ರಾಜ್ಯ ವಿಧಾನಸಭಾ ಚುನಾವಣೆ ಬುಧವಾರ (ಮೇ 10) ನಡೆಯಲಿದೆ. ಎಲ್ಲ ಪಕ್ಷಗಳು ಬಹಿರಂಗ ಪ್ರಚಾರ ಮುಗಿಸಿವೆ. ಚುನಾವಣಾಧಿಕಾರಿಗಳು ಮತದಾನಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಉದ್ಯೋಗಕ್ಕಾಗಿ ವಲಸೆ ಹೋಗಿರುವ ಮತದಾರರು ತಮ್ಮ ಕ್ಷೇತ್ರದತ್ತ ಮುಖಮಾಡಿದ್ದಾರೆ. ಹಲವು ಯುವಜನರು ಮೊದಲ ಬಾರಿಗೆ ಮತದಾನ ಮಾಡಲು ಕಾತುರದಲ್ಲಿದ್ದಾರೆ.
ಮತದಾರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಹೊಸದಾಗಿ ಅರ್ಜಿ ಹಾಕಿದ್ದವರು. ಎರಡೆರಡು ಕಡೆ ಹೆಸರು ಹೊಂದಿದ್ದವರು. ತಮ್ಮ ಹೆಸರು ಮತದಾರ ಪಟ್ಟಿಯಲ್ಲಿದೆಯೇ ಅಥವಾ ಡಿಲೀಟ್ ಆಗಿದೆಯೇ ಎಂಬ ಗೊಂದಲದಿದ್ದಾರೆ.
ಅಂತಹವರು ಮತದಾರ ಪಟ್ಟಿಯಲ್ಲಿ ತಮ್ಮ ಹೆಸರಿದೆಯೇ ಎಂದು ತಮ್ಮ ಮೊಬೈಲ್‌ನಲ್ಲಿಯೇ ಪರಿಶೀಲಿಸಬಹುದು. ಪರಿಶೀಲಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://electoralsearch.in/. ಬಳಿಕ ಚುನಾವಣಾ ವೆಬ್‌ಸೈಟ್ ತೆರೆದುಕೊಳ್ಳುತ್ತದೆ.
ಅಲ್ಲಿ ಎರಡು ರೀತಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಬಹುದು. ಮೊದಲನೆಯ ವಿಧಾನದಲ್ಲಿ, ನಿಮ್ಮ ವೈಯಕ್ತಿಕ ವಿವರಗಳನ್ನು ಅಂದರೆ – ನಿಮ್ಮ ಹೆಸರು, ನಿಮ್ಮ ತಂದೆ ಅಥವಾ ಗಂಡನ ಹೆಸರು, ವಯಸ್ಸು, ಲಿಂಗ (ಜೆಂಡರ್), ರಾಜ್ಯ, ಜಿಲ್ಲೆ, ವಿಧಾನಸಭಾ ಕ್ಷೇತ್ರವನ್ನು ತುಂಬಬೇಕು. ಬಳಿಕ ಪಕ್ಕದಲ್ಲಿರುವ ಕಾಪ್ಟವನ್ನು ನಮೂದಿಸಿ, ಸೆರ್ಚ್ ಮೇಲೆ ಕ್ಲಿಕ್ ಮಾಡಬೇಕು. ಆಗ, ಮತದಾರ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ತೆರೆದುಕೊಳ್ಳುತ್ತದೆ.

ಮತ್ತೊಂದು ವಿಧಾನದಲ್ಲಿ ಎಪಿಕ್ ಸಂಖ್ಯೆ ಮೂಲಕ ಪರಿಶೀಲಿಸಬಹುದು. ಚುನಾವಣಾ ಪೇಜ್‌ನಲ್ಲಿ ‘ಸೆರ್ಚ್ ಬೈ ಎಪಿಕ್ ನಂಬರ್’ ಎಂಬುದರ ಮೇಲೆ ಕ್ಲಿಕ್ ಮಾಡಿ, ಬಳಿಕ ನಿಮ್ಮ ಮತದಾರ ಗುರುತಿನ ಚೀಟಿಯಲ್ಲಿರುವ ಎಪಿಕ್ ಸಂಖ್ಯೆಯನ್ನು ನಮೂದಿಸಿ, ನಂತರ ರಾಜ್ಯ ಯಾವುದು ಎಂದು ಆಯ್ಕೆ ಮಾಡಿ… ಆ ನಂತರ, ಅಲ್ಲಿ ನೀಡಲಾಗುವ ಕಾಪ್ಟವನ್ನು ನಮೂದಿಸಿ ಸೆರ್ಚ್ ಮೇಲೆ ಕ್ಲಿಕ್ ಮಾಡಿ... ಮತದಾರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂದು ಪರಿಶೀಲಿಸಿ…
