖಾನಿಯನ್ನು ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್‌ನ ಸಾಗರೋತ್ತರ ಮಿಲಿಟರಿ ಗುಪ್ತಚರ ಸೇವೆಯ ಮುಖ್ಯಸ್ಥ ಎಂದು ಹೇಳಿದೆ.
