ಕಲಬುರಗಿ | ಜನಪ್ರತಿನಿಧಿ, ಅಧಿಕಾರಿಗಳ ನಿರ್ಲಕ್ಷ್ಯ: ಬೀಳುವಂತಿದೆ ಖಾಜಾಕೋಟನೂರ್ ಗ್ರಾಮದ ಸೇತುವೆ

Date:

Advertisements

ಖಾಜಾಕೋಟನೂರ್ ಗ್ರಾಮದ ಸೇತುವೆ ಬೀಳುವ ಹಂತದಲ್ಲಿದ್ದು, ಎತ್ತರವಾಗಿ ನಿರ್ಮಾಣ ಮಾಡಬೇಕು. ಕೆರೆ ನಿರ್ಮಾಣದಿಂದ ಹಾನಿಗೊಳಗಾದ ಮನೆಗಳ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಬೇಕು ಎಂದು ಗ್ರಾಮಸ್ಥರು ಬೇಡಿಕೆ ಇರಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಖಾಜಾಕೋಟನೂರ್ ಕೆರೆ ನಿರ್ಮಾಣವಾದ ಮೇಲೆ ಹಳೆ ಊರು ಹೊಸ ಊರೆಂದು ಎರಡು ಭಾಗವಾಗಿ ವಿಭಜನೆಯಾದ ಗ್ರಾಮ ಹಳೆ ಊರಿನಲ್ಲಿ ಇಪತ್ತೊಂದು ಮನೆಗಳಿದ್ದವು. ಈಗ ಏಳು ಮನೆಗಳಲ್ಲಿ ಜನರು ವಾಸವಾಗಿದ್ದಾರೆ.

ಖಾಜಾಕೋಟನೂರ್ ಗ್ರಾಮದ ಹಳೆ ಊರಿನಿಂದ ಹೊಸ ಊರಿಗೆ ಸಂಪರ್ಕ ಕಲ್ಪಿಸುವ ರಸ್ತೆಮಧ್ಯೆ ಒಂದು ಹಳೆ ಬ್ರಿಡ್ಜ್(ಸೇತುವೆ) ಇದ್ದು, ಪ್ರತಿನಿತ್ಯ ಹಳೆ ಊರಿನ ಜನರು ದಿನಸಿ ತರಲು, ಬೇರೆಡೆ‌ ಊರುಗಳಿಗೆ, ಅಂಗಡಿಗಳಿಗೆ, ವಿದ್ಯಾರ್ಥಿಗಳು ಶಾಲೆ ಕಾಲೇಜುಗಳಿಗೆ ಹೋಗಲು ಇರುವುದೊಂದೇ ರಸ್ತೆ. ಈ ರಸ್ತೆ ಮೂಲಕವೇ ಹೊಸ ಊರಿನ ಮುಖ್ಯ ರಸ್ತೆಗೆ ತಲುಪಲು ಏಕೈಕ ಮಾರ್ಗವಾಗಿದೆ. ಮಳೆ ಬಂದು ಬ್ರಿಡ್ಜ್ ತುಂಬಿದರೆ, ಇರುವ ಒಂದೇ ಒಂದು ಮಾರ್ಗ ಕೂಡಾ ಬಂದ್‌ ಆಗುತ್ತದೆ. ಕೆಲಮೊಮ್ಮೆ ಹಳೆ ಊರಿನ ವಿದ್ಯುತ್ ಕಂಬದ ಎತ್ತರಕ್ಕೆ ನೀರಿನ ಪ್ರವಾಹ ಬಂದಿದ್ದು, ಈ ಹಿಂದೆ ಊರಿನ ವ್ಯಕ್ತಿಯೊಬ್ಬರು ನೀರಿನಲ್ಲಿ ಕೊಚ್ಚಿ ಹೋಗಿ ಸಾವು ಕೂಡ ಸಂಭವಿಸಿದೆ.

