ದೇಶವನ್ನ ರಾಜ್ಯ ಮುಕ್ತವಾಗಿ ಮಾಡಬೇಕು ಎಂಬುದು ಬಿಜೆಪಿ ಉದ್ದೇಶ: ಎ ನಾರಾಯಣ

Date:

Advertisements

‘ಒಂದು ದೇಶ – ಒಂದು ಚುನಾವಣೆ’ಯನ್ನ ತರಲು ಹೊರಟಿರುವ ಬಿಜೆಪಿ ಸರ್ಕಾರಕ್ಕೆ ಸಂವಿಧಾನದಲ್ಲಿರುವ ಒಂದು ಅಂಶ ಇಷ್ಟ ಇಲ್ಲ. ಅವರಿಗೆ ಈ ದೇಶದಲ್ಲಿ ರಾಜ್ಯಗಳೇ ಇರಬಾರದು. ಒಂದು ದೇಶ ಅದು ಅಖಂಡ ದೇಶವಾಗಿರಬೇಕು. ಜನರು ತಲೆಬಾಗಿ ಅವರ ಅಧೀನ ಇರಬೇಕು. ಈ ದೇಶವನ್ನ ರಾಜ್ಯ ಮುಕ್ತವಾಗಿ ಮಾಡಬೇಕು ಎಂಬುದಾಗಿದೆ. ಕೇಂದ್ರದಲ್ಲಿ ಆಡಳಿತ ಮಾಡುತ್ತಿದ್ದೇವೆ‌. ರಾಜ್ಯವನ್ನ ನಮಗೆ ಕೊಟ್ಟುಬಿಡಿ ಚೆನ್ನಾಗಿ ನೋಡಿಕೊಳ್ಳುತ್ತೇವೆ ಎಂಬುದು ಅವರ ಬೆದರಿಕೆ ಆಗಿದೆ‌. ಆದರೆ, ನಮ್ಮ ರಾಜ್ಯದ ಜನ ಇದಕ್ಕೆ ಬಗಲಿಲ್ಲ. ಈ ಬಾರಿ ಚುನಾವಣೆಯಲ್ಲಿ ಜನಪರ ಸರ್ಕಾರವನ್ನ ತಂದಿದ್ದಾರೆ” ಎಂದು ಖ್ಯಾತ ಅಂಕಣಕಾರ ಎ, ನಾರಾಯಣ ಹೇಳಿದ್ದಾರೆ.

ಒಂದು ದೇಶ – ಒಂದು ಚುನಾವಣೆ ನಿರಂಕುಶ ಪ್ರಭುತ್ವದತ್ತ ಭಾರತ ರಾಜ್ಯ ಮಟ್ಟದ ವಿಚಾರಣ ಸಂಕಿರಣವನ್ನ ದಲಿತ ಸಂಘರ್ಷ ಸಮಿತಿ ಬುಧವಾರ ಬೆಂಗಳೂರಿನಲ್ಲಿ ಹಮ್ಮಿಕೊಂಡಿತ್ತು. ಈ ವೇಳೆ ವಿಷಯ ಮಂಡನೆ ಮಾಡಿದ ಖ್ಯಾತ ಅಂಕಣಕಾರ ಎ, ನಾರಾಯಣ ಅವರು, “ಒಬ್ಬ ಕನ್ನಡಿಗನಾಗಿ ಈ ದೇಶದ ಸ್ವಾಯತ್ತ ಅಭಿಮಾನಿ‌ ಕನ್ನಡಿಗನಾಗಿ ಈ ವಿಷಯ ಮಂಡನೆ ಮಾಡುತ್ತೇನೆ. ಚುನಾವಣೆಯಲ್ಲಿ ವಿಧಾನಸಭೆಗೆ ಒಮ್ಮೆ, ಲೋಕಸಭೆಗೆ ಇನ್ನೊಮ್ಮೆ ಮಗದೊಮ್ಮೆ ಜಿಲ್ಲಾ ಪಂಚಾಯಿತಿಗೆ ಜನಪ್ರತಿನಿಧಿಗಳನ್ನ ಆಯ್ಕೆ ಮಾಡುತ್ತಿದ್ದೇವು. ಆದರೆ, ಇನ್ನುಮುಂದೆ ಲೋಕಸಭೆ, ವಿಧಾನಸಭೆ ಚುನಾವಣೆಗಳಿಗೆ ಜನಪ್ರತಿನಿಧಿಗಳನ್ನ ಒಮ್ಮೆಲೇ ಆಯ್ಕೆ ಮಾಡುವುದು ಬದಲಾವಣೆ ಆಗಿದೆ. ಸಕ್ಜರೆ ಲೇಪನ ಮಾಡಿ ಈ ಬದಲಾವಣೆ ಬೇಕೆ ಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ. ನಿಜವಾಗಲೂ ಇವರು ಮಾಡೋದಕ್ಕೆ ಹೊರಟ್ಟಿದ್ದೇನು. ಏಕಕಾಲದದಲ್ಲಿ ಚುನಾವಣೆ ನಡೆಸಿ ಜನರಿಗೆ ಒಳ್ಳೆಯದು ಮಾಡಬೇಕು ಎಂಬುದು ಇವರ ಉದ್ದೇಶವಲ್ಲ” ಎಂದಿದ್ದಾರೆ.

