ಲೆಕ್ಕ ಪರಿಶೋಧಕರು ಮತ್ತು ಕಂಪನಿ ಕಾರ್ಯದರ್ಶಿಗಳಿಗೂ ಕಾಡಲಿದೆ ಪಿಎಂಎಲ್‌ಎ ಗುಮ್ಮ

Date:

Advertisements

ಲೆಕ್ಕಪರಿಶೋಧಕರು ಮತ್ತು ಕಂಪನಿ ಕಾರ್ಯದರ್ಶಿಗಳನ್ನು ಪಿಎಂಎಲ್‌ಎ ವ್ಯಾಪ್ತಿಯಡಿ ಸೇರಿಸುತ್ತಿರುವುದು ಹಣಕಾಸು ವೃತ್ತಿಪರರ ನಡುವೆ ಅಸಮಾಧಾನ ಮೂಡಿಸಿದೆ.

ಜಾಗತಿಕ ಹಣ ದುರುಪಯೋಗ ಮತ್ತು ಉಗ್ರವಾದಕ್ಕೆ ಹಣ ವರ್ಗಾವಣೆಯ ಕಾವಲುಗಾರ ಸಂಸ್ಥೆ ಹಣಕಾಸು ಕ್ರಿಯಾ ಕಾರ್ಯಪಡೆ ಅಥವಾ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್‌ಫೋರ್ಸ್‌ (ಎಫ್‌ಎಟಿಎಫ್‌) ಒಳಗೆ ಭಾರತ ಸದಸ್ಯನಾಗುವ ಬಗ್ಗೆಇದೇ ವರ್ಷ ನಿರ್ಧಾರ ಕೈಗೊಳ್ಳುವುದು ಬಾಕಿ ಇರುವಾಗ ಕೇಂದ್ರ ಸರ್ಕಾರ ಹಣ ದುರುಪಯೋಗ ತಡೆ ಕಾಯ್ದೆಯಲ್ಲಿ (ಪಿಎಂಎಲ್‌ಎ) ಕೆಲವು ಮಹತ್ವದ ಬದಲಾವಣೆಗಳನ್ನು ತರುತ್ತಿದೆ.

ಕಳೆದ ಕೆಲವು ತಿಂಗಳಿಂದ ಕೇಂದ್ರ ಸರ್ಕಾರ ಪಿಎಂಎಲ್‌ಎಗೆ ತಿದ್ದುಪಡಿ ತರುವ ಪ್ರಯತ್ನದಲ್ಲಿದೆ. ಪ್ರಮುಖ ತಿದ್ದುಪಡಿಯಾಗಿ ಲೆಕ್ಕ ಪರಿಶೋಧಕರು, ಕಂಪನಿ ಕಾರ್ಯದರ್ಶಿಗಳು, ತಮ್ಮ ಗ್ರಾಹಕರಿಗೆ ಲೆಕ್ಕಿಗರು ಮಾಡುವ ಕೆಲಸ ಮತ್ತು ವೆಚ್ಚ ಪಿಎಂಎಲ್‌ಎ ಕಾಯ್ದೆಯಡಿಗೆ ತರುವ ಪ್ರಯತ್ನವಾಗುತ್ತಿದೆ. ಜೊತೆಗೆ, ಅಮೆಜಾನ್ ಪೇ (ಇಂಡಿಯಾ) ಪ್ರೈವೇಟ್ ಲಿಮಿಟೆಡ್‌, ಆದಿತ್ಯ ಬಿರ್ಲಾ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಹಾಗೂ ಐಐಎಫ್‌ಎಲ್ ಫೈನಾನ್ಸ್ ಲಿಮಿಟೆಡ್‌ನಂತಹ 22 ಹಣಕಾಸು ಸಂಸ್ಥೆಗಳಿಗೆ ಆಧಾರ್ ಮೂಲಕ ತಮ್ಮ ಗ್ರಾಹಕರನ್ನು ಪರಿಶೀಲಿಸಲು ಮತ್ತು ಗುರುತಿಸಲು ಅವಕಾಶ ಕೊಡಲಾಗುತ್ತಿದೆ.

