ಧಾರವಾಡ | ನೆರೆ ಹಾವಳಿಗೆ ನಾಶವಾದ ಮನೆಗಳು; ನೈಜ ಫಲಾನುಭವಿಗಳಿಗಿಲ್ಲ ಆಶ್ರಯ

Date:

ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕು ಬಸಾಪುರ ಗ್ರಾಮದಲ್ಲಿ ಹಲವು ವರ್ಷಗಳಿಂದ ಹಳ್ಳದ ಪಕ್ಕದಲ್ಲಿ ವಾಸಿಸುತ್ತಿದ್ದ ಪರಿಶಿಷ್ಟ ಸಮುದಾಯಗಳು, ಕಳೆದ ಹದಿನೈದು ವರ್ಷಗಳ ಹಿಂದೆ ಹರಿದು ಬಂದಿದ್ದ ಹಳ್ಳಕ್ಕೆ ಮನೆಗಳೆಲ್ಲಾ ನಾಶವಾಗಿದ್ದವು. ಪ್ರಸ್ತುತ ಹೊಸ ಊರಿನಲ್ಲಿ ಆಶ್ರಯ ನಿವಾಸ ದೊರಕದ ಕಾರಣ ತಮಗೆ ಬರಬೇಕಿದ್ದ ಖುಲ್ಲಾ ಜಾಗಗಳಿಗಾಗಿ ಪರದಾಡುತ್ತಿದ್ದಾರೆ.

- Advertisement -

ಕಳೆದ 15ವರ್ಷಗಳ ಹಿಂದೆ ಹಳ್ಳ ತುಂಬಿ ನೆರೆ ಪ್ರವಾಹಕ್ಕೆ ಇಲ್ಲಿನ ನಿವಾಸಿಗಳೆಲ್ಲ ತತ್ತರಿಸಿದ್ದರು. ಇದರಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತ, ಹಿಂದುಳಿದವರೂ ಒಳಗೊಂಡಿದ್ದಾರೆ. ಆ ಸಮಯದಲ್ಲಿ ದೇಸಾಯಿ ಮನೆತನದವರು ನಿರಾಶ್ರಿತರಿಗಾಗಿ ಉಚಿತ ಜಾಗವನ್ನು ಅನುಕೂಲ ಮಾಡಿಕೊಟ್ಟಿದ್ದಾರೆ. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ನಿರಾಶ್ರಿತರಿಗೆ ಬೆಂಬಲವಾಗಿ ನಿಲ್ಲಾತ್ತಾರೆ. ದುರಂತವೇನೆಂದರೆ ಮೂಲದಲ್ಲಿ ವಾಸಿಸುತ್ತಿದ್ದವರಿಗೆ ನ್ಯಾಯವಾಗಿ ದೊರೆಯಬೇಕಿದ್ದ ಆಶ್ರಯ ಮನೆಗಳೇ ದೊರೆಯಲಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಸರ್ಕಾರ ಗೆದ್ದದ್ದೇ ಅಥವಾ ಕದ್ದದ್ದೇ? ಸಿಇಸಿ ವಿವಾದ...

2024ರ ಲೋಕಸಭಾ ಚುನಾವಣೆಯ ಮತದಾನ ಅಂಕಿಅಂಶಗಳಲ್ಲಿ ಕಂಡುಬಂದ 4.65 ಕೋಟಿ ಮತಗಳ ವ್ಯತ್ಯಾಸ ಮತ್ತು 79 ಕ್ಷೇತ್ರಗಳ ಫಲಿತಾಂಶಗಳ ಕುರಿತು VFD ವರದಿ ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು. ಇದೇ ವೇಳೆ ಚುನಾವಣಾ ಆಯೋಗದ...

ಮೈತ್ರಿ ಮತ್ತು ಸ್ವೀಕೃತಿಗೆ ಹೆಣ್ತನ ಮುಖ್ಯ ಎನ್ನುವ ‘ಡೋರೊಥಿ’

ಲಿಂಗತ್ವ ಅಲ್ಪಸಂಖ್ಯಾತ ಭಾವನೆಗಳನ್ನು 'ಅಸ್ಪೃಶ್ಯತೆ'ಗೆ ಸಮನಾಗಿ ಈ ಗಂಡಾಳ್ವಿಕೆ ನೋಡುತ್ತದೆ; 'ಲಿಂಗ ಸಂಕರ' ಸ್ಥಿತಿಯನ್ನು, ಜಾತಿ ಸಂಕರದಷ್ಟೇ 'ಮರ್ಯಾದಾಗೇಡು' ಎಂಬಂತೆ ಭಾವಿಸುತ್ತದೆ. ಹೀಗೆ ನೋಡುವ 'ಸನಾತನ' (ಜಡ್ಡುಗಟ್ಟಿದ ಗಂಡು ಮನಸ್ಥಿತಿ ಅಥವಾ ಮುದಿಯಾದ...