“ಸುಪ್ರೀಂಕೋರ್ಟ್ ತನಿಖಾ ಸಂಸ್ಥೆಗಳಿಗೆ ಹೇಳುತ್ತೆ ನೀವು ಪಂಜರದ ಗಿಳಿಯಾಗಬಾರದು ಎಂದೂ. ತನಿಖಾ ಸಂಸ್ಥೆಗಳು ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿವೆ. ಒಂದು‌ ದೇಶ – ಒಂದು ಚುನಾವಣೆ ಲೋಕಸಭಾ ಚುನಾವಣೆ ರಾಜ್ಯ ವಿಧಾನಸಭಾ ಚುನಾವಣೆಗಳು ಏಕಕಾಲಕ್ಕೆ ನಡೆದಾಗ ಕೇಂದ್ರದಲ್ಲಿ ಯಾವ ಪಕ್ಷ ಬರುತ್ತದೋ, ರಾಜ್ಯದಲ್ಲಿಯೂ ಕೂಡ ಅದೇ ಪಕ್ಷ ಬರುವ ಸಾಧ್ಯತೆ‌ ಇದೆ ಎಂದು ಸ್ಟಾಟಿಕ್ಸ್ ಹೇಳಿದಾವೆ. ಆಪರೇಷನ್ ಕಮಲ, ಡಬಲ್ ಎಂಜಿನ್ ಸರ್ಕಾರ ಎಂಬುದನ್ನ ಹೇಳಿದಾಗ ಜನರ ಮುಂದೆ ಇದು ಎನು ನಡೆಯೋದಿಲ್ಲ ಎಂದು ತಿಳಿದಾಗ ಅದನ್ನ ಜನರಿಂದನೇ ಈ ಕೆಲಸ ಮಾಡಬಿಡಬೇಕು ಎಂಬುದು ಅವರ ಉದ್ದೇಶವಾಗಿದೆ‌” ಎಂದು ತಿಳಿಸಿದ್ದಾರೆ.