Advertisements

ಪಿಎಂಎಲ್‌ಎ ಅಡಿಯಲ್ಲಿ ಮಾಡಲಾಗುವ ಬದಲಾವಣೆಗಳೇನು?

ಮಾರ್ಚ್‌ನಲ್ಲಿ ಹಣಕಾಸು ಸಚಿವಾಲಯ ಹಣ ದುರುಪಯೋಗ ನಿಯಮಗಳನ್ನು ಬದಲಿಸಿ ಸರ್ಕಾರೇತರ ಸಂಘಟನೆಗಳು ತಮ್ಮ ಅನುದಾನದ ಬಗ್ಗೆ ಹೆಚ್ಚು ವಿವರ ಬಹಿರಂಗಪಡಿಸಬೇಕಾಗುವಂತೆ ಬದಲಾವಣೆ ಮಾಡಿದೆ. ಅಂದರೆ, ಹಣಕಾಸು ಸಂಸ್ಥೆಗಳು, ಬ್ಯಾಂಕಿಂಗ್ ಕಂಪನಿಗಳು ಅಥವಾ ಮಧ್ಯವರ್ತಿ ಹಣಕಾಸು ಸಂಸ್ಥೆಗಳಿಗೆ ವರದಿ ಮಾಡುವ ಮೂಲಕ ವಿವರ ನೀಡುವುದು. ಹೆಚ್ಚುವರಿಯಾಗಿ, “ರಾಜಕೀಯವಾಗಿ ಬಹಿರಂಗಗೊಂಡ ವ್ಯಕ್ತಿಗಳು” (ಪಿಇಪಿಗಳು)  ಎನ್ನುವ ವ್ಯಾಖ್ಯಾನವನ್ನು ಮುಂದಿಟ್ಟಿದೆ.

ಪಿಎಂಎಲ್‌ಎ ಅಡಿಯಲ್ಲಿ ವಿದೇಶಗಳಿಂದ ದೇಶದಲ್ಲಿ ಪ್ರಮುಖ ಸಾರ್ವಜನಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ನಿಯೋಜಿತರಾದ ವಿದೇಶಿ ಪ್ರಜೆಗಳ ಮೇಲೂ ಕಣ್ಣಿಡಲಾಗುವುದು. ರಾಜ್ಯಗಳು ಅಥವಾ ಸರ್ಕಾರಗಳ ಮುಖ್ಯಸ್ಥರು, ಹಿರಿಯ ರಾಜಕಾರಣಿಗಳು, ಹಿರಿಯ ಸರ್ಕಾರಿ ಅಥವಾ ನ್ಯಾಯಾಂಗ ಅಥವಾ ಸೇನಾಧಿಕಾರಿಗಳು, ರಾಜ್ಯದ ಅಡಿಯಲ್ಲಿ ಬರುವ ಪಾಲಿಕೆಗಳ ಹಿರಿಯ ಕಾರ್ಯಕಾರಿ ಸಿಬ್ಬಂದಿಗಳು ಮತ್ತು ಪ್ರಮುಖ ರಾಜಕೀಯ ಪಕ್ಷದ ಅಧಿಕಾರಿಗಳು ಈ ‘ಪಿಇಪಿಗಳು’ ವ್ಯಾಖ್ಯಾನದಡಿ ಬರುತ್ತಾರೆ. ಈ ತಿದ್ದುಪಡಿ ವಿದೇಶಿ ಪಿಇಪಿಗಳಿಗೆ ಅನ್ವಯವಾಗುತ್ತದೆಯೇ ವಿನಾ ಭಾರತೀಯ ಪ್ರಜೆಗಳಿಗಲ್ಲ.

