ಐಪಿಎಲ್‌ 2023 | ಮುಂಬೈ vs ಆರ್‌ಸಿಬಿ; ಉಭಯ ತಂಡಗಳಿಗೂ ಗೆಲುವು ಅನಿವಾರ್ಯ!

Date:

ಐಪಿಎಲ್‌ 16ನೇ ಆವೃತ್ತಿಯಲ್ಲಿ ಮಂಗಳವಾರ ನಡೆಯುವ ʻಹೈ ವೋಲ್ಟೇಜ್‌ʼ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು , ಆರ್‌ಸಿಬಿ ತಂಡಗಳು ಮುಖಾಮುಖಿಯಾಗಲಿವೆ.

- Advertisement -

ಪ್ಲೇ ಆಫ್‌ ಹಂತದ ಆಸೆಯನ್ನು ಜೀವಂತವಾಗಿರಿಸಬೇಕಾದರೆ ಉಭಯ ತಂಡಗಳಿಗೂ ಇಂದಿನ ಪಂದ್ಯ ಅತ್ಯಂತ ಮಹತ್ವಾದ್ದಾಗಿದೆ. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿಕ್ಷಣ ಮಾರಾಟ ಮಾಡಿದ ಶಾಲೆಗಳೇ ಈಗ ಮಾರಾಟಕ್ಕೆ!

ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಮಾರಾಟಕ್ಕೆ ಸಜ್ಜಾಗಿವೆ. ಕೋವಿಡ್-19 ಆಕ್ರಮಣದ ನಂತರದಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಭಾರೀ ಕುಸಿತ, ಪ್ರತಿಷ್ಠಿತ ಶಾಲೆಗಳ ಜೊತೆಗೆ ಪೈಪೋಟಿ, ಮೂಲಭೂತ ಸೌಕರ್ಯಕ್ಕೆ ತಕ್ಕಂತೆ ಲಾಭದ...

ಬಿಗಿದ ತುಟಿಯ ದೃಶ್ಯಭಾಷೆ: ನಿರ್ಬಂಧಗಳ ನೆರಳಲ್ಲಿ ರೂಪಕಗಳ ಪ್ರತಿರೋಧ

ಸಿನೆಮಾವನ್ನು ನಿಯಂತ್ರಿಸಲು ಅಧಿಕಾರಶಾಹಿ ಸದಾ ಹೊಸ ಕಟ್ಟುಪಾಡುಗಳನ್ನು ಸೃಷ್ಟಿಸುತ್ತಲೇ ಇರುತ್ತದೆ; ಆದರೆ ಕಲೆಗೆ ಇರುವ ಶಕ್ತಿಯೆಂದರೆ, ಅದು ನಿರ್ಬಂಧಗಳ ಗೋಡೆಗಳನ್ನೇ ಹೊಸ ನೋಟದ ಕಿಟಕಿಗಳನ್ನಾಗಿಸಿಕೊಳ್ಳುತ್ತದೆ. ನೇರ ಮಾತನ್ನು ಕಸಿದುಕೊಂಡಷ್ಟೂ ರೂಪಕಗಳ ನಡಿಗೆ ಬಿಗಿಯಾಗುತ್ತದೆ,...

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಪ್ರಸಕ್ತ ಟೂರ್ನಿಯಲ್ಲಿ ಎರಡೂ ತಂಡಗಳು ತಲಾ 10 ಪಂದ್ಯಗಳನ್ನು ಆಡಿದ್ದು, ಅಷ್ಟೇ ಅಂಕಗಳನ್ನು ಹೊಂದಿವೆ. ಆದರೆ ಮುಂಬೈ ತಂಡಕ್ಕಿಂತಲೂ ಆರ್‌ಸಿಬಿ ಉತ್ತಮ ರನ್‌ ರೇಟ್‌ ಹೊಂದಿದೆ. ಅಂಕಪಟ್ಟಿಯಲ್ಲಿ ಸದ್ಯ ಆರ್‌ಸಿಬಿ 6 ಮತ್ತು ಮುಂಬೈ 8ನೇ ಸ್ಥಾನದಲ್ಲಿದೆ.