ಐತಿಹಾಸಿಕ ರೈತ ಹೋರಾಟಕ್ಕೆ ಸಾಕ್ಷಿಯಾದ ಹುಬ್ಬಳ್ಳಿ! ಆಕ್ರೋಶದ ನಡುವೆಯೂ...

ಡಾ. ಸ್ವಾಮಿನಾಥನ್ ಆಯೋಗ ವರದಿ ಜಾರಿಗೊಳಿಸುವ ಮೂಲಕ ಪ್ರತಿ ಟನ್ ಕಬ್ಬಿಗೆ ಕನಿಷ್ಠ ರೂ.5,500 ಬೆಂಬಲ ಬೆಲೆ ನಿಗದಿಪಡಿಸಲು ಮತ್ತು ಸಕ್ಕರೆಯ ಕನಿಷ್ಠ ಬೆಂಬಲ ಬೆಲೆಯನ್ನು ರೂ.31ರಿಂದ 60ಕ್ಕೆ ಏರಿಕೆ ಮಾಡಿ ವಾಣಿಜ್ಯ...

“ಗ್ರಾಮದ ದೊಡ್ಡ ದೊಡ್ಡ ಕೈಗಳು ಅಧಿಕಾರಿಗಳೊಂದಿಗೆ ಇದ್ದ ನೇರ ಸಂಪರ್ಕದ ಪರಿಣಾಮ ಮೂಲದಲ್ಲಿ ವಾಸವಿಲ್ಲದೆ, ಈ ಗ್ರಾಮದವರೂ ಅಲ್ಲದೆ, ನೆರೆ ಪ್ರವಾಹಕ್ಕೂ ಸಿಲುಕದೆ ಇರುವ ಕೆಲವರಿಗೆ ಆಶ್ರಯ ಮನೆಗಳು ದೊರೆತವು. ಆದರೆ ಮೂಲದಲ್ಲಿ ಪ್ರವಾಹಕ್ಕೆ ಒಳಗಾದ ಇನ್ನೂ ಕೆಲವರಿಗೆ ಜಾಗಗಳೇ ಸಿಕ್ಕಿಲ್ಲ” ಎಂದು ಆಶ್ರಯ ವಂಚಿತರು ಈ ದಿನ.ಕಾಮ್‌ನೊಂದಿಗೆ ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ.

“ಜಾಗಕ್ಕಾಗಿ ಹಲವು ಬಾರಿ ಸಂಬಂಧಪಟ್ಟ ಅಣ್ಣಿಗೇರಿ ತಾಲೂಕು ದಂಡಾಧಿಕಾರಿಗಳಿಗೆ, ಹಿಂದಿನ ಜಿಲ್ಲಾಧಿಕಾರಿಗಳಿಗೆ ಕಳೆದ ನಾಲ್ಕೈದು ವರ್ಷಗಳಿಂದ ಮನವಿ ಸಲ್ಲಿಸುತ್ತ ಬಂದಿದ್ದರೂ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ತಾಲೂಕು ದಂಡಾಧಿಕಾರಿಗಳು ಊರಿನ ಕೆಲವು ದೊಡ್ಡ ದೊಡ್ಡವರ ಕಡೆಯಿಂದ ಹಣ ಪಡೆದು ದುಡ್ಡು ಕೊಟ್ಟವರಿಗೆ ಜಾಗಗಳನ್ನು ಮಂಜೂರು ಮಾಡಿದ್ದಾರೆ. ನಮ್ಮ ಜಾಗಕ್ಕಾಗಿ ನಾವು ನ್ಯಾಯವನ್ನು ಕೇಳಲು ಮುಂದಾದರೆ ಕೆಲವರ ಮೇಲೆ ದೈಹಿಕ ದೌರ್ಜನ್ಯ, ಹಲ್ಲೆಗಳೂ ನಡೆದಿವೆ. ಇದೇ ಚಿಂತೆಯಲ್ಲಿ ಒಬ್ಬರು ಜೀವವನ್ನೂ ಕಳೆದುಕೊಂಡಿದ್ದೂ ಉಂಟು” ಎಂದು ಸ್ಥಳೀಯ ಸಂತ್ರಸ್ತರೊಬ್ಬರು ಅವಲತ್ತುಕೊಂಡರು.

“15 ವರ್ಷದ ಹಿಂದೆ ಡೇಂಜರ್ ಜೋನ್‌ನಲ್ಲಿದ್ದ ನಾವು ಕಳೆದ ನಾಲ್ಕು ವರ್ಷಗಳಿಂದ ನಮ್ಮ ಮನೆಗಳಿಗಾಗಿ ಎಲ್ಲ ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದೇವೆ. ಆದರೂ ಯಾರೂ ಸಹಿತ ನಮ್ಮ ಕಡೆಗೆ ತಿರುಗಿಯೂ ನೋಡುತ್ತಿಲ್ಲ. ಹಣದ ಆಸೆಗಾಗಿ ದುಡ್ಡಿದ್ದವರಿಗೆ ಹೊಸ ಊರಿನಲ್ಲಿ ಜಾಗಗಳನ್ನು ಕೊಟ್ಟು ಗ್ರಾಮದ ಕೆಲವರೊಂದಿಗೆ ಅಧಿಕಾರಿಗಳು ಕೈಜೋಡಿಸಿದ್ದಾರೆ. ಆದ್ದರಿಂದ ನಮಗೆ ನ್ಯಾಯ ಸಿಗುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

“ಶತಮಾನಗಳಿಂದಲೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಮೇಲೆ ದೌರ್ಜನ್ಯಗಳಾಗಿವೆ. ಈಗಲೂ ಅದೇ ನಡೆಯುತ್ತಿದೆ. ಮೂಲದಲ್ಲಿ ಹಳ್ಳದ ಪಕ್ಕ ವಾಸವಿದ್ದವರು ಬಹುತೇಕರು ಪರಿಶಿಷ್ಟ ಜನಾಂಗದವರೇ. 15 ಮನೆ ಪರಿಶಿಷ್ಟ ಜಾತಿ/ಪಂಗಡದಲ್ಲಿ ಕೇವಲ ಇಬ್ಬರಿಗೆ ಮಾತ್ರ ನೆರೆಹಾವಳಿಯ ಪರಿಹಾರವಾಗಿ ಮನೆಗಳು ದೊರೆತಿವೆ. ಈ ಸಮಸ್ಯೆಯ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದೆ. ಅವರು ಬಂದು ನೋಡಿ, ಸಾರಾಸಗಟವಾಗಿ ಪರಿಶೀಲಿಸಿ, ನ್ಯಾಯ ಅನ್ಯಾಯಗಳ ತೀರ್ಮಾನಿಸಿ, ಕಾರ್ಯೊನ್ಮುಖಗೊಳಿಸಬಹುದು” ಎಂದು ಯುವ ಹೋರಾಟಗಾರ ಸಂಜು ಪೂಜಾರಿ ಹೇಳುತ್ತಾರೆ.

“ಇನ್ನು ಗ್ರಾಮವು ಅನೇಕ ಮೂಲಭೂತ ಸಮಸ್ಯೆಗಳ ತಾಣವಾಗಿದ್ದು, ಗ್ರಾಮದಲ್ಲಿ ಒಳಚರಂಡಿ, ರಸ್ತೆ, ಮುಖ್ಯವಾಗಿ ಕುಡಿಯುವ ನೀರಿನ ಸಮಸ್ಯೆ ಇದೆ. ಪರಿಶಿಷ್ಟರು ನೀರು ತುಂಬಿಕೊಳ್ಳಲು ಪಕ್ಕದ ಉತ್ತಮರೆನಿಸಿಕೊಂಡವರ ಓಣಿಗೆ ಹೋದರೆ ಜಾತಿ ನಿಂದನೆ ಮಾಡುತ್ತಾರೆ. ʼಹೊಲೆಯರು ಬಂದು ಬಿಡುತ್ತಾರೆ, ಇನ್ನು ನಮ್ಮ ಪೂಜೆ ಪುನಸ್ಕಾರಗಳು ಸುಸೂತ್ರವಾಗಿ ನೆರವೇರುವುದಿಲ್ಲʼವೆಂದು ನಿಂದಿಸಿದ ಅದೆಷ್ಟೊ ಉದಾಹರಣೆಗಳಿವೆ” ಎಂದರು.

“ನಮಗೆ ಪ್ರತ್ಯೇಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಮನವಿ ಮಾಡಿಕೊಂಡ ಮೇಲೆ, ಪರಿಶಿಷ್ಟ ಏರಿಯಾಗಳಿಗೆ ಕುಡಿಯುವ ನೀರಿನ ಜಲಜೀವನ ಯೋಜನೆಯನ್ನು ತಂದಿದ್ದು, ಖುಷಿಯ ವಿಚಾರ. ಆದರೆ ಒಂದು ಕೊಡ ನೀರು ತುಂಬಬೇಕಾದರೆ ಒಂದು ಗಂಟೆಯಾದರೂ ಕಾಯಬೇಕು. ಅಷ್ಟೊಂದು ನಿಧಾನವಾಗಿ ನೀರು ಬರುತ್ತದೆ. ಇನ್ನು ಗ್ರಾಮದ ಹೆಬ್ಬಾಗಿಲ ಬಳಿ ಬಸ್ ನಿಲ್ದಾಣವೇ ಇಲ್ಲ. ಪ್ರಯಾಣಿಕರು ರಸ್ತೆ ಮಗ್ಗುಲಲ್ಲೇ ಬಿಸಿಲು ಮಳೆಯೆನ್ನದೆ ಬಸ್‌ಗಳಿಗಾಗಿ ಕಾದು ಕುಳಿತುಕೊಳ್ಳುವ ಪರಿಸ್ಥಿತಿ ಇದೆ. ಅಲ್ಲೊಂದು ಬಸ್ ನಿಲ್ದಾಣ ಕಟ್ಟಿಸಬೇಕು” ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಇದನ್ನು ಓದಿದ್ದೀರಾ? ಧಾರವಾಡ | ಧಾರಾಕಾರ ಸುರಿದ ಮಳೆ: ಜನಜೀವನ ಅಸ್ಥವ್ಯಸ್ತ

“ನೆರೆ ಹಾವಳಿಗೆ ಸಿಲುಕಿ ಮನೆಗಳನ್ನು ಕಳೆದುಕೊಂಡಿರುವ ಫಲಾನುಭವಿಗಳಿಗೆ ಇನ್ನಾದರೂ ನ್ಯಾಯ ಸಿಗುತ್ತದೆಯೇ? ಅಧಿಕಾರಿ ವರ್ಗ, ಶಾಸಕರು, ಜಿಲ್ಲಾಡಳಿತ ಗಮನ ಹರಿಸುವರೆ ಕಾದು ನೋಡಬೇಕಿದೆ” ಎಂದು ಸ್ಥಳೀಯರು ತವಕಿಸುತ್ತಿದ್ದಾರೆ.

IMG 20240805 WA0207
ಶರಣಪ್ಪ ಗೊಲ್ಲರ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅವ್ಯವಸ್ಥೆಗಳ ಕೂಪವಾದ ಶಿರವಾಡ ತ್ಯಾಜ್ಯ ಘಟಕ; ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ ಉಪಲೋಕಾಯುಕ್ತ

ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ಶಿರವಾಡ ತ್ಯಾಜ್ಯ ವಿಲೇವಾರಿ ಘಟಕಕ್ಕೆ...

ವಿಟಿಯು ವಾರ್ಷಿಕ ಘಟಿಕೋತ್ಸವ: ಉತ್ತರ ಕನ್ನಡದ ಪ್ರತಿಭೆಗಳಿಗೆ ರಾಜ್ಯಮಟ್ಟದ ಗರಿ

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಾರ್ಷಿಕ ಘಟಿಕೋತ್ಸವದಲ್ಲಿ ಉತ್ತರ ಕನ್ನಡ ಜಿಲ್ಲೆಯ...

ಕೊಡಗು ವಿವಿ ಕುಲಪತಿ ಡಾ. ಅಶೋಕ್ ಸಂಗಪ್ಪ ಅಲೂರ್‌ಗೆ ಪ್ರತಿಷ್ಠಿತ ‘ದಿ AGRI100-2026’ ಪ್ರಶಸ್ತಿ

ಕೊಡಗು ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ್ ಸಂಗಪ್ಪ ಅಲೂರ್ ಅವರು ಭಾರತದ...

ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ವೇಳೆ ಸಿಲಿಂಡರ್‌ಗಳ ಸರಣಿ ಸ್ಫೋಟ

ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಭಾರೀ ಅನಾಹುತ‌ವೊಂದು ತಪ್ಪಿದೆ. ಕಗ್ಗದಾಸಪುರದ...