ಮೇ 3ರಂದು ಹಣಕಾಸು ಸಚಿವಾಲಯ ವೃತ್ತಿನಿರತ ಲೆಕ್ಕ ಪರಿಶೋಧಕರು, ಕಂಪನಿ ಕಾರ್ಯದರ್ಶಿಗಳು ಹಾಗೂ ಲೆಕ್ಕಿಗರು ತಮ್ಮ ಗ್ರಾಹಕರ ಪರವಾಗಿ ಮಾಡುವ ಹಣಕಾಸು ವ್ಯವಹಾರಗಳ ಕಾರ್ಯ ಮತ್ತು ವೆಚ್ಚವನ್ನೂ ಪಿಎಂಎಲ್‌ಎ ಅಡಿಗೆ ತರಲಾಗಿದೆ. ಇವುಗಳಳಲ್ಲಿ ಸ್ಥಿರಾಸ್ತಿಗಳ ಖರೀದಿ ಮತ್ತು ಮಾರಾಟ, ಗ್ರಾಹಕರ ಹಣ ನಿಭಾಯಿಸುವುದು, ಸೆಕ್ಯುರಿಟೀಸ್ ಅಥವಾ ಇತರ ಆಸ್ತಿಗಳು, ಬ್ಯಾಂಕ್ ನಿರ್ವಹಣೆ, ಉಳಿತಾಯ ಅಥವಾ ಭದ್ರತಾ ಠೇವಣಿಗಳು, ಕಂಪನಿಗಳ ವ್ಯವಹಾರಕ್ಕೆ ಹಣಕಾಸು ನಿಯೋಜನೆ, ಸಹಭಾಗಿತ್ವದ ಎಲ್‌ಎಲ್‌ಪಿಗಳು ಅಥವಾ ಟ್ರಸ್ಟ್‌ಗಳ ವ್ಯವಹಾರ ಹಾಗೂ ಉದ್ಯಮ ಸಂಸ್ಥೆಗಳ ಖರೀದಿ ಮತ್ತು ಮಾರಾಟವೂ ಪಿಎಂಎಲ್‌ಎ ಅಡಿಯಲ್ಲಿ ಬರಲಿದೆ.

ಮೇ 4ರಂದು ವರದಿ ಸಲ್ಲಿಸಬೇಕಾದ ಬ್ಯಾಂಕಿಂಗೇತರ ಸಂಸ್ಥೆಗಳ ಪಟ್ಟಿಯಲ್ಲಿ 22 ಹಣಕಾಸು ಸಂಸ್ಥೆಗಳನ್ನು ಸೇರಿಸಿದೆ. ಅಂದರೆ, ತಮ್ಮ ಗ್ರಾಹಕರು ಪಿಎಂಎಲ್‌ಎ ಅಡಿಯಲ್ಲಿ ಬರುವ ಅವ್ಯವಹಾರಗಳಲ್ಲಿ ನಿರತರಾಗಿದ್ದಾರೆಯೇ ಎಂದು ಆಧಾರ್ ಮೂಲಕ ಪರಿಶೀಲಿಸುವ ಮತ್ತು ಗುರುತಿಸುವ ಅಧಿಕಾರವನ್ನು ಈ ಬ್ಯಾಂಕಿಂಗೇತರ ಸಂಸ್ಥೆಗಳಿಗೆ ನೀಡಿದೆ. ಕಳೆದ ತಿಂಗಳು ಐಟಿ ಸಚಿವಾಲಯ ಈ ಖಾಸಗಿ ಸಂಸ್ಥೆಗಳಿಗೆ ಅನೇಕ ಸೇವೆಗಳಿಗೆ ಆಧಾರ್ ಅಧಿಕೃತಗೊಳಿಸಿದೆ. ಹಾಗೆ ಆಧಾರ್‌ ಬಳಕೆಯನ್ನು ಸಚಿವಾಲಯ ಮತ್ತು ಇಲಾಖೆ ಮೀರಿ ವಿಸ್ತೃತಗೊಳಿಸಿದೆ.