Advertisements

“ರಾಜ್ಯಕ್ಕೆ ಚುನಾವಣೆ ಆಗುವಾಗ ರಾಜ್ಯದ ವಿಚಾರಗಳು ಮುನ್ನೆಲೆಗೆ ಬರುತ್ತವೆ. ಲೋಕಸಭಾ ಚುನಾವಣೆ ನಡೆಯುವಾಗ ದೇಶದ ವಿಚಾರಗಳು‌ ಮುಂದೆ ಬರುತ್ತವೆ. ಆದರೆ, ಒಂದು ದೇಶ – ಒಂದು ಚುನಾವಣೆಯಂತೆ ಚುನಾವಣೆಗಳು ನಡೆದರೆ ಪ್ರಶ್ನೇ ಮಾಡುವ ಹಕ್ಕನ್ನ ಜನರು ಕಳೆದುಕೊಳ್ಳುತ್ತಾರೆ. ಚುನಾವಣಾ ಸಮಯದಲ್ಲಿ ಪ್ರಶ್ನೆ ಮಾಡುವುದು ನಮ್ಮ ಮೂಲಭೂತ ಹಕ್ಕಾಗಿದೆ. ಭಾರತ ದೇಶ ಒಂದು ಸುಂದರ ಹುದೋಟ. ಈ ಹುದೋಟದಲ್ಲಿರುವ 29 ರಾಜ್ಯಗಳು ಸೇರಿ ದೇಶ ಆಗಬೇಕು ಎಂಬುದು ನಮ್ಮ ಸಂವಿಧಾನ ನಿರ್ಮಾತರ ಕನಸಾಗಿತ್ತು. ಬಹುತ್ವ ಒಡೆಯುವ ಕೆಲಸವೇ ಇದು ಒಂದು ದೇಶ ಒಂದು ಚುನಾವಣೆ, ಇದನ್ನ ನಾವು ಒಪ್ಪಿಕೊಳ್ಳಬಾರದು” ಎಂದಿದ್ದಾರೆ.

“ಈ ಒಂದು ದೇಶ – ಒಂದು ಚುನಾವಣೆ ಅಂದರೆ ನೋಟು ಅಮಾನ್ಯೀಕರಣ, ಇತ್ತೀಚೆಗೆ ಗುಡಿ ಕಟ್ಟಿರುವ ರೀತಿಯ ಯೋಜನೆ. ರಾಜ್ಯಗಳನ್ನ ದುರ್ಬಲಗೊಳಿಸಲು ಈ ಯೋಜನೆಯನ್ನ ತರಲಾಗುತ್ತಿದೆ. ಸಂವಿಧಾನವನ್ನ ಒಪ್ಪಿಕೊಳ್ಳದೇ ಒಂದು ಧರ್ಮಕ್ಕೆ, ಒಂದು ವರ್ಗಕ್ಕಾಗಿ ಒಂದು ದೇಶ – ಒಂದು ಚುನಾವಣೆ ತರಲು ಮುಂದಾಗಿದ್ದಾರೆ. ರಾಜ್ಯ ಮುಕ್ತ ದೇಶವನ್ನಾಗಿ ಮಾಡಬೇಕು. ಈ ದೇಶವನ್ನ ಒಂದು ವರ್ಗಕ್ಕೆ, ಒಂದು ಧರ್ಮಕ್ಕೆ ಸಿಮೀತಗೊಳಿಸಬೇಕು ಎಂಬುದು ಅವರ ಉದ್ದೇಶವಾಗಿದೆ. ಆದರೆ, ಇದಕ್ಕೆ ತೊಡಕಾಗಿರೋದು ರಾಜ್ಯಗಳು ಹಾಗಾಗಿ‌, ರಾಜ್ಯಗಳನ್ನೆ ಮುಚ್ಚಿ ಹಾಕಿ ಒಂದು ದೇಶವನ್ನ ಮುನ್ನೆಲೆಗೆ ತರುವುದು ಇವರ ಉದ್ದೇಶವಾಗಿದೆ. ರಾಜ್ಯಗಳನ್ನ ದುರ್ಬಲಗೊಳಿಸಿ ಅವರ ಬೆಳೆ ಬೇಯಿಸಿಕೊಳ್ಳುವುದು ಅವರ ಉದ್ದೇಶವಾಗಿದೆ” ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ‘ಒಂದು ದೇಶ – ಒಂದು ಚುನಾವಣೆ’ ಒಕ್ಕೂಟ ವ್ಯವಸ್ಥೆಗೆ ಅಪಾಯಕಾರಿ: ಜಸ್ಟಿಸ್ ನಾಗಮೋಹನ್ ದಾಸ್

