ನಾಗಾವಿ ಗ್ರಾಮದ ಹಿರೇಕೇರಿ ಹಾಗೂ ಭೂಕೈಯ್ಯನ ಕೆರೆ ಅಭಿವೃದ್ಧಿಗೆ ₹75 ಲಕ್ಷ ಅನುದಾನದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಚ್ ಕೆ ಪಾಟೀಲ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು
ಗದಗ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿ ಮಾತನಾಡಿದರು.
“ಮುಳಗುಂದದಲ್ಲಿನ ಅಬ್ಬಿಗೆರೆ ಕೆರೆ ಕಾಮಗಾರಿಗೆ ₹200 ಲಕ್ಷಗಳ ಅನುದಾನ ಒದಗಿಸಲಾಗಿದೆ. ಉತ್ತಮ ಕಾಮಗಾರಿ ಕೈಗೊಳ್ಳಬೇಕು. ಕೆರೆ ಕಾಮಗಾರಿಯಿಂದ ನಗರದಲ್ಲಿನ ಕೆರೆ ಸುತ್ತಲಿನ ಪ್ರದೇಶ ಸುಂದರಮಯವಾಗಿ ಕಂಗೊಳಿಸುವಂತಾಗಬೇಕು. ಒಂದು ತರದಲ್ಲಿ ಪ್ರವಾಸಿ ತಾಣದಂತೆ ಕಾಣಬೇಕು” ಎಂದು ಹೇಳಿದರು.
“ಕುರ್ತಕೋಟೆಯಲ್ಲಿ ₹65 ಲಕ್ಷ ಅನುದಾನದಲ್ಲಿ ಕೆರೆಯ ಅಭಿವೃದ್ಧಿಗೆ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ನಿಗದಿಪಡಿಸಿದ ಅವಧಿಯೊಳಗೆ ಸಾರ್ವಜನಿಕರ ಬಳಕೆಗೆ ಲಭ್ಯವಾಗುವಂತೆ ಕಾರ್ಯ ನಿರ್ವಹಿಸಬೇಕು” ಎಂದು ತಿಳಿಸಿದರು.
“ಅಂತೂರ-ಬೆಂತೂರು ಗ್ರಾಮದಲ್ಲಿರುವ ಕೆರೆಯು ಸುಂದರ ತಾಣದಲ್ಲಿದೆ. ಇದನ್ನು ಇನ್ನಷ್ಟು ಸುಂದರಗೊಳಿಸಲು ₹100 ಲಕ್ಷ ಅನುದಾನ ನೀಡುವ ಮೂಲಕ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಚಾಲನೆ ನೀಡಲಾಗಿದೆ. ಕಾಮಗಾರಿಯು ಮುಂಬರುವ ಸಂಕ್ರಮಣದೊಳಗಾಗಿ ಪೂರ್ಣಗೊಳಿಸಬೇಕು” ಎಂದು ಹಾಜರಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಗದಗ-ಹಾವೇರಿ ಸೇರಿದಂತೆ 8 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ; ಹವಾಮಾನ ಇಲಾಖೆ ಮುನ್ಸೂಚನೆ
ಗದಗ-ಬೆಟಗೇರೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಜಿ, ಲಕ್ಕುಂಡಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸಲಹಾ ಸಮಿತಿ ಸದಸ್ಯ ಸಿದ್ದು ಪಾಟೀಲ ಸೇರಿದಂತೆ ನಾಗಾವಿ, ಮುಳುಗುಂದ, ಕುರ್ತಕೋಟಿ, ಅಂತೂರ್ ಬೆಂತೂರ್ ಗ್ರಾಮದ ಜನಪ್ರತಿನಿಧಿಗಳು, ಗಣ್ಯರು, ಸಾರ್ವಜನಿಕರು ಇದ್ದರು.

ಗದಗ ಹತ್ತಿರ ಕಪ್ಪತಗುಡ್ಡ ಪ್ರದೇಶದಲ್ಲಿ ಬೃಹತ್ ಕೆರೆ ನಿರ್ಮಾಣ ಮಾಡಿ ಕುಡಿಯುವು ನೀರಿಗೆ ಕೈಗಾರಿಕಾ ಕೃಷಿ ಮತ್ತು ಪರಿಸರ ಸಂರಕ್ಷಣೆಗೆ ಅತಿ ಅವಶ್ಯಕ ಆಗಿದೆ..