Advertisements
ಮನೆ ಬಿರುಕು

ಸ್ಥಳೀಯ ನಿವಾಸಿ ಕಾಶಿನಾಥ ಈ ದಿನ.ಕಾಮ್‌ನೊಂದಿಗೆ ಮಾತನಾಡಿ “ಎರಡ್ಮೂರು ವರ್ಷಗಳ ಹಿಂದೆ ನಿರಂತರ ಮಳೆ ಸುರಿದು ಬ್ರಿಡ್ಜ್ ಬಿದ್ದು, ರಸ್ತೆ ಸಂಪರ್ಕ ಖಂಡಿತಗೊಂಡು ದೊಡ್ಡ ಸುದ್ದಿಯಾಗಿತ್ತು. ಆ ಸಂದರ್ಭದಲ್ಲಿ ಕಲಬುರಗಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಸವರಾಜ ‌ಮತ್ತಿಮೂಡ್ ಸೇರಿದಂತೆ ಇತರ ರಾಜಕೀಯ ವ್ಯಕ್ತಿಗಳು ಬಂದು ವೀಕ್ಷಿಸಿ ಹೊಗಿದ್ದಾರೆ. ಮಾಧ್ಯಮದವರು ಬಂದಿದ್ದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ. ಮರಳು ಹಾಕಿ ಮುಚ್ಚಿದ್ದಾರೆಯೇ ಹೊರತು ಎತ್ತರವಾಗಿ ಬ್ರಿಡ್ಜ್ ನಿರ್ಮಾಣ ಮಾಡಿಲ್ಲ” ಎಂದು ಗ್ರಾಮಸ್ಥರು ದೂರಿದರು.

“ಸುಮಾರು ಮೂವತೈದು ವರ್ಷಗಳ ಹಿಂದೆ ಕಲಬುರಗಿ ತಾಲೂಕಿನ ಖಾಜಾಕೋಟನೂರ್ ಗ್ರಾಮದ ಹಳೆ ಊರಿನ ಸಮಿಪದಲ್ಲಿ ಕೆರೆ ನಿರ್ಮಾಣ ಮಾಡಲಾಗಿತ್ತು ನಿರ್ಮಾಣದ ವೇಳೆ ಬಂಡೆ ಒಡೆಯಲು ದೊಡ್ಡ ‌ದೊಡ್ಡ ಸಿಡಿಮದ್ದುಗಳನ್ನು ಸಿಡಿಸಿರುವುದರಿಂದ ಭೂಮಿ ಸಡಿಲಗೊಂಡು ಕೆರೆಯ ಸಮಿಪದಲ್ಲಿರುವ ಮನೆಗಳು ಬಿರುಕು ಬಿಟ್ಟಿದ್ದು, ನೀರು ವಸರಿಸುವುದರಿಂದ ಬುನಾದಿ ಸಡಿಲಗೊಂಡು ಬೀಳಲಾರಂಭಿಸಿದವು. ಹಾನಿಗೊಳಗಾದ ಮನೆಗಳ ಸಂತ್ರಸ್ತ ಕುಟುಂಬಗಳಿಗೆ ಸರ್ಕಾರದಿಂದ 144 ಖುಲ್ಲಾ ನಿವೇಶನ ನೀಡಿದೆ. ಅನುಕೂಲ ಇದ್ದವರು ಮನೆ ಕಟ್ಟಿಕೊಂಡು ಅಲ್ಲಿ ವಾಸಿಸವಾಗಿದ್ದಾರೆ, ಅನುಕೂಲ ಇಲ್ಲದವರು ಅದೇ ಬಿರುಕು ಬಿಟ್ಟ ಮನೆಯಲ್ಲಿ ಜೀವ ಕೈಯಲ್ಲಿಡಿದುಕೊಂಡು ಬದುಕು ದೂಡುತ್ತಿದ್ದಾರೆ” ಎಂದರು.

