ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ 15 ಜನರಿಗೆ ಹುಚ್ಚು ನಾಯಿ ಕಚ್ಚಿರುವ ಘಟನೆ ನಡೆದಿದೆ.
ಕಳೆದ ಭಾನುವಾರ ಮತ್ತು ಸೋಮವಾರ ಹುಚ್ಚು ನಾಯಿ ಗ್ರಾಮದಲ್ಲಿ ತಿರುಗಾಡಿ ಜನರ ಮೇಲೆ ದಾಳಿ ನಡೆಸಿದ್ದು, ಸುಮಾರು 15ಕ್ಕೂ ಹೆಚ್ಚು ಜನರಿಗೆ ಕಚ್ಚಿಗೆ ಗಾಯಗೊಳಿಸಿದ್ದಲ್ಲದೆ, ನಾಲ್ಕೈದು ನಾಯಿಗಳಿಗೂ ಕಚ್ಚಿದೆ. ಹುಚ್ಚು ನಾಯಿ ಕಚ್ಚಿಸಿಕೊಂಡ ನಾಯಿಗಳನ್ನು ಸಾಯಿಸಲಾಗಿದೆ. ಮತ್ತು ಮುನ್ನೆಚ್ಚರಿಕೆಗಾಗಿ ಗ್ರಾಮ ಪಂಚಾಯತಿಯಿಂದ ಗ್ರಾಮದಲ್ಲಿ ಡಂಗುರ ಸಾರಿಸಿದ್ದಾರೆ.
ಇದನ್ನು ಓದಿದ್ದೀರಾ? ಬೆಳಗಾವಿ | ಕರಾಳ ದಿನಾಚರಣೆಗೆ ಅವಕಾಶವಿಲ್ಲ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್
ರೇಖಾ ಕಮ್ಮಾರ, ಚಂದ್ರಕಲಾ ಹಡಪದ, ಶೋಭಾ ಕಮ್ಮಾರ, ಅಶೋಕ ಬಸವಾ, ಮಂಜುನಾಥ ಕಾಡದ, ಚನ್ನಪ್ಪ ಹಾವೇರಿ, ನೀಲವ್ವ ಹೊನ್ನಳ್ಳಿ, ಈರಪ್ಪ ಪುಟ್ಟಣ್ಣನವರ, ಅಲ್ಲಾಭಕ್ಷೀ ಸೂರಣಗಿ, ಪಲ್ಲವಿ ಎ, ರಾಜೇಸಾಭ ಭಾಂಗೀ ಹುಚ್ಚು ನಾಯಿ ಕಚ್ಚಿಸಿಕೊಂಡು ಗಾಯಗೊಂಡಿದ್ದು, ಕೆಲವರು ಸಂಶಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇನ್ನು ಕೆಲವರು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.