“ಒಂದು ದೇಶ – ಒಂದು ಚುನಾವಣೆ ಮುನ್ನೆಲೆಗೆ ತರಲು ಅವರು ನೀಡುವ ಕಾರಣಗಳ ಪೈಕಿ ಒಂದು, ದೊಡ್ಡ ಮಟ್ಟದಲ್ಲಿ ಹಣ ಉಳಿತಾಯ ಆಗುತ್ತದೆ ಅನ್ನೋದು ಅವರ ವಾದ. ನಾವು ಎಲ್ಲಿ ಹಣ ಉಳಿಸಬೇಕೋ ಅಲ್ಲಿಯೇ ಹಣ ಉಳಿಸಬೇಕು. ಈ ಸಂವಿಧಾನ ಸಾರ್ಥಕತೆ ಆಗಬೇಕಾದರೆ ಚುನಾವಣೆ ಮಾಡಲೇಬೇಕು. ಅದಕ್ಕೆ ದುಡ್ಡು ಖರ್ಚು ಆಗಬೇಕಾದರೆ ಆಗಲಿ. ಚುನಾವಣೆಯ ಖರ್ಚು ಎಂದು ಹೇಳಬೇಡಿ. ಚುನಾವಣೆಯಲ್ಲಿ ಖರ್ಚಾಗುವ ಹಣವನ್ನ ಉಳಿಸಿ ದೇಶವನ್ನ ನಡೆಸುತ್ತೇವೆ ಎನ್ನುವುದು ಮೂರ್ಖತನ. ಇನ್ನೊಂದು ಅಭಿವೃದ್ಧಿ ಕುಂಠಿತ ಎನ್ನುವುದನ್ನ ಒಪ್ಪಿಕೊಳ್ಳೋಕೆ ಆಗುದಿಲ್ಲ. ಅಭಿವೃದ್ಧಿ ಎಂದರೆ ಏನು? ಬೇರೆ ರಾಜ್ಯಗಳಲ್ಲಿ ಚುನಾವಣೆ ನಡೆದರೇ ನಮ್ನ ರಾಜ್ಯದಲ್ಲಿ ಹೇಗೆ ಅಭಿವೃದ್ಧಿ ಕುಂಠಿತವಾಗುತ್ತದೆ. ಒಂದು ರೀತಿ ನೋಡಿದರೆ ಜನ ಬೇರೆ ಗುಂಗಲ್ಲಿ ಇರೋದಕ್ಕಿಂತ ಚುನಾವಣೆ ಗುಂಗಲ್ಲಿ‌ ಇರುವುದು ಲೇಸು” ಎಂದು ವಿವರಿಸಿದ್ದಾರೆ.

