- ಕೆಎಸ್‌ಆರ್‌ಟಿಸಿ ಬಸ್‌ಗಳ ಕೊರತೆ ಹಿನ್ನೆಲೆ, ಖಾಸಗಿ ಬಸ್‌ಗಳ ದರ ದುಪ್ಪಟ್ಟು
- ಚುನಾವಣಾ ಕರ್ತವ್ಯಕ್ಕಾಗಿ ಕೆಎಸ್ಆರ್ಟಿಸಿಯ 3,500 ಬಸ್‌ಗಳ ನಿಯೋಜನೆ
ರಾಜ್ಯದಲ್ಲಿ 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದ್ದು, ಮೇ 10ರಂದು ಮತದಾನ ನಡೆಯಲಿದೆ. ಮತದಾನ ಮಾಡಲು ಮತದಾರರು ತಮ್ಮ ಊರಿಗೆ ತೆರಳುತ್ತಿದ್ದಾರೆ. ಖಾಸಗಿ ಬಸ್‌ಗಳ ದರ ದುಪ್ಪಟ್ಟಾದ ಕಾರಣ ಹಲವಾರು ಮಂದಿ ಮೆಜೆಸ್ಟಿಕ್ ಕಡೆ ಮುಖಮಾಡಿದ್ದಾರೆ. ಆದರೆ, ಇಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಕೊರತೆ ಎದುರಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ)ದಲ್ಲಿ ಒಟ್ಟು 8,100 ಬಸ್ಗಳಿದ್ದು, ಈ ಪೈಕಿ ಚುನಾವಣಾ ಕರ್ತವ್ಯಕ್ಕಾಗಿ 3,500 ಬಸ್‌ಗಳನ್ನು ನಿಯೋಜನೆ ಮಾಡಲಾಗಿದೆ. ಉಳಿದ 4,400 ಬಸ್‌ಗಳು ಮಾತ್ರ ಕಾರ್ಯಾಚರಣೆಯಲ್ಲಿವೆ. ಈ ಹಿನ್ನೆಲೆಯಲ್ಲಿ ಸರಿಯಾಗಿ ಬಸ್ ಸಿಗದೆ ಪ್ರಯಾಣಿಕರು ಪರದಾಡುವಂತಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಹೋಟೆಲ್‌ಗಳಲ್ಲಿ ಉಚಿತ ತಿಂಡಿ ವಿತರಣೆ ; ತಡೆಹಿಡಿದ ಬಿಬಿಎಂಪಿ
ಖಾಸಗಿ ಬಸ್‌ಗಳ ಟಿಕೆಟ್ ದರ ಹೆಚ್ಚಳ
ಕೆಎಸ್‌ಆರ್‌ಟಿಸಿ ಬಸ್‌ಗಳ ಕೊರತೆ ಹಿನ್ನೆಲೆ, ಖಾಸಗಿ ಬಸ್‌ಗಳ ದರವೂ ನಿಗದಿತ ಮೊತ್ತಕ್ಕಿಂತ ದುಪ್ಪಟ್ಟಾಗಿದೆ. ಈ ಹಿಂದೆ 900 ರೂಪಾಯಿ ಇದ್ದ ಬಸ್ ಟಿಕೆಟ್ ದರ ಇದೀಗ 2 ಸಾವಿರದಿಂದ 3 ಸಾವಿರದವರೆಗೂ ಏರಿಕೆಯಾಗಿದೆ.
“ಮತದಾನ ಮಾಡಲು ಊರಿಗೆ ತೆರಳೋಣ ಎಂದು ಮೆಜೆಸ್ಟಿಕ್ ಬಳಿ ಬಂದರೆ ಇಲ್ಲಿ ಬಸ್‌ಗಳೇ ಇಲ್ಲ. ಊರಿಗೆ ತೆರಳುವ ಬಸ್‌ಗಳೆಲ್ಲವೂ ತುಂಬಿ ಹೋಗಿವೆ. ನಿಂತುಕೊಳ್ಳಲು ಸಹ ಸ್ಥಳಾವಕಾಶ ಇಲ್ಲ. ಹೀಗೆ ಆದರೆ ನಾವು ಊರಿಗೆ ಹೋಗಿ ಮತ ಹಾಕುವುದು ಹೇಗೆ” ಎಂದು ಪ್ರಯಾಣಿಕರೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ.