ಸಕ್ಕರೆ ಕಾರ್ಖಾನೆಗಳಿಗೆ ರೈತರು ಕಬ್ಬು ಪೂರೈಸುವಾಗ ತೂಕದಲ್ಲಿ ಮೋಸವಾಗುತ್ತದೆಂಬ ಆರೋಪ ಮಾಡುವ ಮುನ್ನ ದೂರು ನೀಡಿದರೆ ಕೂಡಲೇ ತೂಕದ ಯಂತ್ರ ತರಿಸಿ ಅಳವಡಿಸಿಕೊಳ್ಳಲಾಗುವುದು ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಈಗಾಗಲೇ 15ಕ್ಕೂ ಹೆಚ್ಚು ತೂಕದ ಯಂತ್ರಗಳನ್ನು ತರಿಸಿ ಇಡಲಾಗಿದೆ. ರೈತರು ದೂರು ಕೊಡಲು ಮುಂದೆ ಬರುತ್ತಿಲ್ಲವೆಂದು ವಿಷಾದ ವ್ಯಕ್ತಪಡಿಸಿದ್ದು, ಖಾಸಗಿ ಸಕ್ಕರೆ ಕಾರ್ಖಾನೆಗಳ ಪೈಪೋಟಿ ಮಧ್ಯೆಯೂ ಸಹಕಾರಿ ಸಂಘದ ಸಕ್ಕರೆ ಕಾರ್ಖಾನೆಯೂ ಎಲ್ಲವನ್ನು ಸರಿಪಡಿಸಿಕೊಂಡು ಕಬ್ಬಿನ ಹಂಗಾಮ ಮುಂದುವರಿಸಬೇಕಾಗಿದೆ” ಎಂದರು.
“ಉತ್ತರ ಕರ್ನಾಟಕದಿಂದಲೇ ಅತಿ ಹೆಚ್ಚು ಕಬ್ಬು ನುರಿಸಲಾಗುತ್ತಿದೆ. ಒಂದೇ ಜಿಲ್ಲೆ ಒಂದು ತಾಲೂಕಿನ ಸಕ್ಕರೆ ಕಾರ್ಖಾನೆಗಳಿದ್ದರೂ ರಿಕವರಿ ಮಾತ್ರ ಬೇರೆ ಬೇರೆಯಾಗುತ್ತದೆ. ಭೂಮಿ, ನೀರು ಒಂದೇ ಇದ್ದಾಗ ರಿಕವರಿ ಬೇರೆ ಯಾಕೆಂಬ ಜಿಜ್ಞಾಸೆ ಎದುರಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ನೆರೆ ಹಾವಳಿಗೆ ನಾಶವಾದ ಮನೆಗಳು; ನೈಜ ಫಲಾನುಭವಿಗಳಿಗಿಲ್ಲ ಆಶ್ರಯ
“ಕಬ್ಬು ಪೂರೈಸಿದ ರೈತರ ಕಬ್ಬಿನ ಬೆಳೆಗೆ 9, 10, 11 ರಿಕವರಿ ಬಂದಾಗ ಗೊಂದಲಕ್ಕೆ ಈಡಾಗುತ್ತಿದ್ದಾನೆ. ಇದನ್ನು ಕಾರ್ಖಾನೆಗಳು ಅರ್ಥಮಾಡಿಕೊಳ್ಳಬೇಕಾಗಿದೆ. ಜಗತ್ತಿನಲ್ಲಿಯೇ ಅತಿ ಹೆಚ್ಚು ಕಬ್ಬು ನೀಡುತ್ತಿರುವುದರಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಭಾರತ ದೇಶದಲ್ಲಿಯೇ ಉತ್ತರ ಕರ್ನಾಟಕದ ಸರ್ಕಾರ ಕಾರ್ಖಾನೆಗಳು ಸಕ್ಕರೆ ಧಾರಣೆ ನೀಡುತ್ತವೆ. ರೈತರು, ಕಾರ್ಮಿಕರ ಸಹಕಾರ ಬೇಕು. ಮಾಲೀಕರಲ್ಲಿ ಹೃದಯ ವೈಶಾಲ್ಯತೆ ಇದ್ದಾಗಲೇ ಬೆಲೆ ಸಿಗಲು ಸಾಧ್ಯವಿದೆ” ಎಂದರು.
“ಸಹಕಾರ ರಂಗದಲ್ಲಿ ಕೆಲವರು ನಿರ್ದೇಶಕರಾಗಿ ಸ್ವಂತ ಸಕ್ಕರೆ ಕಾರ್ಖಾನೆ ಆರಂಭಿಸಿರುವ ದಾಖಲೆಗಳಿವೆ. ಅವಳಿ ಜಿಲ್ಲೆಯಲ್ಲಿ 1997ರಿಂದ ಡಿಸಿಸಿ ಬ್ಯಾಂಕ್‌ನಿಂದ ರಾಜ್ಯದ 27 ಸಕ್ಕರೆ ಕಾರ್ಖಾನೆಗಳಿಗೆ ಸಾಲ ಕೊಟ್ಟಿದ್ದೇವೆ. ಸಹಕಾರ ರಂಗದ ಮೂಲಕ ಸಕ್ಕರೆ ಕಾರ್ಖಾನೆಗಳಿಗೆ ಶಕ್ತಿ ಬಂದಂತಾಗಿದೆ” ಎಂದು ಸಚಿವರು ವಿವರಿಸಿದರು.