ಮನೆ ಬಿರುಕು 1

“ಅನುಕೂಲಸ್ಥರು ಸರ್ಕಾರ ಕೊಟ್ಟ ಖುಲ್ಲಾ ನಿವೇಶನದಲ್ಲಿ ಮನೆ ಕಟ್ಟಿಕೊಂಡು ವಾಸವಾಗಿರುವ ಜಾಗ ಹೊಸ ಊರೆಂದು ಮಾರ್ಪಾಡಾಗಿದೆ. ಕೆರೆಯಿಂದ ಮನೆ ಕಳೆದುಕೊಂಡ ಸಂತ್ರಸ್ತ ಕುಟುಂಬಸ್ಥರಿಗೆ ಪುನರ್ವಸತಿ ನಿರ್ಮಾಣ ಮಾಡಿಕೊಡುವಂತೆ ಅನೇಕ ಬಾರಿ ಶಾಸಕ ಬಸವರಾಜ ಮತ್ತಿಮುಡ್ ಅವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಶಾಸಕರು ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ” ಎಂದು ಗ್ರಾಮಸ್ಥರು ಆರೋಪಿಸಿದರು.

“ಹಳೆ ಊರಿನಲ್ಲಿ ಸುಮಾರು ಇಪ್ಪತ್ತೊಂದು ಮನೆಗಳಿದ್ದವು. ಅದರಲ್ಲಿ ಈಗ ಏಳು ಕುಟುಂಬಗಳು ವಾಸವಾಗಿದ್ದಾರೆ. ಹಳೆ ಊರು ಹೊಸ ಊರಿನ ಮಧ್ಯೆ ಬ್ರಿಡ್ಜ್ ಇದೆ. ಮಳೆ ಬಂದರೆ ಬ್ರಿಡ್ಜ್ ತುಂಬುತ್ತದೆ. ಆಗ ಯಾರಾದರು ಸತ್ತುಬಿದ್ದರೂ ಆಕಡೆಯವರು ಈಕಡೆ ಬರುವುದಕ್ಕೂ ಆಗುವುದಿಲ್ಲ. ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳಿಗೆ ಹೋಗಲು ತುಂಬಾ ತೊಂದರೆಗಳನ್ನು ಎದುರಿಸುತ್ತಾರೆ. ನಮ್ಮ ಗ್ರಾಮದ ಬ್ರಿಡ್ಜನ್ನು ಎತ್ತರವಾಗಿ‌ ನಿರ್ಮಾಣ ಮಾಡಿಕೊಟ್ಟು, ಪುನರ್ವಸತಿ‌ ನಿರ್ಮಾಣ ಮಾಡಿಕೊಡಬೇಕು” ಎಂದು ಮನವಿ ಮಾಡಿದರು

ಖಾಜಾಕೋಟನೂರ್ ಗ್ರಾಮಸ್ಥೆ ಸುವರ್ಣ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಹಳೆ ಊರು ಮತ್ತು ಹೊಸ ಊರಿಗೆ ಒಂದು ಕಿ.ಮೀ ಅಂತರವಿದೆ. ನಿತ್ಯ ನಾವು ಬ್ರಿಡ್ಜ್ ಇರುವ ರಸ್ತೆ ಮೂಲಕ ಸಂಚಾರ ಮಾಡಬೇಕು. ಇಲ್ಲಿವರೆಗೆ ಬಸ್ ಬರುವುದಿಲ್ಲ. ನಾವು ನಡೆದುಕೊಂಡು ಬರಬೇಕು. ಮಳೆ ಬಂದರೆ‌ ಒಂದು ಕಿ.ಮೀ ನಡೆದುಕೊಂಡು ಶಾಲೆ ಕಾಲೇಜುಗಳಿಗೆ ಹೋಗಲು ಆಗುವುದಿಲ್ಲ. ಇದರಿಂದ ಮಕ್ಕಳ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಬ್ರಿಡ್ಜನ್ನು ಎತ್ತರವಾಗಿ ನಿರ್ಮಾಣ ಮಾಡಿಕೊಡಬೇಕು. ಕೆರೆಯಿಂದಾಗಿ ನಮ್ಮ ಮನೆಗಳು ಬೀಳುವ ಹಂತದಲ್ಲಿವೆ. ನಮಗೆ ಪುನರ್ವಸತಿ ನಿರ್ಮಾಣ ಮಾಡಿಕೊಡಬೇಕು” ಎಂದು ಒತ್ತಾಯಿಸಿದರು. ‌

