ಬೈಕ್‌ಗಳಿಗೆ ಡಿಕ್ಕಿ ಹೊಡೆದ ಲಾರಿ ಚಾಲಕ ಪರಾರಿಯಾಗಲು ಯತ್ನಿಸಿದಾಗ ಆತನ್ನು ಗ್ರಾಮಸ್ಥರು ಸೆರೆಹಿಡಿದು ಥಳಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಹಳ್ಯಾಳ ಗ್ರಾಮದಲ್ಲಿ ಮಹಾರಾಷ್ಟ್ರ ಮೂಲದ ಲಾರಿ ಚಾಲಕ 5 ಬೈಕ್‌ಗಳಿಗೆ ಡಿಕ್ಕಿ ಹೊಡೆದು ಪರಾರಿಯಾಗಲು ಪ್ರಯತ್ನಿಸಿದ್ದ. ಈ ಸಂದರ್ಭದಲ್ಲಿ ಗ್ರಾಮಸ್ಥರು ಲಾರಿ ಚಾಲಕನನ್ನು ಸುಮಾರು 70 ಕಿಮೀ ದೂರ ಬೆನ್ನಟ್ಟಿ ಹೋಗಿ ಸೆರೆಹಿಡಿದು ಥಳಿಸಿದ್ದಾರೆ.
ಹಳ್ಯಾಳ ಗ್ರಾಮದಿಂದ ಘಟನಟ್ಟಿ, ನಂದಗಾಂವ, ಸವದಿ, ಸತ್ತಿ, ರಡ್ಡೆರಟ್ಟಿ, ಗ್ರಾಮದಿಂದ ಸುಮಾರು 70 ಕಿ.ಮೀ ಲಾರಿ ಓಡಿಸಿದ ನಂತರ ನಾಗನೂರು ಪಿ.ಕೆ ಗ್ರಾಮದಲ್ಲಿ ನೂರಾರು ಜನ ಕೂಡಿಕೊಂಡು ಲಾರಿಯನ್ನು ಅಡ್ಡಗಟ್ಟಿದ್ದು, ಲಾರಿ ಚಾಲಕನನ್ನು ಕೆಳಕ್ಕೆಳೆದು ಥಳಿಸಿದ್ದಾರೆ. ಲಾರಿ ಚಾಲಕನ ಹುಚ್ಚಾಟಕ್ಕೆ 5 ಬೈಕ್‌ಗಳು ಜಖಂಗೊಂಡಿದ್ದು, ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಈ ಸುದ್ದಿ ಓದಿದ್ದೀರಾ? ಧಾರವಾಡ | ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ: ಅಪಾಯದಿಂದ ಪಾರು
ಸ್ಥಳಕ್ಕೆ ಅಥಣಿ ಪಿಎಸ್‌ಐ ಗಿರಿಮಲ್ಲಪ್ಪ ಉಪ್ಪಾರ್ ಭೇಟಿ ನೀಡಿ ಲಾರಿ ಹಾಗೂ ಚಾಲಕನನ್ನು ವಶಕ್ಕೆ ಪಡೆದಿದ್ದು, ಗ್ರಾಮಸ್ಥರಿಂದ ಏಟುತಿಂದ ಲಾರಿ ಚಾಲಕನನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.