- ಮಧ್ಯಪ್ರದೇಶದಲ್ಲಿ ಜನವರಿ ಮತ್ತು ಏಪ್ರಿಲ್‌ನಲ್ಲಿ ಎರಡು ಚೀತಾಗಳ ಸಾವು
- 2022ರ ಸೆಪ್ಟೆಂಬರ್, ಈ ವರ್ಷ ಫೆಬ್ರವರಿಯಲ್ಲಿ ಕರೆತಂದಿದ್ದ ಚೀತಾಗಳು
ಪ್ರಧಾನಿ ನರೇಂದ್ರ ಮೋದಿ ಅವರು ಕ್ಯಾಮರಾಗಳಿಗೆ ಪೋಸ್ ಕೊಡುತ್ತಾ ಅಬ್ಬರದ ಪ್ರಚಾರದಲ್ಲಿ ದಕ್ಷಿಣ ಆಫ್ರಿಕಾದಿಂದ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾಗಿದ್ದ ಚೀತಾಗಳು ಒಂದೊಂದಾಗಿ ಸಾವನ್ನಪ್ಪುತ್ತಿರುವುದು ಬಿಜೆಪಿ ಸರ್ಕಾರಕ್ಕೆ ಮುಜುಗರವೆನಿಸಿದೆ. ಇದೀಗ ಹೆಣ್ಣು ಚೀತಾ ದಕ್ಷಾ, ಉದ್ಯಾನವನದೊಳಗೆ ಇತರ ಚೀತಾಗಳೊಂದಿನ ಕಾದಾಟದಲ್ಲಿ ಸಾವನ್ನಪ್ಪಿದೆ. ತಿಂಗಳೊಳಗೆ ಕುನೊದಲ್ಲಿ ಮೂರನೇ ಚೀತಾ ಸಾವನ್ನಪ್ಪಿರುವುದು ಅನೇಕ ಪ್ರಶ್ನೆಗಳಿಗೆ ಕಾರಣವಾಗಿದೆ.
ಮೂಲಗಳ ಪ್ರಕಾರ, ಪುರುಷ ಚೀತಾಗಳಾದ ಪಿಂಡಾ, ವಾಯು, ಅಗ್ನಿ ಎಂಬ ಚೀತಾಗಳೊಂದಿಗೆ ನಡೆದ ಕಾದಾಟದಲ್ಲಿ ದಕ್ಷಿಣ ಆಫ್ರಿಕಾದ ಚೀತಾ ದಕ್ಷಾ ಮೃತಪಟ್ಟಿದೆ. ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದಿಂದ ಕರೆ ತಂದ ನಂತರ ಕುನೊದಲ್ಲಿ ಸಾವನ್ನಪ್ಪಿದ ಮೂರನೇ ಚಿರತೆ ಇದಾಗಿದೆ.
ಕಳೆದ ವರ್ಷದಿಂದ ಇಪ್ಪತ್ತು ಚೀತಾಗಳನ್ನು ರಾಷ್ಟ್ರೀಯ ಉದ್ಯಾನವನಕ್ಕೆ ಕರೆತರಲಾಗಿದ್ದು, ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಎರಡು ಚೀತಾಗಳು ಸಾವನ್ನಪ್ಪಿವೆ.
ಈ ಸುದ್ದಿ ಓದಿದ್ದೀರಾ? ಮಧ್ಯಪ್ರದೇಶ | ಸೇತುವೆಯಿಂದ ಬಸ್ ಉರುಳಿ 15 ಮಂದಿ ಸಾವು, 25 ಜನರಿಗೆ ಗಾಯ
ಇತ್ತೀಚಿಗೆ ಮೃತಪಟ್ಟ ಸಶಾ ಎಂಬ ಹೆಣ್ಣು ಚೀತಾ, ಭಾರತಕ್ಕೆ ಕರೆತರುವ ಮೊದಲು ಮೂತ್ರಪಿಂಡದ ಸೋಂಕಿನಿಂದ ಬಳಲುತ್ತಿತ್ತು. ಜನವರಿ 23 ರಂದು, ಆಯಾಸ ಮತ್ತು ದೌರ್ಬಲ್ಯದ ಲಕ್ಷಣಗಳು ಕಾಣಿಸಿಕೊಂಡ ನಂತರ ಉದ್ಯಾನವನದ ಅಧಿಕಾರಿಗಳು ಚೀತಾವನ್ನು ಚಿಕಿತ್ಸೆಗಾಗಿ ಕ್ವಾರಂಟೈನ್ ಆವರಣಕ್ಕೆ ಸ್ಥಳಾಂತರಿಸಿದ್ದರು.
ಏಪ್ರಿಲ್‌ನಲ್ಲಿ ಎರಡನೇ ಉದಯ್ ಎಂಬ ಹೆಸರಿನ ಚೀತಾ, ರಾಷ್ಟ್ರೀಯ ಉದ್ಯಾನವನದಲ್ಲಿ ಅಸ್ವಸ್ಥಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿತ್ತು.
ಜೂನ್‌ನಲ್ಲಿ ಮುಂಗಾರು ಪ್ರಾರಂಭವಾಗುವ ಮೊದಲು ಐದು ಚಿರತೆಗಳನ್ನು – ಮೂರು ಹೆಣ್ಣು ಮತ್ತು ಎರಡು ಗಂಡುಗಳನ್ನು ಹೊಂದಿಕೊಳ್ಳಲು ಸಾಧ್ಯವಾಗುವಂತೆ ಒಟ್ಟಾಗಿ ಇರಿಸಿದ್ದ ಶಿಬಿರಗಳಿಂದ ಕುನೋ ರಾಷ್ಟ್ರೀಯ ಉದ್ಯಾನವನದ ಮುಕ್ತ-ಶ್ರೇಣಿಯ ಪರಿಸ್ಥಿತಿಗಳಿಗೆ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಪರಿಸರ ಸಚಿವಾಲಯ ಇಂದು ತಿಳಿಸಿದೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದ ವಿಶೇಷ ಆವರಣಕ್ಕೆ ನಮೀಬಿಯಾದಿಂದ ಕರೆತಂದ ಎಂಟು ಚಿರತೆಗಳನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದರು. ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ ಇನ್ನೂ 12 ಚಿರತೆಗಳನ್ನು ಕರೆತಂದು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡಲಾಗಿತ್ತು.