‘ಒಂದು ದೇಶ – ಒಂದು ಚುನಾವಣೆ’ ಒಕ್ಕೂಟ ವ್ಯವಸ್ಥೆಗೆ ಅಪಾಯಕಾರಿ: ಜಸ್ಟಿಸ್ ನಾಗಮೋಹನ್ ದಾಸ್

Date:

Advertisements

ಒಂದು ದೇಶ ಒಂದು ಚುನಾವಣೆ ವ್ಯವಸ್ಥೆ ಜಾರಿಗೆ ಬಂದರೆ, ದೇಶದಲ್ಲಿ ಅಭದ್ರತೆ ಶುರುವಾಗುತ್ತದೆ. ಒಕ್ಕೂಟ ವ್ಯವಸ್ಥೆ ನಾಶವಾಗುತ್ತದೆ. ಸಾಮಾನ್ಯ ಜನರು ಪ್ರಶ್ನೆ ಮಾಡುವ ಅವಕಾಶ ಕಳೆದುಕೊಳ್ಳುತ್ತಾರೆ. ಚರ್ಚೆ ಮಾಡಿ ಉತ್ತರ ಕಂಡುಕೊಳ್ಳುವ ವ್ಯವಸ್ಥೆಯೂ ಇಲ್ಲವಾಗುತ್ತದೆ ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ‘ಒಂದು ದೇಶ – ಒಂದು ಚುನಾವಣೆ; ನಿರಂಕುಶ ಪ್ರಭುತ್ವದತ್ತ ಭಾರತ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ರಾಜಕೀಯ ಅಧಿಕಾರ ಅಂದರೆ ಕಾನೂನುಗಳನ್ನ ಜಾರಿ ಮಾಡುವ ಅಧಿಕಾರ. ಅದನ್ನ ಉಲ್ಲಂಘಣೆ ಮಾಡಿದ್ರೆ ಶಿಕ್ಷೆ ವಿಧಿಸುವುದು ಸರ್ಕಾರ. ಈ ಹಿಂದೆ ಈ ಅಧಿಕಾರ ರಾಜರ ಕೈಯಲ್ಲಿತ್ತು. ಆ ಬಳಿಕ ಪ್ರಜಾಪ್ರಭುತ್ವ ವ್ಯವಸ್ಥೆ ಪ್ರತ್ಯೆಕವಾದ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಆಡಳಿತಕ್ಕೆ ಬಂದಿತು. ಈಗ ಭಾರತ ಗಣರಾಜ್ಯಕ್ಕೆ 72 ವರ್ಷಗಳು ಕಳೆದಿವೆ. ನಮ್ಮ ಸಂವಿಧಾನದಲ್ಲಿ ಪಾಳೆಗಾರಿಕೆ ಕೆಡವಿ ಪ್ರಜಾಪ್ರಭುತ್ವ ವನ್ನ ತಂದಿದ್ದೇವೆ” ಎಂದು ತಿಳಿಸಿದರು.

“ನ್ಯಾಯಾಂಗ ಸಂಸ್ಥೆಗೆ ನ್ಯಾಯಾಧೀಶರ ನೇಮಕ, ಕಾರ್ಯಾಂಗಕ್ಕೆ ಅಧಿಕಾರಿಗಳ ನೇಮಕ ಮಾಡಲಾಗುತ್ತದೆ. ಆದರೆ, ಶಾಸಕಾಂಗಕ್ಕೆ ಮಾತ್ರ ಜನ ಪ್ರತಿನಿಧಿಗಳನ್ನ ಚುನಾವಣೆ ಮೂಲಕ ಜನರು ಅಯ್ಕೆ ಮಾಡುತ್ತಾರೆ.  ಜಿಲ್ಲಾ ಪಂಚಾಯತಿ, ಪಟ್ಟಣ ಪಂಚಾಯತಿ, ಪುರಸಭೆ, ವಿಧಾನಸಭಾ ಚುನಾವಣೆಗಳ ಮೂಲಕ ಮತದಾರರು ಚುನಾವಣೆ ಮೂಲಕ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ಮೆಲ್ಜಾತಿ, ಕೆಳಜಾತಿ, ಅಕ್ಷರಸ್ಥ, ಅನಕ್ಷರಸ್ಥ ಅನ್ನೋ ಭೇಧಭಾವ ಇಲ್ಲದೆ ಎಲ್ಲರಿಗೂ ಮತದಾನದ ಹಕ್ಕಿದೆ. ಒಂದು ಮತಕ್ಕೆ ಒಂದು ಮೌಲ್ಯ ಎಂದು ಅಂಬೇಡ್ಕರ್ ಹೇಳಿದ್ದಾರೆ. ನಿಮ್ಮ ಒಂದು ಮತದಿಂದ ಒಬ್ಬ ವ್ಯಕ್ತಿ ಗೆಲ್ಲಲೂಬಹುದು ಸೋಲಲೂಬಹುದು” ಎಂದರು.