ಮುಂಬೈನ ವಾಂಖೆಡೆ ಮೈದಾನದಲ್ಲಿ ಮಂಗಳವಾರ ನಡೆಯುವ ಪಂದ್ಯದ ವಿಜೇತರು 12 ಅಂಕಗಳನ್ನು ಹೊಂದುವ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಲಿದ್ದಾರೆ. ಸೋಲು ಕಾಣುವ ತಂಡದ ಪ್ಲೇ ಆಫ್‌ ಹಾದಿ ಕಠಿಣವಾಗಲಿದೆ.

16ನೇ ಆವೃತ್ತಿಯ ತನ್ನ ಮೊದಲ ಪಂದ್ಯದಲ್ಲಿ ಆರ್​ಸಿಬಿ, ಮುಂಬೈ ಇಂಡಿಯನ್ಸ್​ ವಿರುದ್ಧ ಆಡಿತ್ತು. ಮುಂಬೈ ಇಂಡಿಯನ್ಸ್​ ನೀಡಿದ್ದ 171 ರನ್‌ಗಳ ಗುರಿಯನ್ನು ಆರ್​ಸಿಬಿ, 16.2 ಓವರ್​ಗಳಲ್ಲಿ ಚೇಸ್‌ ಮಾಡಿತ್ತು.  

ಆರ್‌ಸಿಬಿ ಪಾಲಿಗೆ ವಿರಾಟ್​ ಕೊಹ್ಲಿ ಮತ್ತು ಫಾಫ್​ ಡು ಪ್ಲೆಸಿಸ್ ಆಧಾರ ಸ್ತಂಭವಾಗಿದ್ದಾರೆ. ಇವರಿಬ್ಬರ ವಿಕೆಟ್‌ ಆರಂಭದಲ್ಲೇ ಪತನವಾದರೆ ಪಂದ್ಯದಲ್ಲಿ ಮುಂಬೈ ಕೈ ಮೇಲಾಗಲಿದೆ.

ರೋಹಿತ್​ ವೈಫಲ್ಯ: ಮುಂಬೈ ಇಂಡಿಯನ್ಸ್​ ಪಾಲಿಗೆ ನಾಯಕ ರೋಹಿತ್​ ಶರ್ಮಾ ಅವರ ಫಾರ್ಮ್‌ ಚಿಂತೆಯನ್ನುಂಟು ಮಾಡಿದೆ.  ಕಳೆದ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಿದ್ದರೂ ಸಹ ಖಾತೆ ತೆರೆಯುವಲ್ಲಿ ವಿಫಲರಾಗಿದ್ದರು.  ಇದರೊಂದಿಗೆ ಐಪಿಎಲ್ ಚರಿತ್ರೆಯಲ್ಲೇ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದ ಬ್ಯಾಟರ್‌  ಎಂಬ ಕುಖ್ಯಾತಿಗೂ ಒಳಗಾದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಪಾನ್ ಅಂಗಳದಲ್ಲಿ ಮಿನುಗಿದ ಭಾರತದ ‘ಚಿನ್ನ’ದ ನಾರಿಯರು: ಕಷ್ಟಗಳನ್ನು ಮೆಟ್ಟಿ ನಿಂತ ಗೆಲುವಿನ ಗಾಥೆ

ಜಪಾನ್‌ನ ಐಚಿ ಪ್ರಾಂತ್ಯದಲ್ಲಿ ನಡೆದ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟ ಭಾರತೀಯ...

ಏಷ್ಯನ್ ಗೇಮ್ಸ್: ಪಾಕ್ ಮಣಿಸಿ ಐತಿಹಾಸಿಕ ಚಿನ್ನದ ಪದಕ ಗೆದ್ದ ಟೀಮ್ ಇಂಡಿಯಾ

ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಪುರುಷರ ಟಿ20 ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ...

ಏಷ್ಯನ್ ಗೇಮ್ಸ್: ಬಿಲ್ಲುಗಾರಿಕೆಯಲ್ಲಿ ಇತಿಹಾಸ ಬರೆದ 17 ವರ್ಷದ ಕುಂಕುಮ್‌ಗೆ ಬಂಗಾರ!

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ನೇ ಸಾಲಿನ ಏಷ್ಯನ್ ಗೇಮ್ಸ್‌ನ 15ನೇ ದಿನ...