ಚನೈ ನಗರದ ಜಯಲಲಿತಾ ಇಂಡೋರ್ ಸ್ಟೇಡಿಯಂನಲ್ಲಿ ಇತ್ತೀಚೆಗೆ ನಡೆದ 4ನೇ ದಕ್ಷಿಣ ಭಾರತ ಮುಕ್ತ ಕರಾಟೆ ಚಾಂಪಿಯನ್‌ಶಿಪ್ -2024ರಲ್ಲಿ ಸ್ಪರ್ಧಿಸಿದ್ದ ಮಂಡ್ಯದ ಗೋಜುರಿಯೋ ಕರಾಟೆ ಡೊ ಅಕಾಡೆಮಿ ಇಂಡಿಯಾ ಹಾಗೂ ವಿಷ್ಣು ಲಯನ್ಸ್ ಮಾರ್ಷಲ್ ಆರ್ಟ್ಸ್ ಕರಾಟೆ ಶಾಲೆಯ ವಿದ್ಯಾರ್ಥಿಗಳು ಬಹುಮಾನ ಪಡೆದು ಕೀರ್ತಿ ತಂದಿದ್ದಾರೆ.
ವಿವಿಧ ವಯೋಮಿತಿ ಹಾಗೂ ತೂಕದ ವಿಭಾಗಗಳಲ್ಲಿ ಹಲವು ಬಹುಮಾನಗಳನ್ನು ಪಡೆದಿರುವ ಕರಾಟೆ ಪಟುಗಳನ್ನು ಸಂಸ್ಥೆಯ ಮುಖ್ಯಸ್ಥ ಲೋಕೇಶ್ ಮೊದಲಿಯಾರ್ ಅಭಿನಂದಿಸದ್ದಾರೆ.
ಕಟ ಹಾಗೂ ಕುಮುತೇ ವಿಭಾಗದ 10 ವರ್ಷದ ವಿಭಾಗದಲ್ಲಿ ಎಸ್ ಲಕ್ಷಿತ್‌ಗೌಡ ತೃತೀಯ ಸ್ಥಾನ, 11 ವರ್ಷದ ವಿಭಾಗದಲ್ಲಿ ಪೃಥ್ವಿ ಎಂ ಎಸ್ ಕಟ-ದ್ವಿತೀಯ ಹಾಗೂ ಕುಮುತೇ-ತೃತೀಯ ಸ್ಥಾನ ಪಡೆದು ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಆರ್ಯನ್ ಕಟ-ಕುಮುತೇ ವಿಭಾಗದಲ್ಲಿ ತೃತೀಯ ಸ್ಥಾನ, ಮನ್ವಿತ್ ಎಸ್ ಕುಮಾರ್ 13 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಕಟ ಹಾಗೂ ಕುಮತೆಯಲ್ಲೂ ಪ್ರಥಮ ಸ್ಥಾನ, 14 ವರ್ಷದೊಳಗಿನ ಕಲರ್ ಬೆಲ್ಟ್ ವಿಭಾಗದಲ್ಲಿ ರಂಜನ್ ಗೌಡ ಕಟ ಹಾಗೂ ಕುಮುತೇ ಎರಡು ವಿಭಾಗಗಳಲ್ಲೂ ದ್ವಿತೀಯ ಸ್ಥಾನ ಪಡೆದಿದ್ದಾರೆ.
15ವರ್ಷ ಮೇಲ್ಪಟ್ಟ ಬಾಲಕರ ವಿಭಾಗದಲ್ಲಿ ನೂತನ್ ದ್ವಿತೀಯ ಸ್ಥಾನ, 13 ವರ್ಷ ಮೇಲ್ಪಟ್ಟ ಬ್ಲ್ಯಾಕ್ ಬೆಲ್ಟ್ ವಿಭಾಗದಲ್ಲಿ ವಿಷ್ಣು ಮೊದಲಿಯಾರ್ ಕಟ ದ್ವಿತೀಯ ಹಾಗೂ ಕುಮುತೇ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಮಂಡ್ಯ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
“ಈ ಸ್ಪರ್ಧೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳಿಂದ ಸುಮಾರು 450 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪಂದ್ಯಾವಳಿಯಲ್ಲಿ ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ರೀತಿಯ ಪ್ರದರ್ಶನ ನೀಡಿ ಹಲವು ಬಹುಮಾನ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ” ಎಂದು ಕರಾಟೆ ಸಂಸ್ಥೆಯ ಅಧ್ಯಕ್ಷರು ಹಾಗೂ ಮುಖ್ಯ ತರಬೇತುದಾರ ಲೋಕೇಶ್ ಮೊದಲಿಯಾರ್ ತಿಳಿಸಿರುತ್ತಾರೆ.
ಈ ಸುದ್ದಿ ಓದಿದ್ದೀರಾ? ಧಾರವಾಡ | ಅ. 13ಕ್ಕೆ ರಡ್ಡಿ ಬ್ಯಾಂಕ್ ಶತಮಾನೋತ್ಸವ: ಸಿಎಂ ಸೇರಿ ರಾಜ್ಯದ ಶಾಸಕ, ಸಚಿವರ ದಂಡು ಬರಲಿದೆ
ಸ್ಪರ್ಧೆಯ ಕೋಚ್ ಆಗಿ ವಿಷ್ಣು ಹಾಗೂ ಮ್ಯಾನೇಜರಾಗಿ ನೂತನ್ ಎಂ ಆರ್ ಕಾರ್ಯ ನಿರ್ವಹಿಸಿ ತಂಡದ ಯಶಸ್ಸಿಗೆ ಶ್ರಮಿಸಿದ್ದಾರೆ.