Advertisements

“ಚುನಾವಣಾ ರಾಜಕಾರಣದಲ್ಲಿ ಹಲವಾರು ಬದಲಾವಣೆಗಳು, ಸುಧಾರಣೆಗಳು ಆಗಿವೆ. ಹರಿಯಾಣದ ವಿಷಯದಲ್ಲಿ ನೋಡಿ ಕಡಿಮೆ ಮತ ಪಡೆದ ಪಕ್ಷ ಬಿಜೆಪಿ, ಹೆಚ್ಚು ಸ್ಥಾನಗಳನ್ನು ಗೆದ್ದಿದೆ. ಮತಗಳ ಪ್ರಮಾಣಕ್ಕೂ ಸೀಟುಗಳ ಗೆಲುವಿಗೂ ಸಂಭಂಧ ಇಲ್ಲದೇ ಇರೋ ಪರಿಸ್ಥಿತಿ ನಿರ್ಮಾಣವಾಗಿದೆ. ಬಹಳ ದೊಡ್ಡ ಪ್ರಮಾಣದಲ್ಲಿ ಪಕ್ಷಾಂತರ ನಡೆಯುತ್ತಿದೆ. ಅದು ಕೇವಲ ಅಧಿಕಾರಕ್ಕಾಗಿ ಸೈದ್ಧಾಂತಿಕತೆಯನ್ನೇ ಮರೆಯಲಾಗಿದೆ. ಹಣ ಮಾಡೋದೆ ಇವತ್ತಿನ ರಾಜಕಾರಣದ ನೀತಿಯಾಗಿದೆ. ಇಂತಹ ಸಂದರ್ಭಗಳಲ್ಲಿ ಸುಧಾರಣೆ ಅತ್ಯವಶ್ಯಕ” ಎಂದಿದ್ದಾರೆ.

“ಒಂದು ದೇಶ – ಒಂದು ಚುನಾವಣೆ ವಿಚಾರವನ್ನ ಬಿಜೆಪಿ ಸರ್ಕಾರ ಮುನ್ನೆಲೆಗೆ ತಂದಿದೆ. ರಾಮನಾಥ್ ಕೋವಿಂದ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ, ಆ ಬಗ್ಗೆ ವರದಿಯನ್ನೂ ಸಲ್ಲಿಸಿದೆ. ಚುನಾವಣೆಗಳಿಗಾಗಿಯೇ ಸಮಯ ವ್ಯರ್ಥವಾಗುತ್ತಿದೆ. ಹೀಗಾಗಿ, ಒಂದೇ ಸಮಯಕ್ಕೆ ದೇಶಾದ್ಯಂತ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆ ನಡೆಸಬೇಕು ಎಂಬ ವಾದವನ್ನು ಮುನ್ನೆಲೆಗೆ ತಂದಿದೆ. ಆದರೆ, ಆದರೆ ನಮ್ಮ ಚುನಾವಣೆ ವ್ಯವಸ್ಥೆಯಲ್ಲಿ 5 ವರ್ಷಕ್ಕೊಮ್ಮೆ ಚುನಾವಣೆ ನಡೆಯೋದು. ಇಲ್ಲಿ ಯಾವ ಸಮಯವೂ ವ್ಯರ್ಥವಾಗುವುದಿಲ್ಲ. ಇದೆಲ್ಲವೂ ಅಧಿಕಾರ ಕೇಂದ್ರೀಕರಣದ ತಂತ್ರ” ಎಂದು ವಿವರಿಸಿದ್ದಾರೆ.

“ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿದರು. ಆದರೆ, ಜಾರಿಗೆ ತರಲಿಲ್ಲ. ಮೊದಲು ಇವುಗಳನ್ನು ಜಾರಿಗೆ ತರಬೇಕು. ಚುನಾವಣಾ ಪ್ರಕ್ರಿಯೆಯಲ್ಲಿ ಬಹಳ ಪರಿಣಾಮ ಬೀರುತ್ತಿರುವುದು ರಾಜಕೀಯ ಪಕ್ಷಗಳು. ಅಭ್ಯರ್ಥಿಗಳು ಹೆಚ್ಚು-ಹೆಚ್ಚು ಹಣ ಖರ್ಚು ಮಾಡುತ್ತಿದ್ದಾರೆ. ಹಣ ಇಲ್ಲದೆ, ಚುನಾವಣೆ ಎದುರಿಸೋಕೆ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಬದಲಾಗಬೇಕು” ಎಂದರು.