ಖಾಜಾಕೋಟನೂರ್

ಖಾಜಾಕೋಟನೂರ್ ಗ್ರಾಮದ ಆಶಾ ಕಾರ್ಯಕರ್ತೆ ಪದ್ಮಾವತಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಾನು ಆಶಾ ಕಾರ್ಯಕರ್ತೆಯಾಗಿರುವ ಕಾರಣ ಹಳೆ ಊರಿನ ಗರ್ಭಿಣಿಯರನ್ನು ಹೆರಿಗೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು. ಇತರರು ಕೆಲಸಗಳಿಗಾಗಿ ಆಸ್ಪತ್ರೆಗಳಿಗೆ ಹೋಗುತ್ತಲೇ ಇರುತ್ತೇವೆ. ಇಲ್ಲಿಗೆ ಬಸ್ ಸೌಲಭ್ಯವಿಲ್ಲ, ಹೊಸ ಊರಿನಿಂದ ಒಂದು ಕಿ.ಮೀ ನಡೆದುಕೊಂಡು ಬರಬೇಕು. ಮಳೆ ಬಂದರೆ ಬ್ರಿಡ್ಜ್ ತುಂಬುತ್ತದೆ. ಇದರಿಂದ ಮನೆ ಸೇರಿಕೊಳ್ಳಲು ಆಗುವುದಿಲ್ಲ ಅವರಿವರ ಮನೆಯಲ್ಲಿ ಉಳಿದುಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಆದರಿಂದ ಮೇಲ್ಸೇತುವೆಯನ್ನು ಎತ್ತರಕ್ಕೆ ನಿರ್ಮಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಕೆರೆ ನಿರ್ಮಾಣ ಮಾಡುವಾಗ ದೊಡ್ಡ ದೊಡ್ಡ ಸಿಡಿಮದ್ದು ಸಿಡಿಸಿರುವುದರಿಂದ, ಭೂಮಿ ಸಡಿಲಗೊಂಡು, ಕೆರೆಯ ನೀರಿನಿಂದ ತೇವಗೊಂಡು ಮನೆಯ ಬುನಾದಿ ಸಡಿಲವಾಗಿ ನಮ್ಮ ಮನೆಗಳು ಹಾನಿಗೊಳಗಾಗಿ ಬೀಳುವ ಹಂತದಲ್ಲಿವೆ. ಮನೆ ಕಟ್ಟಿಕೊಳ್ಳಲು ಯಾವುದೇ ಆದಾಯವಿಲ್ಲ. ಹಾಗಾಗಿ ಪುನರ್ವಸತಿ ನಿರ್ಮಾಣ ಮಾಡಿಕೊಡಬೇಕು” ಎಂದು ಮನವಿ ಮಾಡಿದರು.

ಗ್ರಾಮಸ್ಥೆ ಜಯಶ್ರೀ ಮಾತನಾಡಿ, “ಬ್ರಿಡ್ಜ್ ಬೀಳುವ ಹಂತದಲ್ಲಿರುವುದರಿಂದ ನಮ್ಮ ಮಕ್ಕಳ ಶಾಲೆ ವ್ಯಾನ್‌ಗಳು ಗ್ರಾಮಕ್ಕೆ ಬರಲು ಹಿಂದೇಟು ಹಾಕುತ್ತಿವೆ. ಇದರಿಂದ ಮಕ್ಕಳು ಶಾಲೆಗೆ ಹೋಗಲು ನಿರಾಕರಿಸುತ್ತಿದ್ದಾರೆ. ಹೀಗಾದರೆ ನಮ್ಮ ಮಕ್ಕಳ ಭವಿಷ್ಯದ ಗತಿ ಏನು?. ಮಳೆ ಬಂದರೆ ತುಂಬಾ ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ನಮಗೆ ಬ್ರಿಡ್ಜ್ ನಿರ್ಮಾಣ ಮಾಡಿಕೊಡಬೇಕು” ಎಂದು ಅಲವತ್ತುಕೊಂಡರು.

ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಭಾರೀ ಮಳೆಗೆ ಅಪಾರ ಆಸ್ತಿಪಾಸ್ತಿ, ಬೆಳೆಹಾನಿ; ಕಂಗಾಲಾದ ರೈತರು

ಗ್ರಾಮಸ್ಥ ಶಿವಕುಮಾರ ಪಾಟೀಲ್ ಮಾತನಾಡಿ, “ಗ್ರಾಮದ ಜನರು ಆಸ್ಪತ್ರೆಗೆ ಸೇರಿದಂತೆ ಇನ್ನಿತರ ಕಡೆಗೆ ಹೋಗಲು ಇರುವುದೊಂದೇ ರಸ್ತೆ. ಹಳೆ ಊರು ಹೊಸ ಊರಿನ ಮಧ್ಯೆ ಬ್ರಿಡ್ಜ್ ಇದೆ. ಅದು ಬೀಳುವ ಹಂತದಲ್ಲಿದೆ. ಜತೆಗೆ ಮಳೆ ಬಂದರೆ ಬ್ರಿಡ್ಜ್ ತುಂಬಿ ರಸ್ತೆ ಸಂಪರ್ಕ ಕಡಿತಗೊಳ್ಳುತ್ತದೆ. ಅದರಿಂದ ಎತ್ತರಕ್ಕೆ ಮೇಲ್ಸೇತುವೆ ನಿರ್ಮಾಣ ಮಾಡಬೇಕು. ನಮಗೆ ಪುನರ್ವಸತಿ ನಿರ್ಮಾಣ ಮಾಡಿಕೊಡಬೇಕು” ಎಂದು ಆಗ್ರಹಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಅಂಬರೀಶ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಸುಮಾರು 25ರಿಂದ 30 ವರ್ಷಗಳ ಹಳೆಯ ಬ್ರಿಡ್ಜ್ ಇದು. ಮಳೆಗಾಲದಲ್ಲಿ ತುಂಬಾ ತೊಂದರೆಯಾಗುತ್ತದೆ. ಈ ಹಿಂದೆ ಗ್ರಾಮಸ್ಥನೊಬ್ಬ ನದಿಯಲ್ಲಿ ಕೊಚ್ಚಿಹೊಗಿದ್ದಾನೆ. ಶಾಲೆ ಕಾಲೇಜು ಬಸ್‌ಗಳು ಈ ಬ್ರಿಡ್ಜ್ ಮೇಲೆ ಬರಲು ಸಾಧ್ಯವಾಗುವುದಿಲ್ಲ. ರಾಯಚೂರು, ಮಾನ್ವಿ ತಾಲೂಕಿನ ಶಾಲೆ ಮಕ್ಕಳಿಗೆ ಸಂಭವಿಸಿದ ದುರಂತ ಇಲ್ಲಿಯೂ ಸಂಭವಿಸಿಬಹುದು” ಎಂದು ಕಳವಳ ವ್ಯಕ್ತಪಡಿಸಿದರು.

“ಈಗ ಮಳೆಗಾಲವಿರುವುದರಿಂದ ಅನಾಹುತಗಳಾಗುವ ಮುನ್ನ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಆದಷ್ಟು ಬೇಗಾ ಎತ್ತರವಾದ ಹೊಸ ಬ್ರಿಡ್ಜ್ ನಿರ್ಮಾಣ ಮಾಡಿ, ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು” ಎಂದು ಶಾಸಕರಲ್ಲಿ ಮನವಿ ಮಾಡಿದರು.

ಗೀತಾ ಹೊಸಮನಿ
ಗೀತಾ ಹೊಸಮನಿ
+ posts

ಯಾದಗಿರಿ, ಕಲಬುರಗಿ ಜಿಲ್ಲಾ ಸಂಯೋಜಕರು, NCCಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ(NRAI ಫೈರಿಂಗ್ ವಿಭಾಗ) ವಿಜೇತೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಗೀತಾ ಹೊಸಮನಿ
ಗೀತಾ ಹೊಸಮನಿ
ಯಾದಗಿರಿ, ಕಲಬುರಗಿ ಜಿಲ್ಲಾ ಸಂಯೋಜಕರು, NCCಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ(NRAI ಫೈರಿಂಗ್ ವಿಭಾಗ) ವಿಜೇತೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X