ಕಾಲಕಾಲಕ್ಕೆ ಚುನಾವಣೆ ನಡೆಸುವುದು ಕೂಡ ಅಭಿವೃದ್ಧಿ. ಬದಲಾಗಿ ರಸ್ತೆ ನಿರ್ಮಾಣ ಚರಂಡಿ ನಿರ್ಮಾಣದಲ್ಲಿ ಕಮಿಷನ ಪಡೆಯುವುದು ಅಭಿವೃದ್ದಿಯಲ್ಲ. ಸ್ವಾತಂತ್ರ್ಯಾನಂತರದಲ್ಲಿ ನಡೆದ ಚುನಾವಣೆಗಳು ಹೀಗೆ, ತಾನೆ ಎಂಬುದು ಅವರ ಮತ್ತೊಂದ ವಾದ. ಆಗ ಕಾಂಗ್ರೆಸ್ ಪಕ್ಷ ಒಂದೇ ಇತ್ತು. ಆಗ ತಾನೇ ದೇಶ ಸ್ವತಂತ್ರ್ಯಗೊಂಡಿತ್ತು. ಹಾಗಾಗಿ, ಚುನಾವಣೆ ನಡೆದಿತ್ತು. ಹಾಗಂತ ಇದೇ ಚುನಾವಣಾ ಮಾರ್ಗಗಳನ್ನ ಹಿಂದಿನ ರಾಜಕಾರಣಿಗಳು ಮುಂದುವರೆಸಿಕೊಂಡು ಬಂದಿಲ್ಲ. ಈಗ 47 ರಾಜಕೀಯ ಪಕ್ಷಗಳ ಪೈಕಿ 35 ರಾಜಕೀಯ ಪಕ್ಷಗಳು ಈ ರೀತಿ ಚುನಾವಣೆ ನಡೆಸಲು ತಮ್ಮ ಆಕ್ಷೇಪ ಇಲ್ಲ ಎಂದಿದ್ದಾರೆ. ಕೇವಲ 15 ಪಕ್ಷಗಳು ಮಾತ್ರ ಇದನ್ನ ವಿರೋಧಿಸಿವೆ. ಈ ಹಿಂದೆ ಈ 15 ಪಕ್ಷಗಳು ಕೂಡ ಇದರ ಬಗ್ಗೆ ಪರವಾಗಿ ಮಾತಾಡಿದ್ದವು. ಈಗ ಎಲ್ಲರೂ ಹಣಕ್ಕೆ ಪ್ರಾಮುಖ್ಯತೆ ಕೊಡತಾ ಇದಾರೆ. ದುಡ್ಡಿಗಾಗಿ ಎಂತಹ ಕೆಲಸ ಮಾಡೋದಕ್ಕೂ ಒಪ್ಪಿಗೆ ಸೂಚಿಸುವ ಜನಪ್ರತಿನಿಧಿಗಳನ್ನ ನಾವು ಎಲೆಕ್ಟ್‌ ಮಾಡಿದ್ದೇವೆ. ಸಂವಿಧಾನದ ಮೇಲೆ ನಡೆಸುತ್ತಿರುವ ಪ್ರಹಾರವನ್ನ ವಿರೋಧಿಸಬೇಕಾಗಿದೆ. ಜನಸಮೂಹ ಇದಕ್ಕೆ ಪ್ರತಿರೋಧ ಕೊಡಬೇಕಾಗಿದೆ” ಎಂದು ಹೇಳಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಟ್ರಾಫಿಕ್ ದಂಡಗಳಿಗೆ ಶೇ. 50 ರಿಯಾಯಿತಿ: ಬೆಂಗಳೂರು ಸಂಚಾರ ಪೊಲೀಸರ ಘೋಷಣೆ

ಬೆಂಗಳೂರು ಸಂಚಾರ ಪೊಲೀಸರು (ಬಿಟಿಪಿ) ಗುರುವಾರ ಬಾಕಿ ಇರುವ ಟ್ರಾಫಿಕ್ ದಂಡಗಳ...

ಬೆಂಗಳೂರಿನಲ್ಲಿ ಬೈಕ್‌ ಟ್ಯಾಕ್ಸಿ ಪುನರಾರಂಭ; ಸೀಮಿತ ಆ್ಯಪ್‌ಗಳಲ್ಲಿ ಮಾತ್ರ ಲಭ್ಯ

ಬೆಂಗಳೂರಿನಲ್ಲಿ ಗುರುವಾರದಿಂದ (ಆಗಸ್ಟ್‌ 21) ಮತ್ತೆ ಬೈಕ್‌ ಟ್ಯಾಕ್ಸಿ ಸೇವೆಗಳು ಪುನಾರಂಭವಾಗಿವೆ....

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

Download Eedina App Android / iOS

X