 ‘ಕೋವಿಂದ್ ಸಮಿತಿ ನೀಡಿರುವ ವರದಿಯಲ್ಲಿ ಎರಡು ಕಾರಣಗಳು ಸಕಾರಣಗಳಲ್ಲ. ಇದರಿಂದ ನಮ್ಮ ದೇಶಕ್ಕೆ ದೊಡ್ಡ ಮಾರಕ ಇದೆ. ಇದನ್ನು ಜಾರಿಗೆ ತರಬೇಕಂದರೆ, ಸಂವಿಧಾನದಲ್ಲಿ ಭಾರೀ ತಿದ್ದುಪಡಿಗಳು ಆಗಬೇಕು. ಅದರಲ್ಲಿ, ಮೂರನೇ ಎರಡರಷ್ಟು ಬಹುಮತಬೇಕು. ಈಗಿನ ಪರಿಸ್ಥಿತಿಯಲ್ಲಿ ಅದು ಸಾಧ್ಯವೇ ಇಲ್ಲ. ಆದರೆ, ಏನೋ, ಮ್ಯಾನುಪುಲೇಟ್ ಮಾಡಿ ತರುತ್ತೀವಿ ಎಂದಿದ್ದಾರೆ. ಅದು ಪ್ರಾಕ್ಟಿಕಲ್ ಆಗಿ ಸಾಧ್ಯಾನಾ ಅನ್ನೋದನ್ನ ನೋಡಬೇಕು” ಎಂದಿದ್ದಾರೆ.

“ಒಂದು ದೇಶ ಒಂದು ಚುನಾವಣೆ ವ್ಯವಸ್ಥೆ ತರೋದ್ರಿಂದ ದೇಶದಲ್ಲಿ ಅಭದ್ರತೆ ಶುರುವಾಗುತ್ತೆ. ಸಾಮಾನ್ಯ ಜನರು ಪ್ರಶ್ನೆ ಮಾಡುವ ಅವಕಾಶ ಕಳೆದುಕೊಳ್ಳುತ್ತಾರೆ. ಚರ್ಚೆ ಮಾಡಿ ಉತ್ತರ ಕಂಡುಕೊಳ್ಳುವ ವ್ಯವಸ್ಥೆಯನ್ನು ಕಳೆದುಕೊಳ್ಳುತ್ತೇವೆ. 2024ರ ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗವು 7 ಹಂತಗಳಲ್ಲಿ ಚುನಾವಣೆ ನಡೆಸಿದೆ. ಹೀಗಿರುವಾಗ, ಇಡೀ ದೇಶದ ಚುನಾವಣೆಯನ್ನು ಏಕಕಾಲದಲ್ಲಿ ನಡೆಸಲು ಚುನಾವಣಾ ಆಯೋಗಕ್ಕೆ ಸಾಧ್ಯವೇ” ಎಂದು ಪ್ರಶ್ನಿಸಿದ್ದಾರೆ.

“ಒಂದು ದೇಶ, ಒಂದು ಧರ್ಮ, ಒಂದು ಆಹಾರ, ಒಂದು ಪಕ್ಷ, ಒಬ್ಬ ನಾಯಕ ಎಂಬ ಧೋರಣೆಯೊಂದಿಗೆ ಒಕ್ಕೂಟ ವ್ಯವಸ್ಥೆಯನ್ನು ಬುಡಮೇಲು ಮಾಡಲು ಬಿಜೆಪಿ ಹವಣಿಸುತ್ತಿದೆ. ಒಂದು ಎಂಬ ವ್ಯವಸ್ಥೆ ಬಂದರೆ, ಬಹುತ್ವಕ್ಕೆ, ಒಕ್ಕೂಟ ವ್ಯವಸ್ಥೆಗೆ ಹಾಳಾಗುತ್ತದೆ. ಆಗ ನಾವು ಬಾಯಿಗೆ ಬೀಗ ಹಾಕಿಕೊಂಡು ಗುಲಾಮರಾಗಿ ಬಾಳಬೇಕಾಗುತ್ತದೆ. ಬಹುತ್ವವನ್ನು ಕಾಪಾಡಿಕೊಳ್ಳಬೇಕು. ನಮ್ಮ ದನಿಯನ್ನು ಉಳಿಸಿಕೊಳ್ಳಬೇಕು” ಎಂದಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪರಿಸರ ಸ್ನೇಹಿ ಗಣೇಶ ಹಬ್ಬಕ್ಕೆ ಮಾರ್ಗಸೂಚಿ ಪ್ರಕಟ, ನಿಯಮ ಉಲ್ಲಂಘಿಸಿದರೆ ಕ್ರಿಮಿನಲ್‌ ಕೇಸ್‌ ದಾಖಲು

ಬೆಂಗಳೂರು ನಗರದಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮಾತ್ರ ಪೂಜಿಸಬೇಕಾಗಿ ಮತ್ತು...

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಮಹಿಳೆ ವಿರುದ್ಧದ ಪೋಕ್ಸೋ ಪ್ರಕರಣ ರದ್ದತಿಗೆ ಹೈಕೋರ್ಟ್‌ ನಕಾರ

ಬೆಂಗಳೂರಿನ ವಿಲ್ಲಾವೊಂದರಲ್ಲಿ ವಾಸವಿದ್ದ 53 ವರ್ಷದ ಮಹಿಳೆ ತನ್ನ ಕಾಮ ತೃಷೆಗಾಗಿ...

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

Download Eedina App Android / iOS

X