ಈ ಸುದ್ದಿ ಓದಿದ್ದೀರಾ?: ಈದಿನ.ಕಾಮ್‌ ಸಮೀಕ್ಷೆ-8: ಕಾಂಗ್ರೆಸ್‌ಗೆ ಸಿಗಲಿದೆ ಸ್ಪಷ್ಟ ಬಹುಮತ; 132-140 ಸೀಟುಗಳ ನಿರೀಕ್ಷೆ

ಬದಲಾವಣೆಗಳಿಗೆ ಪ್ರತಿಕ್ರಿಯೆ ಹೇಗಿದೆ?

ಹಣಕಾಸು ವೃತ್ತಿಪರರು ಹೊಸ ಬದಲಾವಣೆಯ ಬಗ್ಗೆ ಬಹಿರಂಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆಡಿಟರ್‌ಗಳು ಮತ್ತು ಹಣಕಾಸು ಸಂಬಂಧಿ ಕಾನೂನು ವೃತ್ತಿಪರರನ್ನು ಇಂತಹ ತನಿಖಾ ವ್ಯಾಪ್ತಿಯಿಂದ ಹೊರಗಿಟ್ಟಿರುವುದನ್ನು ಪ್ರಶ್ನಿಸುತ್ತಿದ್ದಾರೆ. ಅಲ್ಲದೆ, ಲೆಕ್ಕ ಪರಿಶೋಧಕರು ತನಿಖಾ ಸಂಸ್ಥೆಗಳಿಂದ ಕಿರುಕುಳ ಎದುರಿಸಬೇಕಾಗುವ ಸಂದರ್ಭಗಳು ಬರಬಹುದೆನ್ನುವ ಆತಂಕ ವ್ಯಕ್ತಪಡಿಸಿದ್ದಾರೆ.

ಲೆಕ್ಕಪರಿಶೋಧಕರು ಮತ್ತು ಇತರ ಹಣಕಾಸು ವೃತ್ತಿಪರರನ್ನು ನಿಯಂತ್ರಿಸಲು ಈಗಾಗಲೇ ಸಂಸತ್ತಿನ ಅಡಿಯಲ್ಲಿ ವಿವಿಧ ಕಾಯ್ದೆಗಳು ಇರುವಾಗ ಪಿಎಂಎಲ್‌ಎ ಅಡಿಯಲ್ಲಿ ಅವರನ್ನು ತರುವುದು ಅನಗತ್ಯ ಎನ್ನುವ ಅಭಿಪ್ರಾಯವೂ ಕೇಳಿ ಬಂದಿದೆ.

ಹಣಕಾಸು ವೃತ್ತಿಪರರನ್ನು ಪಿಎಂಎಲ್‌ಎ ಅಡಿ ತರಲು ಕಾರಣವೇನು?

ಎಫ್‌ಎಟಿಎಫ್‌ನ ಭಾಗವಾಗಬೇಕೆಂದಿದ್ದರೆ ಭಾರತ ಪಿಎಂಎಲ್‌ಎ ಕಾಯ್ದೆಯಡಿ ವೃತ್ತಿಪರರನ್ನು ತರುವ ಅನಿವಾರ್ಯತೆ ಎದುರಿಸುತ್ತಿದೆ. ಎಫ್‌ಎಟಿಎಫ್‌ನ ಭಾಗವಾಗುವ ಮುನ್ನ ಈ ಕ್ರಮವನ್ನು ಭಾರತ ತೆಗೆದುಕೊಳ್ಳಲೇಬೇಕಿದೆ. ಆದರೆ ಪಿಎಂಎಲ್‌ಎ ಕೇವಲ ತೀರ್ಪು ನೀಡುವ ಪ್ರಾಧಿಕಾರ ಹೊಂದಿದೆ. ಈ ಮೇಲ್ಮನವಿ ನ್ಯಾಯಮಂಡಳಿ ಕ್ರಿಮಿನಲ್ ಕ್ರಮ ಕೈಗೊಳ್ಳುವ ಅಧಿಕಾರ ಹೊಂದಿಲ್ಲದೆ ಇರುವುದು ವೃತ್ತಿಪರರಿಗೆ ಸಮಾಧಾನ ತರಲಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X